ಕುಮಾರಮಂಗಲ ಶಾಲಾ ಮಂತ್ರಿ ಮಂಡಲ ರಚನೆ

0

ಸವಣೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಸ.ಹಿ.ಪ್ರಾ.ಶಾಲಾ 2024-25ನೇ ಸಾಲಿನ ಶಾಲಾ ಮಂತ್ರಿಮಂಡಲ ರಚಿಸಲಾಯಿತು. ಶಾಲಾ ನಾಯಕಿಯಾಗಿ 7ನೇ ತರಗತಿಯ ರಶ್ಮಿ ಆರ್ ಉಪನಾಯಕನಾಗಿ 7 ನೇ ತರಗತಿಯ ಶ್ರವಣ್ ಆಯ್ಕೆಯಾದರು.

ವಿಪಕ್ಷ ನಾಯಕಿಯಾಗಿ ನಿಶ್ಮಿತಾಕೆ., ಆರೋಗ್ಯ ಮಂತ್ರಿಯಾಗಿ ವೈಷ್ಣವಿ ಎನ್., ಕ್ರೀಡಾಮಂತ್ರಿಯಾಗಿ ಧನ್ವಿತ್ ಪಿ.ಕೆ., ನೀರಾವರಿ ಮಂತ್ರಿಯಾಗಿ ಆಶ್ಲೇಷ್, ವಾರ್ತಾ ಮಂತ್ರಿಯಾಗಿ ವೈಭವಿ ಎನ್., ತೋಟಗಾರಿಕಾ ಮಂತ್ರಿಯಾಗಿ ಯಜ್ಞಶ್ರೀ, ಗ್ರಂಥಾಲಯ ಮಂತ್ರಿಯಾಗಿ ಲತಿಕಾ ಎಸ್., ಕಾನೂನು ಮಂತ್ರಿಯಾಗಿ ಯಶಸ್ವಿ, ಶಿಕ್ಷಣ ಮಂತ್ರಿಯಾಗಿ ವಿಜೀಶ್ ಆಯ್ಕೆಯಾದರು. ಶಾಲಾ ಮುಖ್ಯಶಿಕ್ಷಕಿ ಕವಿತಾ ಎನ್ ಪ್ರಮಾಣ ವಚನ ಬೋಧಿಸಿದರು. ಪದವೀಧರ ಶಿಕ್ಷಕರಾದ ಸಂತೋಷ್ ಟಿ.ಎನ್. ಹಾಗೂ ಶಿಕ್ಷಕ ಶ್ಯಾಮ್ ಕೆ.ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here