




ವಿಟ್ಲ: ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ವಿಟ್ಲ ಠಾಣಾ ಪೊಲೀಸರು ಮೂವರು ಆರೋಪಿಗಳ ಸಹಿತ ನಗದು ಹಾಗೂ ಐದು ಕೋಳಿಗಳನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ನಡೆದಿದೆ.



ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಉಮೇಶ (38 ವ.), ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಅಣ್ಣು (38 ವ.), ಬಂಟ್ವಾಳ ತಾಲೂಕು ವೀರಕಂಬ ನಿವಾಸಿ ಉಮೇಶ್ (30 ವ.) ಪೊಲೀಸರ ವಶವಾದವರು.





ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ನ.೩೦ರಂದು ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದವರ ಪೈಕಿ ಮೂವರು ಆರೋಪಿಗಳು, ಆಟಕ್ಕೆ ಬಳಸಿದ್ದ 2,100 ರೂ. ನಗದು ಐದು 5 ಕೋಳಿಗಳು, ಹಾಗೂ ಕೋಳಿ ಬಾಳ್ ಗಳನ್ನು ಪೊಲೀಸರು ವಶಕ್ಕೆ ವಪಡೆದಿದ್ದಾರೆ. ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










