*ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಜೊತೆಗೆ ಕೌಶಲ್ಯಯುತ ಕಂಪ್ಯೂಟರ್ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ ಕಾರ್ಯ ಶ್ಲಾಘನೀಯ: ಸಿ ಎ ಗಣೇಶ್ ಭಟ್
*ಗ್ರಾಮೀಣ ಮಟ್ಟದಲ್ಲಿ ಸರಕಾರಿ ಅಧಿಕಾರಿಗಳ ಬರವನ್ನು ವಿ. ಅಕಾಡೆಮಿ ನೀಗಿಸುತ್ತಿದೆ: ಲ. ವೀರಪ್ಪ ಕಣ್ಕಲ್
ಪುತ್ತೂರು: ಇಂದಿನ ಯುವ ಪೀಳಿಗೆಯ ಜೀವನದ ಆಶಾಕಿರಣವಾಗಿ 130ಕ್ಕೂ ಅಧಿಕ ಸ್ಪರ್ಧಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಸರಕಾರಿ ಉದ್ಯೋಗ ಲಭಿಸುವಂತೆ ಮಾಡಿದ ವಿದ್ಯಾಮಾತಾ ಅಕಾಡೆಮಿಯು ಕಳೆದ ಕೆಲವು ತಿಂಗಳುಗಳ ಹಿಂದೆ ತನ್ನ ಶಾಖೆಯನ್ನು ಸುಳ್ಯಕ್ಕೆ ವಿಸ್ತರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡುತ್ತಾ ಸುಳ್ಯದ ಹೃದಯ ಭಾಗದಲ್ಲಿ ಕಾರ್ಯಾಚರಿಸುತಿದ್ದು, ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆಗೆ ಕೌಶಲ್ಯಯುಕ್ತ ಉದ್ಯೋಗಾಧರಿತವಾದ ಕಂಪ್ಯೂಟರ್ ಶಿಕ್ಷಣವನ್ನು ಪ್ರಾರಂಭಿಸಿದೆ.
ಕಂಪ್ಯೂಟರ್ ತರಗತಿಗಳ ಉದ್ಘಾಟನೆಯನ್ನು ಸುಳ್ಯದ ಖ್ಯಾತ ಚಾರ್ಟೆಡ್ ಅಕೌಂಟೆಂಟ್ ಆದ ಸಿ ಎ ಗಣೇಶ್ ಭಟ್ ರವರು ಜೂ.10ರಂದು ನೆರವೇರಿಸಿ ವಿದ್ಯಾಮಾತಾ ಅಕಾಡೆಮಿಯ ಸಾಧನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ ಉದ್ಯೋಗಾದಾರಿತವಾಗಿ ನೀಡುತ್ತಿರುವ ಸೇವೆಯು ಎಲ್ಲರಿಗೂ ಲಭಿಸುವಂತಾಗಲಿ ಎಂದು ಸಂಸ್ಥೆಯ ಏಳಿಗೆಗೆ ಶುಭ ಹಾರೈಸಿದರು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸುಳ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ವೀರಪ್ಪ ಕಣ್ಕಲ್ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಿ ಹಲವಾರು ಯುವ ಜನತೆಗೆ ಸರಕಾರಿ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿ, ಇದರ ಜೊತೆಗೆ ಕೌಶಲ್ಯಯುತ ತರಬೇತಿ ನೀಡುತ್ತಿರುವ ಸಂಸ್ಥೆಯ ಸಾಧನೆ ಅಮೋಘವೆಂದು ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿ ,ಪ್ರಾಸ್ತವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸುಳ್ಯ ವಿದ್ಯಾಮಾತಾ ಅಕಾಡೆಮಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಾವತಿ ಬಡ್ಡಡ್ಕ, ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯ ಚಂದ್ರಕಾಂತ್, ಯಶಸ್ವಿನಿ ಹಾಗೂ ಪ್ರಸ್ತುತ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಾಗೂ ಮಿಥುನ್ ರೈ ರವರು ಸಹಕರಿಸಿದರು.