ಪುತ್ತೂರು:ಬಾಲಕೃಷ್ಣ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ತಂಡವು 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ವರ್ಷದ ನೂತನ ಕಲಾಕಾಣಿಕೆ, ಪೌರಾಣಿಕ ನಾಟಕ ‘ನಾಗ ಮಾಣಿಕ್ಯ’ ಇದರ ಶುಭಮುಹೂರ್ತ ಜೂ.23ರಂದು ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಕ್ಷೇತ್ರ ಉಪ್ಪಿನಂಗಡಿಯಲ್ಲಿ ನೆರವೇರಿತು.ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು.
ಆ ಬಳಿಕ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮುಹೂರ್ತ ಸಭಾ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಆಗಮಿಸಿದ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಕೃಷ್ಣ ನಾೖಕ್ , ಉಪ್ಪಿನಂಗಡಿ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಕಾರ್ಯದರ್ಶಿ ಚಿದಾನಂದ ನಾೖಕ್ ,ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ,ವ್ಯವಸ್ಥಾಪನಾ ಸಮಿತಿಯ ಸದಸ್ಯ ಗೋಪಾಲಕೃಷ್ಣ, ಹಿರಿಯರಾದ ಕೃಷ್ಣರಾವ್ ಅರ್ತಿ, ಶರತ್ ಕೋಟೆ ಶುಭಹಾರೈಸಿದರು.
ವೇದಿಕೆಯಲ್ಲಿ ನೂತನ ನಾಟಕದ ರಚನೆಕಾರ, ನಿರ್ದೆಶಕ ರವಿಶಂಕರ ಮಣಿಲ,ಸಂಗೀತ ನಿರ್ಧೇಶಕ ಕಾರ್ತಿಕ್ ಶಾಸ್ತ್ರಿ ಮಣಿಲ, ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ, ತಂಡದ ಯಜಮಾನ ಬಾಲಕೃಷ್ಣ ಪೂಜಾರಿ ಪೆರುವಾಯಿ, ಸಂಚಾಲಕ ಕಿಶೋರ್ ಜೋಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹೇಂದ್ರವರ್ಮ,ಉದ್ಯಮಿಗಳಾದ ಯತೀಂದ್ರ ಶೆಟ್ಟಿ, ಕರುಣಾಕರ, ಗುಣಾಕರ ಅಗ್ನಾಡಿ ,ತಂಡದ ಕಲಾವಿದರಾದ ಗಂಗಾಧರ ಟೈಲರ್, ಸುನೀಲ್ ಪೆರ್ನೆ,ದಿವಾಕರ ಸೂರ್ಯ, ಲಕ್ಷ್ಮಣ ಬೆಳ್ಳಿಪ್ಪಾಡಿ , ಉದಯ್ ಪುತ್ತೂರು, ರಾಜಶೇಖರ ಶಾಂತಿನಗರ, ಚೇತನ್ ಸತೀಶ್, ಪುನೀತ್, ಉಷಾ ಬೆಳ್ಳಿಪ್ಪಾಡಿ, ಸಂಧ್ಯಾಶ್ರೀ, ಅನುಷಾಜೋಗಿ ಪುರುಷರಕಟ್ಟೆ, ಅನಿಲ್ ಇರ್ದೆ, ಪ್ರದೀಪ ಕಾವು, ಆಶಕಾರ್ಯಕರ್ತೆ ಅನಂತಾವತಿ, ದೇವಸ್ಥಾನದ ಸಹಾಯಕ ದಿವಾಕರ್ ಉಪಸ್ಥಿತರಿದ್ದರು.
ತಂಡದ ಸಂಚಾಲಕ ಕಿಶೋರ್ ಕುಮಾರ್ ಜೋಗಿ ವಂದಿಸಿ, ತಂಡದ ಕಲಾವಿದ ರಂಗಯ್ಯ ಬಳ್ಳಾಲ ಕೆದಂಬಾಡಿ ಸ್ವಾಗತಿಸಿ,ನಿರೂಪಿಸಿದರು.ತಂಡದ ಕಲಾವಿದರು ಸಹಕರಿಸಿದರು.