ಉಪ್ಪಿನಂಗಡಿ: ಗೃಹರಕ್ಷಕದಳದ ಉಪ್ಪಿನಂಗಡಿ ಘಟಕದ ಗೃಹರಕ್ಷಕಿ ನಳಿನಿ ಪಿ.ಅವರು ದಾವಣಗೆರೆಯಲ್ಲಿರುವ ಗೃಹರಕ್ಷಕ ದಳದ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 12 ದಿನಗಳ ಪುನರ್ಮನನ ತರಬೇತಿಯಲ್ಲಿ ಭಾಗವಹಿಸಿ, ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಇವರಿಗೆ ಪ್ರಾದೇಶಿಕ ತರಬೇತಿ ಕೇಂದ್ರದ ಡೆಪ್ಯುಟಿ ಕಮಾಂಡೆಂಟ್ ಸಂದೀಪ್ ಅವರು ಪ್ರಮಾಣ ಪತ್ರ ನೀಡಿ ಅಭಿನಂದಿಸಿದ್ದಾರೆ.