ರಾಮಕುಂಜ: ಕೊಯಿಲ ಗ್ರಾಮದ ಆತೂರು ನಿವಾಸಿ ಯಾಕೂಬ್ ಹಾಜಿ ಹೇಂತಾರು(92ವ.) ಅವರು ಜೂ.5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಯಾಕೂಬ್ ಹಾಜಿಯವರು ಆಲಂಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಲಂಕಾರು ಪ್ರಧಾನ ಕಚೇರಿ ಮತ್ತು ಕೊಯಿಲ ಶಾಖೆಯಲ್ಲಿ ಸುಮಾರು 45 ವರ್ಷಗಳಿಗೂ ಅಧಿಕ ಕಾಲ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕೆಲಸದಲ್ಲಿ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯ ಮೂಲಕ ಗುರುತಿಸಿಕೊಂಡಿದ್ದರು. ಮೃತರು ಆತೂರು ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸುಮಾರು 6 ವರ್ಷ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಸಲಹಾ ಸಮಿತಿ ಸದಸ್ಯರಾಗಿದ್ದರು. ಇತರೇ ಸಂಘ ಸಂಸ್ಥೆಗಳಲ್ಲಿಯೂ ಗುರುತಿಸಿಕೊಂಡು ಚಿರಪರಿಚಿತರಾಗಿದ್ದರು. ಮೃತ ಯಾಕೂಬ್ ಹಾಜಿಯವರು ಪುತ್ರರಾದ ಹಾಜಿ ಅಬ್ದುಲ್ ರಹಿಮಾನ್ ಮದನಿ, ಅಬ್ದುಲ್ ಗಫಾರ್ ಹಾಜಿ, ಪುತ್ರಿಯರಾದ ಅಲೀಮಮ್ಮ, ಆಯಿಷಾರನ್ನು ಅಗಲಿದ್ದಾರೆ.