ಪುತ್ತೂರು: ಲೋಕಸಭೆಗೆ ನಡೆದ ಚುನಾವಣೆಯಲ್ಲಿ ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 1,49,208 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿಗೆ 28,690 ಮತಗಳ ಲೀಡ್ ಬಂದಿದೆ. ಅದರಲ್ಲೂ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬೂತ್ ಸಂಖ್ಯೆ 49ರಲ್ಲಿ ಬಿಜೆಪಿ ಲೀಡ್ ಬಂದಿದೆ.
ಬದಲಾದ ಬೂತ್ ಸಂಖ್ಯೆಗಳು:
ವಿಧಾನಸಭಾ ಚುನಾವಣೆಯಲ್ಲಿ ಹಿರೇಬಂಡಾಡಿ ಗ್ರಾಮದಲ್ಲಿ ಬೂತ್ ಸಂಖ್ಯೆ 47, 48, 49 ಇದ್ದು, ಲೋಕಸಭಾ ಚುನಾವಣೆಯ ಸಂದರ್ಭ ಒಂದು ಬೂತ್ ಸಂಖ್ಯೆ 50 ಹೆಚ್ಚಾಗಿತ್ತು. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಬೂತ್ ಸಂಖ್ಯೆ 48ರಲ್ಲಿ ಮತ ಚಲಾಯಿಸಿದ್ದರು. ಲೋಕಸಭಾ ಚುನಾವಣೆ ಸಂದರ್ಭ ಅವರ ಬೂತ್ ಸಂಖ್ಯೆ 49ಕ್ಕೆ ಹೋಗಿತ್ತು. ಹಾಗಾಗಿ ಅವರು ಹಿರೇಬಂಡಾರಿ ಪಂಚಾಯತ್ ಸಮುದಾಯ ಭವನದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಅವರು ಬೂತ್ ಸಂಖ್ಯೆ 49ರಲ್ಲಿ ಬಿಜೆಪಿ 50 ಮತಗಳ ಲೀಡ್ ಪಡೆದಿತ್ತು. ಹೆಚ್ಚುವರಿಯಾದ ಬೂತ್ ಸಂಖ್ಯೆ 50ಕ್ಕೆ ಶಾಲೆಯಲ್ಲಿ ಮತಗಟ್ಟೆಯಿದ್ದು ಅಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು. ಬೂತ್ ಸಂಖ್ಯೆ 49ರಲ್ಲಿ 1371 ಮತಗಳ ಪೈಕಿ 1198 ಮತ ಚಲಾವಣೆಯಾಗಿತ್ತು. ಬಿಜೆಪಿ 879, ಕಾಂಗ್ರೆಸ್ 289, ಬಹುಜನ ಸಮಾಜ ಪಾರ್ಟಿ 3, ಕರುನಾಡ ಸೇವಕರ ಪಾರ್ಟಿ 2, ಉತ್ತಮ ಪ್ರಜಾಕೀಯ ಪಾರ್ಟಿ ೦, ಕರ್ನಾಟಕ ರಾಷ್ಟ್ರಸಮಿತಿ 1, ಪಕ್ಷೇತರ 4, ಪಕ್ಷೇತರ 3, ಪಕ್ಷೇತರ 3, ನೋಟಾ 14 ಚಲಾವಣೆಯಾಗಿದೆ.