ಪುತ್ತೂರು:ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು. ಶಾಲಾ ನಾಯಕನಾಗಿ ಯತೀನ್ ಎಂ ಆಯ್ಕೆಯಾದರು. ಉಪನಾಯಕನಾಗಿ ಮಹಮ್ಮದ್ ನವಾಝ್. ವಿರೋಧ ಪಕ್ಷದ ನಾಯಕಿಯಾಗಿ ಜ್ಯೋತ್ಸ್ನಾ, ವಿರೋಧ ಪಕ್ಷದ ಉಪನಾಯಕಿಯಾಗಿ ಬೀಬಿ ಮೈಮುನಾ. ಕ್ರೀಡಾ ಮಂತ್ರಿ ಮಹಮ್ಮದ್ ಅಫೀಝ್, ಉಪಕ್ರೀಡಾ ಮಂತ್ರಿ ಮಹಮ್ಮದ್ ತೌಸೀರ್. ವಿದ್ಯಾ ಮಂತ್ರಿ ಧನ್ಯಶ್ರೀ, ಉಪವಿದ್ಯಾಮಂತ್ರಿ ಭವಿತಾ. ರಕ್ಷಣಾ ಮಂತ್ರಿ ತನ್ವಿತ್ ಗೌಡ ಎನ್, ಉಪರಕ್ಷಣಾ ಮಂತ್ರಿ ಪ್ರಣೀತ್. ಸ್ತ್ರೀಹಿತ ರಕ್ಷಣಾ ಮಂತ್ರಿ ಮೌಲ್ಯ, ಉಪಸ್ತ್ರೀಹಿತ ರಕ್ಷಣಾ ಮಂತ್ರಿ ಖದೀಜತ್ ಶಂನಾಝ್. ನೀರಾವರಿಮಂತ್ರಿ ಮಿಥುನ್ ಕೆ, ಉಪನೀರಾವರಿ ಮಂತ್ರಿ ಶ್ರವಣ್ ಕುಮಾರ್ ಬಿ. ಕೃಷಿ ಮಂತ್ರಿ ರಿತೇಶ್ ಡಿಸೋಜ, ಉಪಕೃಷಿ ಮಂತ್ರಿ ಮಹಮ್ಮದ್ ನೌಫಲ್. ಆರೋಗ್ಯ ಮಂತ್ರಿ ಶಮಿತಾ, ಉಪ ಆರೋಗ್ಯ ಮಂತ್ರಿ ಫಾತಿಮತ್ ಶೆಹನಾಝ್. ಸಂಸತ್ ಕಾರ್ಯದರ್ಶಿ ನವ್ಯಶ್ರೀ, ಉಪ ಸಂಸತ್ ಕಾರ್ಯದರ್ಶಿ ಕವಿತಾ. ಉಪಸಭಾಪತಿ ಮಹಮ್ಮದ್ ಅನ್ಸಾಬ್. ಸ್ಚಚ್ಚತಾ ಮಂತ್ರಿ ಮಹಮ್ಮದ್ ತ್ವಯ್ಯೀಬ್, ಉಪ ಸ್ಚಚ್ಚತಾ ಮಂತ್ರಿ ಮಹಮ್ಮದ್ ಅಸ್ಪಾಕ್. ಸಾಂಸ್ಕೃತಿಕ ಮಂತ್ರಿ ನಿರೀಕ್ಷಾ, ಉಪಸಾಂಸ್ಕೃತಿಕ ಮಂತ್ರಿ ನವ್ಯಾ ಆಯ್ಕೆಯಾದರು.
ಸಂಸತ್ತಿನ ಸಭಾಪತಿಯಾಗಿ ಆಯ್ಕೆಗೊಂಡ ಜೀವನ್ ಬಿ ಆಯ್ಕೆಗೊಂಡ ಮಂತ್ರಿಗಳಿಗೆ ಪ್ರಮಾಣ ವಚನ ಭೋದಿಸಿದರು.ಮುಖ್ಯಗುರು ಪುಷ್ಪಾವತಿ ಎಸ್ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.ಹಿರಿಯ ಅಧ್ಯಾಪಿಕೆ ಪ್ರವೀಣ ಕುಮಾರಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಿಗೆ ತಮ್ಮ ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡುವುದರ ಜೊತೆ ಶುಭಹಾರೈಸಿದರು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಭುವನೇಶ್ವರಿ.ಎಂ ಇವರು ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಿಗೆ ಶುಭಹಾರೈಸಿದರು. ಸಂಸತ್ತಿನ ನಿಯಮಾವಳಿಗಳನ್ನು ಸಹ ಶಿಕ್ಷಕಿ ಸುಮಂಗಲಾ.ಕೆ ತಿಳಿಸಿದರು. ವೇದಿಕೆಯಲ್ಲಿ ಸಹಶಿಕ್ಷಕಿಯರಾದ ಶೋಭಾ.ಬಿ, ಗೌತಮಿ ಎಂ ಬಿ ಉಪಸ್ಥಿತರಿದ್ದರು.