ಪುತ್ತೂರು: ಬನ್ನೂರು ಗ್ರಾ.ಪಂ ವ್ಯಾಪ್ತಿಯ ಕಜೆ ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಸ್ಮಾರ್ಟ್ಕ್ಲಾಸ್ ಉದ್ಘಾಟನೆ ಕಾರ್ಯಕ್ರಮ ಜು.1ರಂದು ನಡೆಯಿತು.
ಸೆಲ್ಕೊ ಫೌಂಡೇಶನ್ ಜನಶಿಕ್ಷಣ ಟ್ರಸ್ಟ್ನವರ ಸೋಲಾರ್ ಗ್ರಾಮ ಅಭಿಯಾನ ಯೋಜನೆಯ ಸಹಯೋಗದೊಂದಿಗೆ ಮತ್ತು ದಾನಿಗಳ ನೆರವಿನಿಂದ ಒಟ್ಟು ರೂ. 1.10ಲಕ್ಷ ಮೌಲ್ಯದಲ್ಲಿ ಸ್ಮಾರ್ಟ್ಕ್ಲಾಸ್ ಅಳವಡಿಸಲಾಗಿದೆ.
ಬನ್ನೂರು ಗ್ರಾಪಂ ಅಧ್ಯಕ್ಷೆ ಸ್ಮಿತಾ ಕೆ, ಉಪಾಧ್ಯಕ್ಷೆ ಶೀನಪ್ಪ ಕುಲಾಲ್, ಸದಸ್ಯರಾದ ಸುಪ್ರೀತಾ ರತ್ನಾಕರ ಪ್ರಭು, ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಶೀನ ಶೆಟ್ಟಿ, ಸಹನಿರ್ದೇಶಕ ಕೃಷ್ಣಮೂಲ್ಯ, ಸೆಲ್ಕೋ ಸೋಲಾರ್ ಸಂಸ್ಥೆಯ ಮಂಗಳೂರು ಶಾಖಾ ಮ್ಯಾನೇಜರ್ ರವೀನಾ, ಪುತ್ತೂರು ಶಾಖಾ ಮ್ಯಾನೇಜರ್ ಸುಧಾಕರ್, ಚಿಗುರು ಗೆಳೆಯರ ಬಳಗ ಮತ್ತು ಕಲಿಯುಗ ಸೇವಾ ಸಮಿತಿಯ ಸಂತೋಷ್, ಗ್ರಾ.ಪಂ ಮಾಜಿ ಸದಸ್ಯ ರತ್ನಾಕರ ಪ್ರಭು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಹೇಮಾವತಿ, ಬೀರಿಗ ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ, ಆಶಾ ಕಾರ್ಯಕರ್ತೆ ಪದ್ಮಾವತಿ, ರಮೇಶ್ ಪಾಲ್ತಿಜಾಲು, ಬಾಲವಿಕಾಸ ಸಮಿತಿಯ ಸದಸ್ಯರಾದ ಮೆಲ್ವಿನ್ ಮಸ್ಕರೇನಸ್, ರಮೇಶ್ ಅಡೆಂಚಿಲಡ್ಕ, ಸ್ಮಾರ್ಟ್ಕ್ಲಾಸ್ನ ದಾನಿಗಳು, ಮಕ್ಕಳ ಪೋಷಕರು, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಶೀನ ಶೆಟ್ಟಿ ಮತ್ತು ಸಹನಿರ್ದೇಸಕ ಕೃಷ್ಣಮೂಲ್ಯ ಅವರು ಸಸಿ ವಿತರಿಸಿದರು. ಸಭೆ ಸಮಾರಂಭಗಳಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಅದರ ಮಾರಾಟದಿಂದ ಬಂದ ರೂ. 2,500 ಅನ್ನು ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಸಂತೋಷ್ ಮತ್ತು ಸದಸ್ಯ ರತ್ನಾಕರಪ್ರಭು ಅವರು ಸ್ಮಾರ್ಟ್ಕ್ಲಾಸ್ಗೆ ದೇಣಿಗೆಯಾಗಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ರೇಖಾ ದಾಮೋದರ್ ಸ್ವಾಗತಿಸಿ, ಸಂಜೀವಿನಿ ಒಕ್ಕೂಟದ ಮಮತಾ ಲೋಕೇಶ್ ವಂದಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವ್ಯ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಮಾಲತಿ ಹುಕ್ರಪ್ಪ ಸಹಕರಿಸಿದರು.