ಕೋಡಿಂಬಾಡಿ ಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು: ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‌ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಮಂತ್ರಿ ಮಂಡಲ ರಚಿಸಲಾಯಿತು.‌ ಮೊಬೈಲ್ ನಲ್ಲಿ ಇ. ವಿ.ಎಂ.ಆಪ್ ಬಳಸಿ ಮಕ್ಕಳಿಗೆ ಬ್ಯಾಲೆಟ್ ಮತ್ತು ಇ.ವಿ.ಎಂ.ಗಳಲ್ಲಿ ಮತ ಚಲಾಯಿಸುವ ವಿಧಾನದ ಬಗ್ಗೆ ವಿವರಿಸಿ ನಂತರ ಮತ ಚಲಾಯಿಸಲು ಅವಕಾಶ ನೀಡಲಾಯಿತು.

ಶಾಲೆಯ ನಾಯಕಿಯಾಗಿ 7ನೇ ತರಗತಿಯ ಗೌತಮಿ ಮತ್ತು ಉಪನಾಯಕನಾಗಿ 6ನೇ ತರಗತಿಯ ಪುನೀತ್ ಕುಮಾರ್ ಆಯ್ಕೆಯಾದರು. ವಿರೋಧ ಪಕ್ಷದ ನಾಯಕನಾಗಿ ಕೃತಿಕ್ (7ನೇ), ರಕ್ಷಣಾ ಮಂತ್ರಿಗಳಾಗಿ ಸುಶಾನ್ (7ನೇ) ಮತ್ತು ಡಿಕೇಶ್ (6ನೇ ), ನೀರಾವರಿ ಮಂತ್ರಿಗಳಾಗಿ ಅನೀಶ್ ಗೌಡ (7ನೇ), ಪ್ರದ್ವಿತ್ (6ನೇ), ತೋಟಗಾರಿಕಾ ಮಂತ್ರಿಗಳಾಗಿ ಉಷಾಕುಮಾರಿ (7ನೇ), ವಿಹಾನ್ (6ನೇ), ವಾರ್ತಾ ಮಂತ್ರಿಗಳಾಗಿ ಮಾನಸ (7ನೇ), ಶರಣ್ಯ(6ನೇ) ಸ್ವಚ್ಛತಾ ಮಂತ್ರಿಗಳಾಗಿ ನೀಹಾ(5ನೇ), ವಿಶಾಖ (6ನೇ), ಕ್ರೀಡಾಮಂತ್ರಿಗಳಾಗಿ ಚೈತ್ರೆಶ್ (7ನೇ), ಸಾತ್ವಿಕ್(6ನೇ), ಶಿಕ್ಷಣ ಮಂತ್ರಿಗಳಾಗಿ ಮಾನ್ವಿ ಶೆಟ್ಟಿ (7ನೇ), ಸಮರ್ಥ್ (6ನೇ), ಆರೋಗ್ಯ ಮಂತ್ರಿಗಳಾಗಿ ಯಶ್ವಿತ್ (7ನೇ)‌ ಮತ್ತು ಧನ್ವಿತ್(5ನೇ), ಆಹಾರ ಮಂತ್ರಿಗಳಾಗಿ ಲೇಖನ್ (7ನೇ), ಅರುಶ್ (6ನೇ), ಸಾಂಸ್ಕೃತಿಕ ಮಂತ್ರಿಗಳಾಗಿ ಜಶ್ಮಿ(6ನೇ), ರಿತಿಕಾ(5ನೇ) ಹಾಗೂ ಸಭಾಪತಿಯಾಗಿ ಹನ್ಶಿಕ್ ಆಯ್ಕೆಯಾದರು.

LEAVE A REPLY

Please enter your comment!
Please enter your name here