





ವಿಟ್ಲ: ವಿವಿಧ ಸಂಘಗಳಿಂದ ನಾಯಕತ್ವ ಗುಣ, ವ್ಯಕ್ತಿತ್ವ ವಿಕಸನ, ವೈಜ್ಞಾನಿಕ, ವ್ಯವಹಾರಿಕ, ಸಾಮಾಜಿಕ ಮನೋಭಾವ, ಸೃಜನಶೀಲತೆ, ಮಂತ್ರಿಮಂಡಲದಿಂದ ಪ್ರಜಾತಂತ್ರ ವ್ಯವಸ್ಥೆ ಕಲಿಯಬಹುದು ಎಂದು ಮಾಣಿ ಹಿ.ಪ್ರಾ. ಶಾಲಾ ಪದವೀಧರ ಶಿಕ್ಷಕಿ ಅಮೃತ ಜೋಷಿ ರವರು ಹೇಳಿದರು.ಅವರು ಮಾಣಿಯ ಕರ್ನಾಟಕ ಪ್ರೌಢ ಶಾಲೆಯಲ್ಲಿ ನಡೆದ ವಿವಿಧ ಸಂಘಗಳ ಉದ್ಘಾಟನೆ, ಮಂತ್ರಿಗಳ ಪ್ರಮಾಣವಚನ, ಪ್ರತಿಭಾ ಕಲರವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.


ಇದೇ ಸಂದರ್ಭ ಶಾಲಾ ನಾಯಕ ಎಸ್. ಅಬ್ದುಲ್ ರಹೀಮ್, ಉಪನಾಯಕಿ ಮರ್ಯಂ ಸ್ವಾಬಿರ,ವಿಪಕ್ಷ ನಾಯಕ ಮುಹಮ್ಮದ್ ಹಫೀಜ್, ಕ್ರೀಡಾ ಮಂತ್ರಿ ವಿಶಾಲ್, ಸಾಂಸ್ಕೃತಿಕ ಮಂತ್ರಿ ಜಮೀಹ, ಶಿಸ್ತು ಮಂತ್ರಿ ಯಶೋಧ,ಶಿಕ್ಷಣ ಮಂತ್ರಿ ಅಭಿನಯ, ಆರೋಗ್ಯ ಮಂತ್ರಿ ಮಹಮದ್ ಆಶಿಕ್, ಆಹಾರ ಮಂತ್ರಿ ಫಾತಿಮತ್ ಮುನೀಝ,ಸ್ವಚ್ಛತಾ ಮಂತ್ರಿ ಮಹಮ್ಮದ್ ರಾಫಿಲ್, ನೀರಾವರಿ ಮಂತ್ರಿ ಫಾತಿಮತ್ ಅಮಾನ, ಕೃಷಿ ಮಂತ್ರಿ ಲಿಖಿತ್ ಮತ್ತು ವಿವಿಧ ಸಂಘಗಳ ಅಧ್ಯಕ್ಷ ಕಾರ್ಯದರ್ಶಿಗಳಿಗೆ ಶಿಕ್ಷಕಿ ಶ್ಯಾಮಲಾ ಕೆ ಪ್ರಮಾಣವಚನ ಬೋಧಿಸಿದರು.





ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮಾಣಿ, ಹಿರಿಯ ಶಿಕ್ಷಕಿ ಐ.ಜಯಲಕ್ಷ್ಮಿ ,ಅಭಿಲಾಶ್ ಕುಮಾರ್ ಜಿ, ತಿಮ್ಮಪ್ಪ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಎಸ್.ಚೆನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಎನ್. ಗಂಗಾಧರ ಗೌಡ ಸ್ವಾಗತಿಸಿ, ಶಿಕ್ಷಕಿ ಸುಶ್ಮಿತ ವಂದಿಸಿ, ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ಕಾರ್ಯಕ್ರಮ ನಿರೂಪಿಸಿ ಸಾನಿಕ ಮತ್ತು ಜಮೀಹ ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





