ಜೂ.14: ಕರುನಾಡಿನಾದ್ಯಂತ ತುಳು ಸಿನೆಮಾ ‘ತುಡರ್’ ಬಿಡುಗಡೆ – ಭಾರೆತ್ ಸಿನೆಮಾಸ್‌ನಲ್ಲಿ ಪ್ರದರ್ಶನ | ಸಿನಿರಸಿಕರಿಗೆ ಭರ್ಜರಿ ಮನರಂಜನೆ | ಅದ್ದೂರಿ ಸಿನೆಮಾ

0

ಪುತ್ತೂರು: ‘ದ ಫೈರ್ ವಿಥ್ ಇನ್’ ಟ್ಯಾಗ್‌ಲೈನ್ ಹೊಂದಿರುವ ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ಅದ್ದೂರಿ ತಾರಾಗಣದ “ತುಡರ್’ ತುಳು ಸಿನೆಮಾ ಜೂ.14ರಂದು ಕರುನಾಡಿನಾದ್ಯಂತ ತೆರೆ ಕಾಣಲಿದ್ದು, ಈ ಚಿತ್ರವು ಪುತ್ತೂರು ಜಿ.ಎಲ್ ಒನ್ ಮಾಲ್‌ನಲ್ಲಿನ ಭಾರತ್ ಸಿನೆಮಾಸ್‌ನಲ್ಲಿ ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಾಯಕನಟ ಸಿದ್ಧಾರ್ಥ್ ಶೆಟ್ಟಿರವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ತುಡರ್ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಈ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ ಎಂದ ಅವರು ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನೆಮಾಸ್, ಪಿವಿಆರ್, ಸಿನೆಪೊಲಿಸ್, ಸುರತ್ಕಲ್‌ನಲ್ಲಿ ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್ ಸಿನೆಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನೆಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನೆಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನೆಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಸಿನೆಮಾಕ್ಕೆ ನಿರ್ಮಾಪಕರಾದ ವಿಲ್ಸನ್ ರೆಬೆಲ್ಲೊ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಬಂಡವಾಳ ಹೂಡಿದ್ದಾರೆ. ತೇಜೇಶ್ ಪೂಜಾರಿ ಹಾಗೂ ಎಲ್ಸನ್ ಮಸ್ಕರೇನ್ಹಸ್ ನಿರ್ದೇಶಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಮೋಹನ್‌ರಾಜ್ ಅವರದ್ದು. ತಾರಾಗಣದಲ್ಲಿ ನಾಯಕ ನಟ ಸಿದ್ಧಾರ್ಥ್ ಶೆಟ್ಟಿ, ನಾಯಕ ನಟಿ ದೀಕ್ಷಾ ಭೀಷೆ, ತುಳುನಾಡಿನ ಮಾಣಿಕ್ಯ ಅರವಿಂದ್ ಬೋಳಾರ್, ಪ್ರಜ್ವಲ್ ಬಂಬ್ರಾಣ, ಹರ್ಷಿತಾ ಶೆಟ್ಟಿ, ಅನ್ವಿತ ಸಾಗರ್, ಸದಾಶಿವ ಅಮೀನ್, ಮೈತಿದಿ ಖ್ಯಾತಿಯ ರೂಪಾ ವರ್ಕಾಡಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಅಶೋಕ್ ಬಿ.ರವರಂತಹ ಪ್ರಖ್ಯಾತ ಕಲಾವಿದರು ಸಿನೆಮಾದಲ್ಲಿದ್ದಾರೆ ಎಂದರು. ನಿರ್ಮಾಪಕ ವಿಲ್ಸನ್ ರೆಬೆಲ್ಲೋ, ವಿದ್ಯಾ ಸಂಪತ್, ಪ್ರಜ್ವಲ್ ಶೆಟ್ಟಿ, ಸಂಪತ್ ಕರ್ಕೇರ, ಚಿತ್ರದ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಪ್ರೀಮಿಯರ್ ಶೋ ಸೂಪರ್ ಹಿಟ್..
ತುಳು ಚಿತ್ರರಂಗದಲ್ಲಿಯೇ ಸಿನಿಪ್ರೇಕ್ಷಕರ ಮನಸೂರೆಗೊಂಡ ಸಿನೆಮಾ, ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಸಿನೆಮಾಗಳಂತೆ ಅದ್ದೂರಿತನದಲ್ಲಿ ನಿರ್ಮಾಣಗೊಂಡ ರಿಚ್ ಮಾಸ್ ಸಿನೆಮಾ, ತುಳು ಚಿತ್ರರಂಗದ ಬಹು ನಿರೀಕ್ಷೆಯ, ಸಾಮಾಜಿಕ, ಸಾಂಸಾರಿಕ, ಸಸ್ಪೆನ್ಸ್ ಹಾಗೂ ಅದ್ದೂರಿ ತಾರಾಗಣದ ಮಾಸ್ ಸಿನೆಮಾ “ತುಡರ್” ಚಿತ್ರದ ಪ್ರೀಮಿಯರ್ ಶೋ ಜೂ.೭ ರಂದು ಪುತ್ತೂರಿನ ಜಿ.ಎಲ್.ವನ್ ಮಾಲ್‌ನಲ್ಲಿನ ಭಾರತ್ ಸಿನೆಮಾಸ್‌ನಲ್ಲಿ ಏಕಕಾಲದಲ್ಲಿ ಎರಡು ಶೋ ಪ್ರದರ್ಶನಗೊಂಡಿದ್ದು, ಹೌಸ್‌ಫುಲ್ ಪ್ರದರ್ಶನದೊಂದಿಗೆ ಸಿನಿಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

LEAVE A REPLY

Please enter your comment!
Please enter your name here