ನಿಡ್ಪಳ್ಳಿ;ದ.ಕ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ,ಪಾಣಾಜೆ ಇಲ್ಲಿಯ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ, ಟೈ, ಬೆಲ್ಟ್ ಹಾಗೂ ಶಾಲೆಗೆ ಮೇಜು ಇದನ್ನು ಪುತ್ತಿಲ ಪರಿವಾರ ಪಾಣಾಜೆ ಗ್ರಾಮ ಸಮಿತಿಯ ವತಿಯಿಂದ ಜೂ.22 ರಂದು ಹಸ್ತಾಂತರಿಸಲಾಯಿತು.
ನಿವೃತ್ತ ಆದಾಯ ತೆರಿಗೆ ಅಧಿಕಾರಿ ರಾಮ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಕ್ಕಳಿಗೆ ಬರೆಯುವ ಪುಸ್ತಕ ಮತ್ತು ಟೈ ಬೆಲ್ಟ್ ವಿತರಿಸಿ ಶುಭ ಹಾರೈಸಿದರು.
ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ನಿವೃತ್ತ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು, ನಿವೃತ್ತ ಶಿಕ್ಷಕಿ ಪ್ರತಿಭಾ ಟೀಚರ್, ಜಗನ್ನಾಥ ರೈ ಕಡಮಾಜೆ, ಟ್ರಸ್ಟ್ ನ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಭಟ್ ಬೊಳ್ಳುಕಲ್ಲು ,ಸಂಧ್ಯಾ ವಾಣಿಯನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಪ್ಪ ನಾಯ್ಕ ಉಪಸ್ಥಿತರಿದ್ದರು.ಟ್ರಸ್ಟಿನ ಗ್ರಾಮ ಸಮಿತಿಯ ಸದಸ್ಯರು ಶಾಲೆಗೆ ಮೇಜನ್ನು ಹಸ್ತಾಂತರಿಸಿದರು. ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಗುರು ಜನಾರ್ಧನ ಅಲ್ಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹ ಶಿಕ್ಷಕಿಯರಾದ ಸ್ವರ್ಣಲತಾ, ದಿವ್ಯ ಪಡುಬಿದ್ರಿ, ಅನ್ನಪೂರ್ಣ.ಕೆ ಸಹಕರಿಸಿದರು.