ಹೊಸಗದ್ದೆ ಶಾಲಾ ಮಂತ್ರಿಮಂಡಲ – ನಾಯಕಿ: ಗಹನಾ, ಉಪನಾಯಕ: ಮಹಮ್ಮದ್ ಯಾಸೀನ್

0

ಉಪ್ಪಿನಂಗಡಿ: ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹೊಸಗದ್ದೆ ಪೆರಿಯಡ್ಕ ಇಲ್ಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ರಚನೆ ಮಾಡಲಾಯಿತು. 7ನೇ ತರಗತಿ ವಿದ್ಯಾರ್ಥಿನಿ ಗಹನಾ ಎ. ಶಾಲಾ ನಾಯಕಿಯಾಗಿ ಆಯ್ಕೆಗೊಂಡರು. ಶಾಲಾ ಉಪನಾಯಕನಾಗಿ 6ನೇ ತರಗತಿಯ ಮಹಮ್ಮದ್ ಯಾಸೀನ್ ಆಯ್ಕೆಯಾದರು.

1 ರಿಂದ 7ನೇ ತರಗತಿಯ ಮಕ್ಕಳಿಗೆ ಮತದಾನದ ಅರಿವು ಮೂಡಿಸುವ ಸಲುವಾಗಿ ಚುನಾವಣಾ ಪ್ರಕ್ರಿಯೆ ಮೂಲಕ ಮಂತ್ರಿ ಮಂಡಲವನ್ನು ಆಯ್ಕೆ ಮಾಡಲಾಯಿತು. ಮಂತ್ರಿಮಂಡಲದ ರಚನೆ ಜತೆಗೆ ಪ್ರಮಾಣವಚನ ಕಾರ್ಯಕ್ರಮವೂ ನಡೆಸಲಾಯಿತು. ಗೃಹಮಂತ್ರಿ-ಜಯಪ್ರೀತ್, ಹಣಕಾಸುಮಂತ್ರಿ-ಖದೀಜಾ ಸಲ್ವಾ, ಪರಿಸರ ಮಂತ್ರಿ- ಶ್ರೇಯಸ್, ಶಿಕ್ಷಣ ಮಂತ್ರಿ-ಕೌಶಿಕ, ಆರೋಗ್ಯ ಮಂತ್ರಿ-ಹಫೀಳಾ, ತೋಟಗಾರಿಕೆ ಮಂತ್ರಿ- ಶ್ರೇಯಸ್, ಕೃಷಿ ಮಂತ್ರಿ- ಯಶ್ವಿನ್ ಗೌಡ, ಸಾಂಸ್ಕೃತಿಕ ಮಂತ್ರಿ-ದೃತಿ, ಕ್ರೀಡಾಮಂತ್ರಿ-ಗಹನ, ಗ್ರಂಥಾಲಯಮಂತ್ರಿ- ಅಶಿಮಾ, ವಿಜ್ಞಾನ-ತಂತ್ರಜ್ಞಾನ ಮಂತ್ರಿ- ಅಶ್‌ಅಲ, ಆಹಾರ ಮಂತ್ರಿ-ಸನ್ನಿಧಿ, ನೀರಾವತಿ ಮಂತ್ರಿ-ತಶ್ವಿನ್, ಜಯಪ್ರಿತ, ವಾರ್ತಾ ಮಂತ್ರಿ-ಝೈಪಾ, ಕಾನೂನು ಮಂತ್ರಿ-ಶಾಕೀರಾ, ವಿರೋಧ ಪಕ್ಷದ ನಾಯಕ- ತಶ್ವಿನ್ ಆಯ್ಕೆಯಾದರು. ಶಾಲಾ ಮುಖ್ಯಗುರು ವಿದ್ಯಾ ಕೆ, ಶಿಕ್ಷಕಿಯರಾದ ಮಾಲತಿ ಕೆ, ಪುನಂತೇಶ್ವರಿ, ಅತಿಥಿ ಶಿಕ್ಷಕಿಯರಾದ ಚಿತ್ರಾವತಿ ಮತ್ತು ಪವಿತ್ರಾ ಈ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here