ಶಾಲೆಗಳಲ್ಲಿ ರಾಜಕೀಯ ತರಬೇಡಿ: ಅಶೋಕ್ ರೈ
ಪುತ್ತೂರು: ಊರಿನ ಹಾಗೂ ಇತರೆ ದಾನಿಗಳ ನೆರವಿನಿಂದ ತಮ್ಮ ಗ್ರಾಮದಲ್ಲಿ ಪಾಳು ಬಿದ್ದ ಶಾಲೆಯನ್ನು ನವೀಕರಣ ಮಾಡಿದ್ದು ಅಭಿನಂದನಾರ್ಹ ಕಾರ್ಯಕವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಕೆದಿಲ ಅನುದಾನಿತ ಹಿ ಪ್ರಾ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಶೌಚಾಲಯ ನಿರ್ಮಾಣಕ್ಕೆ 5ಲಕ್ಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು.
ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದ ಶಿಕ್ಷ ಅತೀ ಅಗತ್ಯವಾಗಿದೆ. ಬಡವರ ಮಕ್ಕಳೂ ಇಂಗ್ಲೀಷ್ ಮಾತನಾಡಬೇಕು, ಒಳ್ಳೆಯ ಕೆಲಸವನ್ನು ಪಡೆಯಬೇಕು ಇಲ್ಲಿ ಶಿಕ್ಷಕರ ಕೊರತೆ ನೀಗಿಸುವಂತೆಯೂ ಶಿಕ್ಷಣ ಇಲಾಖೆಗೆ ಸೂಚನೆ ನೀಡಿರುವುದಾಗಿ ಶಾಸಕರು ಹೇಳಿದರು. ಕೆಪಿಎಸ್ ಸಿ ಮಾದರಿ ಶಾಲೆಗಳು ಎಲ್ಲಾ ಕಡೆ ಆರಂಭ ಮಾಡುವ ಬಗ್ಗೆ ಸರಕಾರದ ಆಲೋಚನೆ ಇದೆ. 13500 ಶಿಕ್ಷಕರನ್ನು ಸರಕಾರ ನೇಮಕ ಮಾಡಿದೆ. ಸರಕಾರಿ ಶಾಲೆಯಲ್ಲಿ ಎಲ್ಲೂ ಶಿಕ್ಷಕರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಶಾಲೆಗಳಲ್ಲಿ ರಾಜಕೀಯ ತರಬೇಡಿ
ಶಾಲೆ, ದೇವಸ್ಥಾನಗಳಲ್ಲಿ ರಾಜಕೀಯ ತರಬಾರದು. ಈ ಎರಡೂ ಕಡೆಗಳಲ್ಲಿ ರಾಜಕೀಯ ಮಾಡಿದ್ರೆ ಅವುಗಳು ಹಾಳಾಗುತ್ತದೆ ರಾಜಕೀಯದಲ್ಲಿದ್ದವರು ಯಾರೂ ಶಿಕ್ಷಣ ಸಂಸ್ಥೆಯಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ಮಾಜಿ ಶಾಸಕರಾದ ಸಂಜೀವ ಮಠಂದೂರು ಮಾತನಾಡಿ ಕೆದಿಲದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.ಇಲ್ಲಿನ ಹಳೆ ವಿದ್ಯಾರ್ಥಿಗಳ ಪರಿಶ್ರಮದಿಂದ ಶಾಲೆಗೆ ಹೊಸ ಕಳೆ ಬಂದಿದೆ. ಶಿಕ್ಷಣಕ್ಕೆ ನಾವು ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇದೆ , ಇಲ್ಲಿನ ಹಳೆ ವಿದ್ಯಾರ್ಥಿಗಳ ಪರಿಶ್ರಮದಿಂದ ವಿದ್ಯಾ ದೇಗುಲವೊಂದು ತಲೆ ಎತ್ತಿ ನಿಂತಿದೆ. ಮಕ್ಕಳನ್ನೇ ನಾವು ಆಸ್ತಿ ಮಾಡಬೇಕು ಎಂದು ಕಲಾಂ ರವರು ಹೇಳಿದ್ದು ಎಲ್ಲ ಕಾಲಕ್ಕೂ ಸ್ವೀಕರಾರ್ಹವಾಗಿದೆ ಎಂದು ಹೇಳಿದರು. ಕನ್ನಡ ಮತ್ತು ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭ ಮಾಡಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎನ್, ಕೆದಿಲ ಗ್ರಾ.ಪಂ ಅಧ್ಯಕ್ಷ ಹರೀಶ ವಾಲ್ತಜೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಜಿತ್ ಕುಮಾರ್, ಕರ್ನಾಟಕ ಬ್ಯಾಂಕ್ ಮು. ಕಾರ್ಯನಿರ್ವಾಹಣಾಧಿಕಾರಿ ಶ್ರೀಹರಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ್ ಭಟ್, ಯೋಜನಾಧಿಕಾರಿ.ಧ.ಗ್ರಾ ಯೋಜನೆಯ ರಮೇಶ್, ಕೆದಿಲ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ್ ಭಟ್, ಅಂಡೆಪುಣಿ ವಿಶ್ರಾಂತ ಅಧ್ಯಾಪಕ ಕೆ. ಸುಭ್ರಾಯ ಭಟ್, ಮುಖ್ಯಗರು ಬಬಿತ, ಕ್ರೀಡಾ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್,ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು,ಉಪಸ್ಥಿತರಿದ್ದರು.