ಪುತ್ತೂರು ಭಾರತ್ ಸಿನೆಮಾಸ್ ನಲ್ಲಿ ತುಡರ್ ಚಿತ್ರ ಬಿಡುಗಡೆ

0

ಪುತ್ತೂರು: ಪ್ರೀಮಿಯರ್ ಶೋ ಪ್ರದರ್ಶನಗೊಂಡು ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿರುವ ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ತಯಾರಾದ “ತುಡರ್‌’ ತುಳು ಸಿನೆಮಾ ಜೂ. 14ರಂದು ಪುತ್ತೂರು ಜಿ.ಎಲ್ ಒನ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ನಲ್ಲಿ ಬಿಡುಗಡೆಗೊಂಡಿತು.


ಕುಕ್ಕಾಡಿ ತಂತ್ರಿ ದೀಪ ಪ್ರಜ್ವಲಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಂಜೀವ ಮಠಂದೂರು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಆರ್ಯಾಪು ಗ್ರಾ.ಪಂ ಪಿಡಿಒ ನಾಗೇಶ್, ಅವರು ಚಿತ್ರದ ಯಶಸಸ್ಸಿಗೆ ಶುಭ ಹಾರೈಸಿದರು.
ಬಿಜೆಪಿ ಪ್ರಮುಖರಾದ ಯವರಾಜ್ ಪೆರಿಯತ್ತೋಡಿ, ವಿಶ್ವನಾಥ ಕುಲಾಲ್, ಹರಿಪ್ರಸಾದ್ ಯಾದವ್, ಕಾಂಗ್ರೆಸ್ ಪ್ರಮುಖ ಪೂರ್ಣೇಶ್, ಚಿತ್ರದ ನಾಯಕ ನಟ ಸಿದ್ಧಾರ್ಥ್, ನಾಯಕಿ ನಟ ದೀಕ್ಷಾ ಬಿಸೆ ಚಿತ್ರದ ಕುರಿತು ಮಾತನಾಡಿದರು. ಚಿತ್ರದ ನಿರ್ಮಾಪಕ ಹರೀಶ್‌ ಶೆಟ್ಟಿ, ನಿರ್ದೇಶಕರಾದ ತೇಜೇಶ್‌ ಪೂಜಾರಿ ಎ, ಮೋಹನ್‌ ರಾಜ್‌ ಉಪಸ್ಥಿತರಿದ್ದರು. ಶರತ್ ಆಳ್ವ ಕೂರೆಲು ಕಾರ್ಯಕ್ರಮ ನಿರೂಪಿಸಿದರು‌. ಚಿತ್ರದ ವಿತರಕ ಬಾಲಕೃಷ್ಣ ಕುಕ್ಕಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here