ಉಪ್ಪಿನಂಗಡಿ: ಸಾರ್ವತ್ರಿಕ ಚುನಾವಣೆ ವಿಧಾನಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹಾಗೂ ಎಳೆವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ಉದ್ದೇಶದಿಂದ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಜೂನ್ 11 ರಂದು ಶಾಲಾ ಸಂಸತ್ತಿನ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಚುನಾವಣೆಯ ಮುಂಚಿತವಾಗಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. ಸೂಕ್ತ ಅಭ್ಯರ್ಥಿಗಳು ನಾಮಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದರು. ನಂತರ ಅಭ್ಯರ್ಥಿಗಳು ಕೆಲವು ಆಶ್ವಾಸನೆಗಳನ್ನು ನೀಡಿ ಮತ ಯಾಚಿಸಿದರು. ಮತದಾನದ ದಿನ ಮೊಬೈಲ್ ತಂತ್ರಜ್ಞಾನದ ಮೂಲಕ ಮತದಾನ ಮಾಡಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಶಾಲಾ ಸಂಸತ್ತಿನ ಪ್ರಧಾನಮಂತ್ರಿಯಾಗಿ ನಿಹಾಲ್ ಎಚ್ ಶೆಟ್ಟಿ (10 ನೇ ತರಗತಿ) ಗೃಹ ಮಂತ್ರಿಯಾಗಿ ತೃಷಾ ವಿ (10 ನೇ ತರಗತಿ), ಸಂವಹನ ಮಂತ್ರಿಯಾಗಿ ಫಾಮಿಯಾ (10 ನೇ ತರಗತಿ) , ಶಿಕ್ಷಣ ಮಂತ್ರಿಯಾಗಿ ಕವೀಶ್ ಬಿ.ಕೆ (9 ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಸಾನ್ವಿ (9 ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಮೋಹಿತ್ ಡಿ ಗೌಡ(10 ನೇ ತರಗತಿ), ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ಜಿತೇಶ್ ಎಸ್. ವಿ (8 ನೇ ತರಗತಿ), ಆರೋಗ್ಯ ಮತ್ತು ಸ್ವಚ್ಚತಾ ಮಂತ್ರಿಯಾಗಿ ವಿನ್ಯಾ ಪಿ.ಸಿ (8 ನೇ ತರಗತಿ) ಇವರು ಚುನಾಯಿತರಾದರು ಹಾಗೂ ಸಹಾಯಕ ಮಂತ್ರಿಗಳಾಗಿ ನಿಷ್ಕಾ ಎಚ್ ಶೆಟ್ಟಿ, ಆಕಾಂಕ್ಷ ಜೆ, ಆದಿತ್ಯ ಕೃಷ್ಣ ಡಿ, ಹಸ್ತ ಕೆ. ಸಿ, ಪ್ರಾಪ್ತಿ ಪಿ ಶೆಟ್ಟಿ, ಶಿಶಿರ್ ಜೆ ಸಾಲ್ಯಾನ್, ಚಂದಸ್ ಜಿ, ಅನುಷ್ಕಾ ಜೆ. ಆಯ್ಕೆಯಾಗಿರುತ್ತಾರೆ.
ಅಂತಿಮವಾಗಿ ಶಾಲೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಚುನಾವಣಾ ಫಲಿತಾಂಶವನ್ನು ಘೋಷಿಸಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಸಮಾಜ ವಿಜ್ಞಾನ ಶಿಕ್ಷಕಿಯರಾದ ಶಶಿಕಲಾ ಹಾಗೂ ಶ್ವೇತಾ ಚುನಾವಣಾ ಆಯುಕ್ತರಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮತಗಟ್ಟೆಯ ಅಧಿಕಾರಿಗಳಾಗಿ ಶಿಕ್ಷಕ – ಶಿಕ್ಷಕೇತರ ವೃಂದದವರು ಸಹಕರಿಸಿದರು. ವಿಜೇತರಾದ ಎಲ್ಲಾ ವಿದ್ಯಾರ್ಥಿ ನಾಯಕರನ್ನು ಸಂಸ್ಥೆಯ ಸಂಚಾಲಕರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದರು.