ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಸೊಸೈಟಿ ಆಡಳಿತಕ್ಕೆ ಒಳಪಟ್ಟ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆ ಮತ್ತು ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ಸಹ ಪಠ್ಯಚಟುವಟಿಕೆಗಳ ಉದ್ಘಾಟನೆ ಜು.3ರಂದು ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ್ ಮಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸಹ ಪಠ್ಯ ಚಟುವಟಿಕೆ ಮನಸ್ಸಿನ ವಿಕಸನಕ್ಕೆ ದಾರಿಯಾಗುತ್ತದೆ ಎಂದು ಹೇಳಿ ಶುಭಹಾರೈಸಿದರು. ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಎ.ಲಕ್ಷ್ಮಣ ಗೌಡ ಅವರು ಮಾತನಾಡಿ, ಭಕ್ತಿ,ಶ್ರದ್ಧೆಯಿಂದ ಕಲಿತ ವಿದ್ಯೆ ಶಾಶ್ವತ. ಇಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಯಕ್ಷಗಾನ ತರಬೇತಿ ಗುರುಗಳಾದ ಅರುಣ್ ಅವರು ಮಾತನಾಡಿ, ಏಕಾಗ್ರತೆಯಿಂದ ಪಾಠ ಕೇಳಲು, ವಿದ್ಯಾರ್ಥಿಗಳಲ್ಲಿ ಇರುವ ಅಂಜಿಕೆ ಮನೋಭಾವವನ್ನು ದೂರ ಮಾಡಲು ಯಕ್ಷಗಾನ ತರಬೇತಿಗೆ ಸಹಕಾರ ಕೋರಿದರು. ಮುಖ್ಯಅತಿಥಿಯಾಗಿದ್ದ ಕೃಷ್ಣಪ್ರಸಾದ್ ಅಂಬಟೆಮಾರು ಶುಭಹಾರೈಸಿದರು. ವಿದ್ಯಾರ್ಥಿನಿಯರು ಹೂಗುಚ್ಛ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.