ಪುತ್ತೂರು: ವಿಶ್ವಸೌಧ ಆಡಳಿತ ಕಛೇರಿ ಸಭಾಂಗಣ, ಕೊಟ್ಟಾರ ಚೌಕಿಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜೂ.11ರಂದು ಜರಗಿತು. ನಿರ್ದೇಶಕರಾದ ವೈ.ವಿ.ವಿಶ್ವಜ್ಞಮುರ್ತಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯರು ವಹಿಸಿದ್ದರು. ಅಮೂಲ್ಯ ಸಮಯ ವ್ಯಯಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರನ್ನು ಸಂಸ್ಥೆಯ ಉಪಾಧ್ಯಕ್ಷ ಎ. ಆನಂದ ಆಚಾರ್ಯರು ಸ್ವಾಗತಿಸಿದರು.
ಸಂಸ್ಥೆಯ ಅಭಿವೃದ್ಧಿ ಬಗ್ಗೆ ಪ್ರಾಸ್ತಾವಿಕವಾಗಿ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಇವರು ಮಾತನಾಡಿದರು. ಮುಖ್ಯ ಅತಿಥಿಗಳು ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸುಮಾರು 465 ಸಸಿ ವಿತರಣೆ ಮಾಡಲಾಯಿತು. ನಿರ್ದೇಶಕರಾದ ರೋಹಿಣಿ ಎಂ.ಪಿ.ಯವರು ಪಪ್ಪಾಯ ಹಾಗೂ ರಾಮಫಲ ಬೀಜಗಳನ್ನು ನೀಡಿ ಸಹಕರಿಸಿದರು. ವಲಯಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಪ್ರತೀ ವರ್ಷ ಸಸಿ ವಿತರಿಸುವ ಮೂಲಕ ಪರಿಸರ ಸಂರಕ್ಷಣೆ ವೂಡಿರುವುದಕ್ಕೆ ಶ್ಲಾಘನೆಗೈದರು.ಇದು ಕೇವಲ ಅರಣ್ಯ ಇಲಾಖೆಗೆ ಸಂಬಂಧಿಸದೆ ಎಲ್ಲರಲ್ಲೂ ಗಿಡ ನೆಡುವ ಮನೋಭಾವ ಬೆಳೆಸಬೇಕೆಂದರು. ರೇಣುಕಾ, ತೋಟಗಾರಿಕಾ ಸಹಾಯಕರು ಕಾರ್ಯಕ್ರಮದ ಬಗ್ಗೆ ಪ್ರಶಂಸೆಗೈದರು. ಕೋಡಿಕಲ್ ವಾರ್ಡ್ ನ ಸದಸ್ಯರಾದ ಕಿರಣ್‌ಕುಮಾರ್ ಮಾತನಾಡಿ ನಾವು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಇತರರಿಗೂ ನೆಡುವಂತೆ ನಿರ್ದೇಶನ ನೀಡಬಹುದು ಎಂದರು. ದ.ಕ. ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್. ಹರೀಶ್ ಮಾತನಾಡಿ ʼಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸು ಜವಾಬ್ದಾರಿಯುತ ಕೆಲಸ ಮಾಡಿರುತ್ತೀರಿʼ ಎಂದರು. ಜಗದೀಶ್ ಆಚಾರ್ಯ ಕೋಡಿಕಲ್ ಮಾತನಾಡಿ ಸಂಸ್ಥೆಯು ನಡೆಸಿದ ಈ ಸಮಾಜಮುಖಿ ಕೆಲಸಕ್ಕೆ ಶುಭ ಹಾರೈಸಿದರು.
ನಿರ್ದೇಶಕರುಗಳಾದ ಕೆ.ಯಜ್ಞೇಶ್ವರಆಚಾರ್ಯ, ವಿ.ಜಯಆಚಾರ್. ಕೆ. ಶಶಿಕಾಂತ ಆಚಾರ್ಯ, ಮಲ್ಲಪ್ಪಎನ್. ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಪ್ರಕಾಶ ಆಚಾರ್ಯ ಕೆ., ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್., ಹಾಗೂ ಸದಸ್ಯರು, ಗ್ರಾಹಕರು, ನಿವೃತ್ತ ಸಿಬ್ಬಂದಿಗಳು ಮತ್ತು ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿರ್ದೇಶಕರಾದ ಕೆ.ಪ್ರಕಾಶ ಆಚಾರ್ಯ ಧನ್ಯವಾದಗೈದರು.ಉಷಾ ಮನೋಜ್ ನಿರೂಪಣೆಗೈದರು.