ಪುತ್ತೂರು: ಇಲ್ಲಿನ ಶಾರದಾ ಭಜನಾ ಮಂದಿರದಲ್ಲಿ ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ಕುಂಬಳೆ ಪಾರ್ತಿಸುಬ್ಬ ವಿರಚಿತ, “ಸುಗ್ರೀವಾಜ್ಞೆ ” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕೃತಿಕಾ ಖಂಡೇರಿ, ಮದ್ದಳೆಯಲ್ಲಿ, ಮಾ|ಪ್ರದೀಪ್, ಚೆಂಡೆಯಲ್ಲಿ ಮಾ|ಅದ್ವೈತ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀರಾಮನಾಗಿ ಜಯಲಕ್ಷ್ಮಿ ವಿ ಭಟ್, ಲಕ್ಷ್ಮಣನಾಗಿ ಸ್ವಪ್ನಾ ಉದಯ್, ತಾರಾ ಮತ್ತು ಹನುಮಂತನಾಗಿ ಶುಭಾ ಪಿ ಆಚಾರ್ಯ, ಸುಗ್ರೀವ ಮತ್ತು ಸ್ವಯಂಪ್ರಭೆಯಾಗಿ ಪ್ರೇಮಾ ಕಿಶೋರ್, ಜಾಂಬವನಾಗಿ ಶಾಲಿನಿ ಅರುಣ್ ಶೆಟ್ಟಿ, ಸಂಪಾತಿ ಮತ್ತು ಸುಷೇಣನಾಗಿ ಶ್ರುತಿ ವಿಸ್ಮಿತ್, ಅಂಗದನಾಗಿ ಗೀತಾ ಕೊಂಕೋಡಿ,ಈಶ್ವರನಾಗಿ ಶಂಕರಿ ಶರ್ಮಾ ಪಾತ್ರ ನಿರ್ವಹಿಸಿದರು.
ಪದ್ಮಾ ಕೆ ಆರ್ ಆಚಾರ್ಯ ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮವನ್ನು ಶಂಕರಿ ಶರ್ಮಾ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವಿನಯಾ ಕೇಕುಣ್ಣಾಯ ಪ್ರಾರ್ಥಿಸಿದರು. ಪುತ್ತೂರು ಶಾರದಾ ಭಜನಾ ಮಂದಿರದ ಕಾರ್ಯಕಾರಿ ಸಮಿತಿಯ ನೂತನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಮತ್ತು ಉಪಾಧ್ಯಕ್ಷ ಯಶವಂತ ಆಚಾರ್ಯರವರು ಸಹಕರಿಸಿದರು.