ತೈಲ ಬೆಲೆ ಕೇವಲ ರೂ. 3.50 ಹೆಚ್ಚಳಕ್ಕೆ ಪ್ರತಿಭಟನೆ ಹಾಸ್ಯಾಸ್ಪದ – ಬೂಡಿಯಾರ್ ಪುರುಷೋತ್ತಮ ರೈ

0

ಪುತ್ತೂರು: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರ ಸರಕಾರ ಕಡಿಮೆ ಮಾಡಿಲ್ಲ. ಬದಲಾಗಿ ರೂ.30 ಹೆಚ್ಚಿಸಿದೆ. ರಾಜ್ಯ ಸರಕಾರ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಪೆಟ್ರೋಲ್‌ಗೆ ಕೇವಲ ರೂ. 3.00 ಮತ್ತು ಡಿಸೇಲ್‌ಗೆ ಕೇವಲ ರೂ. 3.50 ಹೆಚ್ಚಿಸಿದೆ ಆದರೆ ತೈಲ ಬೆಲೆಯನ್ನು ಅತಿ ಹೆಚ್ಚು ಜಾಸ್ತಿ ಮಾಡಿದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಬಿಟ್ಟು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಕಳೆದ ಹಲವು ತಿಂಗಳಲ್ಲಿ ಕಚ್ಚಾ ತೈಲ ಬೆಲೆಯು ಶೇ 31 ರಷ್ಟು ಕಡಿಮೆಯಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೇಂದ್ರ ಸರಕಾರ ಯಾವುದೇ ಕಡಿತ ಮಾಡಿಲ್ಲ. ’ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ.ಆದರೂ ಬಿಜೆಪಿ ಮಾತನಾಡುತ್ತಿಲ್ಲ. 2004ರಿಂದ 2014ರ ತನಕ ಮನ್‌ಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಆಗ ಕಚ್ಚಾ ತೈಲಕ್ಕೆ ಬ್ಯಾರಲ್‌ಗೆ 120 ಡಾಲರ್ ಆಗಿತ್ತು. ಆದರೂ ಪೆಟ್ರೋಲ್‌ಗೆ ರೂ. 72 ಇತ್ತು. 2014ರ ನಂತರ ಕಚ್ಚಾ ತೈಲಕ್ಕೆ ರೂ. 70 ಕಡಿಮೆ ಆಗಿದ್ದರೂ ಬಿಜೆಪಿ ಸರಕಾರ ಪೆಟ್ರೋಲ್‌ಗೆ ರೂ. 102 ಮಾಡಿದರು. ಸುಮಾರು ರೂ. 30 ಹೆಚ್ಚಿಗೆ ಮಾಡಿದರು. ಈಗ ನಿಜವಾಗಿ ನೋಡಿದರೆ ಪೆಟ್ರೋಲ್ ಅನ್ನು ರೂ.50ಕ್ಕೆ ಮಾರಬಹುದು. ಈ ಕುರಿತು ನಾವು ಏನೆ ಪ್ರತಿಭಟನೆ ಮಾಡಿದರೂ ಅವರಿಗೆ ಕಿವಿಗೆ ಮುಟ್ಟುವುದಿಲ್ಲ. ಈಗ ರಾಜ್ಯ ಸರಕಾರ ರೂ. 3.50 ಜಾಸ್ತಿ ಮಾಡಿದಾಗ ಅವರಿಗೆ ಹೊಟ್ಟೆ ಕಿಚ್ಚಾಗುತ್ತಿದೆ. ಅದರೆ ಮೊದಲು ನಾವು ಕೇಂದ್ರ ಸರಕಾರ ಪೆಟ್ರೋಲ್ ಡಿಸೇಲ್‌ಗೆ ಜಾಸ್ತಿ ಮಾಡಿದಾಗ ನಾವು ಪ್ರತಿಭಟನೆ ಮಾಡಿದ್ದೆವು. ಆಗ ಅವರು ಪೆಟ್ರೋಲ್‌ಗೆ ರೂ. 200 ಅದರೂ ನಮಗೆ ಮೋದಿ ಬೇಕು ಎಂದು ಹೇಳಿದರು. ಇದನ್ನು ನೋಡಿದಾಗ ನಮಗೆ ಬೇಸರ ಆಗುತ್ತದೆ. ಕೇಂದ್ರ ಸರಕಾರ ಪೆಟ್ರೋಲ್ ದರ, ಡಿಸೆಲ್ ದರ ಮತ್ತು ಗ್ಯಾಸ್ ದರವನ್ನು ಕಡಿಮೆ ಮಾಡಬೇಕು. ಆಗ ದೆಶದ ಶೇ.90 ಮಂದಿಗೆ ನ್ಯಾಯ ಸಿಗುತ್ತದೆ ಮತ್ತು ಪ್ರಯೋಜನ ಆಗುತ್ತದೆ ಎಂದರು.


ಬಿಜೆಪಿ ವಿರೋಧ ಪಕ್ಷದಲ್ಲಿದ್ದರೆ ಕಂಡಿತಾ ದೇಶಕ್ಕೆ ಪ್ರಯೋಜನ:
ಬಿಜೆಪಿಯವರು ಪ್ರತಿಭಟನೆ ಮಾಡಲು ಮಾತ್ರ ಫಿಟ್ ಹಾಗಾಗಿ ಅವರು ವಿರೋಧ ಪಕ್ಷದಲ್ಲೇ ಇರಬೇಕು. ಅವರು ಪ್ರತಿಭಟನೆ ಮಾಡಿದರೆ ದೇಶಕ್ಕೆ ಪ್ರಯೋಜನ ಆಗಬಹುದು. ಅವರು ಆಡಳಿತದಲ್ಲಿದ್ದರೆ ಯಾವುದೆ ಹೆಚ್ಚಳವಾದರೂ ಅದಕ್ಕೆ ಬೆಂಬಲ ನೀಡುತ್ತಾ ಅದಕ್ಕೆ ಪ್ರೋತ್ಸಾಹಿಸುತ್ತಾರೆ. ಹಾಗಾಗಿ ಅವರು ಆಡಳಿತದಲ್ಲಿರದೆ ವಿರೋಧ ಪಕ್ಷದಲ್ಲೇ ಇರಬೇಕು .ದೇಶದಲ್ಲಿ ಜಿ.ಎಸ್.ಟಿಗೆ ರೂಪು ರೇಶೆ ಇಲ್ಲ. ನಮ್ಮ ಹಣವನ್ನು ತೆರಿಗೆ ಮೂಲಕ ವಸೂಲು ಮಾಡುವ ಕೆಲಸ ಆಗುತ್ತಿದೆ. ಜಿಎಸ್‌ಟಿಯನ್ನು ತೆಗೆದು ಹಾಕಬೇಕು. ರಸ್ತೆಗಿರುವ ಸುಂಕ ವಸೂಲಿ ಪೂರ್ಣಗೊಂಡರು ಅದನ್ನು ಮುಂದುವರಿಸುವುದನ್ನು ನಿಲ್ಲಿಸಬೇಕು. ಈ ಹಿಂದೆ ಮನ್‌ಮೋಹನ್ ಸಿಂಗ್ ಸರಕಾರ ಕೃಷಿಕರ ಸಾಲ ಮನ್ನಾ ಮಾಡಿದಾಗ ಬಿಜೆಪಿಯವರು ಬೊಬ್ಬೆ ಹೊಡೆದಿದ್ದರು. ಈಗ ಮೋದಿ ಸರಕಾರ ಉದ್ದಿಮೆದಾರರ ಸಾಲ ಮನ್ನಾ ಮಾಡುವುದು ಯಾವ ನ್ಯಾಯ.
ನನ್ನ ಪಕ್ಷದವರಾರಾಗಲಿ ತಪ್ಪು ಮಾಡಿದಾಗ ಪ್ರಶ್ನಿಸಬೇಕು. ಕೇಂದ್ರ ಸರಕಾರದ ಹತೋಟಿಯಲ್ಲಿರುವ ಇಡಿ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂದರು.


ಭಾರತದಲ್ಲಿರುವವರು ಎಲ್ಲರೂ ಹಿಂದುಗಳು:
ಹಿಂದುತ್ವದ ಆಧಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳುತ್ತಾರೆ. ಭಾರತದಲ್ಲಿರುವ ಎಲ್ಲರು ಹಿಂದುಗಳೇ ಆಗಿದ್ದಾರೆ ಎಂದು ಅವರು ತಿಳಿದು ಕೊಳ್ಳಬೇಕು. ಅದು ಬಿಟ್ಟು ಜಾತಿ, ಧರ್ಮವನ್ನು ಒಡೆಯುವ ಪ್ರಯತ್ನ ಮಾಡಬಾರದು. ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದಿದ್ದರೆ ಶೇ.10 ಮಂದಿ ಶ್ರೀಮಂತ ಹಿಂದುಗಳಿಗೆ ಮಾತ್ರ ಮೋದಿಯಿಂದ ಪ್ರಯೋಜನ ಆಗಿದೆ. ಶೇ.70 ಮಂದಿ ಬಡ ಹಿಂದುಗಳಿಗೆ ಪ್ರಯೋಜನ ಆಗಿಲ್ಲ. ಈ ನಡುವೆಯೂ ಅವರು ರಾಜ್ಯ ಸರಕಾರದ 5 ಗ್ಯಾರೆಂಟಿ ಪ್ರಯೋಜನ ಪಡೆದು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು. ಕುರಿಯ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿಂಬ್ರಿ ರಾಮಕೃಷ್ಣ ಭಂಡಾರಿ, ಕಾಂಗ್ರೆಸ್ ಕಾರ್ಯಕರ್ತ ಇಬ್ರಾಹಿಂ ನೆಕ್ಕರೆ , ಸೆಂಟ್ಯಾರು ಕ್ರಿಶ್ಚಯನ್ ಸಮುದಾಯದ ಮುಖ್ಯಸ್ಥ ಸುನಿಲ್ ಡಿಸೋಜಾ ಮುಲಾರು, ಅನಿಲ್ ಡಿ ಸೋಜಾ ಮುಲಾರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಯಡಿಯೂರಪ್ಪನವರಿಗೆ ಪೋಕ್ಸೋ ಕೇಸು ಹಾಕಿರುವುದು ಸರಿಯಲ್ಲ:
ದೌರ್ಜನ್ಯ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ಕೇಸು ಕೊಟ್ಟ ಬಳಿಕ ಅದರಲ್ಲೂ ಬೋಗಸ್ ಆಗುತ್ತಿದೆ ಎಂದು ಅರೋಪಿಸಿದ ಬೂಡಿಯಾರ್ ಪುರುಷೋತ್ತಮ ರೈ ಅವರು ಕಾಯ್ದೆ ಕುರಿತು ಅಧಿಕಾರಿಗಳು ತಿಳಿದುಕೊಳ್ಳುವ ಅವಶ್ಯಕತೆ ಇದೆ. ರಾಜಕೀಯ ದ್ವೇಶಕ್ಕಾಗಿ ಎರಡು ಕಾಯ್ದೆಗಳನ್ನು ದುರ್ಬಳಕೆ ಮಾಡುವುದು ಕಂಡು ಬರುತ್ತಿದೆ. ರಾಜಕೀಯದಲ್ಲೂ ರಾಜಧರ್ಮ ಇರಬೇಕು. ಅಲ್ಲಿ ಯಾರೇ ತಪ್ಪು ಮಾಡಿದರೂ ನನ್ನ ಪಕ್ಷದವರಾರಾಗಲಿ ಪ್ರಶ್ನಿಸಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಳಿತದ ಸಂದರ್ಭ ಏನೋ ನಡೆದಿರಬಹುದು. ಯಡಿಯೂರಪ್ಪ ಅವರಿಗೆ ಸುಮಾರು 82 ವರ್ಷ ಆಗಿರಬಹುದು. ಅವರ ವಿರುದ್ಧ ದೂರು ನೀಡಿದ ಹೆಂಗಸು ಕೂಡಾ ಸರಿಯಿಲ್ಲ ಅಂತೆ. ಅವರ ಮಗಳಿಗೆ ಏನೋ ಅನ್ಯಾಯ ಆಗಿದೆ ಎಂದು ಪೋಕ್ಸೋ ಪ್ರಕರಣ ದಾಖಲಿಸುವುದು ಸರಿಯಲ್ಲ. ಹಿಂದೆ ನಡೆದ ಘಟನೆಗೆ ಆಗಲೇ ದೂರು ನೀಡಬೇಕಾಗಿತ್ತು. ಹಾಗಾಗಿ ಯಡಿಯೂರಪ್ಪ ಅವರ ಮೇಲಿನ ಪೋಕ್ಸೋ ಪ್ರಕರಣ ದಾಖಲಿಸುವುದನ್ನು ನಾವು ಕೂಡಾ ವಿರೋಧ ಮಾಡುತ್ತೇವೆ.

LEAVE A REPLY

Please enter your comment!
Please enter your name here