ಸವಣೂರು: ಎಸ್ಸೆಸೆಲ್ಸಿ ಪರೀಕ್ಷೆ: ಶೇಕಡಾ 100 ಫಲಿತಾಂಶ ಪಡೆದ ಸ. ಪ್ರೌಢ ಶಾಲೆಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ

0

ಸಮರ್ಥ ಜನ ಸೇವಾ ಟ್ರಸ್ಟ್(ರಿ) ಪುಣ್ಚಪ್ಪಾಡಿ ಇದರ ವತಿಯಿಂದ ನಡೆದ ಕಾರ್ಯಕ್ರಮ

ಸವಣೂರು: ಸಮರ್ಥ ಜನಸೇವಾ ಟ್ರಸ್ಟ್(ರಿ) ಪುಣ್ಚಪ್ಪಾಡಿ ಇದರ ವತಿಯಿಂದ ಸರಕಾರಿ ಪ್ರೌಢ ಶಾಲೆ ಸವಣೂರು ಇದರ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕವೃಂದದವರಿಗೆ ಅಭಿನಂದಿಸಲಾಯಿತು.

ಸಮರ್ಥ ಜನಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ಗಿರಿಶಂಕರ ಸುಲಾಯ ಅವರು ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಸವಣೂರು ಪ್ರೌಢ ಶಾಲೆಯು ಸರಕಾರಿ ಶಾಲೆಯಾಗಿದ್ದರೂ ಸಹ ಶೇಕಡಾ 100ರಷ್ಟು ಫಲಿತಾಂಶ ಪಡೆದಿರುವುದು ಊರಿಗೆ ಮಾತ್ರವಲ್ಲದೆ ಇತರ ಸರಕಾರಿ ಶಾಲೆಗಳಿಗೂ ಮಾದರಿ ಎಂದರು. ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸಮರ್ಥ ಜನಸೇವಾ ಟ್ರಸ್ಟ್ ಅಭಿನಂದಿಸುತ್ತದೆ ಎಂದರು.

 ಸವಣೂರು ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ರಘು ಬಿ ಆರ್ ಮಾತನಾಡಿ ,ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ ಬಂದಿರುವುದು ಅತ್ಯಂತ ಖುಷಿಯನ್ನು ಕೊಟ್ಟಿದೆ.ಇದರ ಹಿಂದೆ ಎಲ್ಲಾ ಶಿಕ್ಷಕವೃಂದದವರ ಸತತ ಪ್ರಯತ್ನ ಮತ್ತು ಊರಿನವರ ಸಹಕಾರದಿಂದ ಯಶಸ್ವಿಯಾಗಿದೆ ಎಂದರು.

ಸಮರ್ಥ ಜನಸೇವಾ ಟ್ರಸ್ಟ್‌ ನ ಕಾರ್ಯದರ್ಶಿ ಮಹೇಶ್ ಕೆ.ಸವಣೂರು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಬದುಕನ್ನು ನೀಡಬೇಕೆಂಬ ಉದ್ದೇಶದಿಂದ ರಜೆಯ ಸಮಯದಲ್ಲೂ ಸಹ ಬಂದು ಪ್ರೋತ್ಸಾಹಿಸುವ ಕೆಲಸವನ್ನು  ಮಾಡಿರುವ ಕಾರಣ ಶೇಕಡಾ 100 ಫಲಿತಾಂಶ ಬರಲು ಕಾರಣವಾಯಿತು.ಇದರ ಪ್ರಯೋಜನ ಪಡೆದುಕೊಂಡ ವಿದ್ಯಾರ್ಥಿಗಳು ಶಿಕ್ಷಕರನ್ನು ಶಾಲೆಯನ್ನು ಮರೆಯಬಾರದು ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಧಾಕೃಷ್ಣರವರು ಅಧ್ಯಕ್ಷತೆ ವಹಿಸಿದರು.ನ್ಯಾಯವಾದಿ ಪ್ರವೀಣ್ ಬಂಬಿಲದೋಳ,ಶಿಕ್ಷಕರಾದ ಕಿಶನ್ ಬಿ ವಿ, ರೀನಾ ಎಂ.ಡಿ, ಸರಸ್ವತಿ ಎಂ, ನಯನ ಜಿ ಪಾಲೆಕ್ಕಾರ್, ಕವಿತಾ ಸಿ ಕೆ, ಮಮಚ್ಚನ್ ಎಂ, ಪವಿತ್ರ ಉಡುಪ ಕೆ, ದಿವ್ಯ ಡಿ ಸಿ, ಚರಿತ ಕೆ ಬಿ, ರೇಖಾ ಎಂ, ಶಾಲಾ ಸಿಬ್ಬಂದಿ ವಿನಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಕುಮಾರಿ ಹರ್ಷಿಕಾ ಸ್ವಾಗತಿಸಿ,ರಕ್ಷಾ  ವಂದಿಸಿದರು.ಪ್ರಣೀತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here