ನೆಲ್ಯಾಡಿ ಜೇಸಿಐ ಆಶ್ರಯದಲ್ಲಿ ಯೋಗ ದಿನಾಚರಣೆ

0

ನೆಲ್ಯಾಡಿ: ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನೆಲ್ಯಾಡಿ ಜೇಸಿಐ ಆಶ್ರಯದಲ್ಲಿ ನೆಲ್ಯಾಡಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಯೋಗ ಅಧ್ಯಾಪಕರಾದ ಶೀನಪ್ಪ ಗೌಡರವರು ಮಾತನಾಡಿ, ಜಗತ್ತಿಗೆ ಕೊಡುಗೆಯಾಗಿ ನೀಡಿದ ಯೋಗದ ಪರಿಣಾಮಗಳ ಪ್ರಯೋಜನಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರಾ ಬಂಟ್ರಿಯಾಲ್‌ರವರು ಮಾತನಾಡಿ, ಯೋಗಾಸನದ ಪ್ರಯೋಜನಗಳನ್ನ ತಿಳಿಸಿ ಪ್ರತಿನಿತ್ಯ ಯೋಗಾಸನ ಮಾಡಿದರೆ ಔಷಧಿಯ ಅಡ್ಡ ಪರಿಣಾಮ ತಪ್ಪಿಸಬಹುದು ಎಂದು ಹೇಳಿದರು.


ಶಾಲಾ ಮುಖ್ಯಗುರು ವೀಣಾ ಡಿಸೋಜ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಸಿರ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ವಿಮಲ್ ಕುಮಾರ್ ಆಯೋಜಿಸಿದ್ದರು. 300 ವಿದ್ಯಾರ್ಥಿಗಳು ಯೋಗ ಅಧ್ಯಾಪಕ ಶೀನಪ್ಪ ಗೌಡರಿಂದ ಯೋಗ ಶಿಕ್ಷಣ ಪಡೆದರು. ಮುಖ್ಯಶಿಕ್ಷಕಿ ವೀಣಾ ಸ್ವಾಗತಿಸಿ, ಶಿಕ್ಷಕಿ ಜಯಂತಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here