ಫ್ಲಾಟಿಂಗ್ ಗೆ ಸಮಯ ನಿಗದಿಮಾಡಿ – ಬಡವರನ್ನು ಕಚೇರಿಗೆ ಅಲೆದಾಡಿಸುವ ಕೆಲಸ ಮಾಡಬೇಡಿ: ಶಾಸಕ ಅಶೋಕ್ ರೈ

0

ಪುತ್ತೂರು: ಫ್ಲಾಟಿಂಗ್ ಅರ್ಜಿ ಹಾಕಿ ನಾಲ್ಕರಿಂದ ಐದು ವರ್ಷಗಳಿಂದ ಕಾಯುತ್ತಿದ್ದಾರೆ, ಪ್ರತೀ ದಿನ ತಾಲೂಕು ಕಚೇರಿ ಅಲೆದಾಡುತ್ತಿದ್ದಾರೆ, ಫ್ಲಾಟಿಂಗ್ ಗೆ ಸರಕಾರ ತಕ್ಷಣ ಸಮಯ ನಿಗದಿಮಾಡಬೇಕು ಎಂದು ಶಾಸಕ ಅಶೋಕ್ ರೈ ಸಭೆಗೆ ತಿಳಿಸಿದರು.

ಜಿಲ್ಲಾ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕರು ಫ್ಲಾಟಿಂಗ್ ಇಷ್ಟು ದಿನದೊಳಗೆ ಮಾಡಿಕೊಡಬೇಕು ಎಂದು ದಿನ‌ನಿಗದಿ ಮಾಡಬೇಕು‌. ಸರ್ವೆಯರ್ ಗಳ ಕೊರತೆಯಿದೆ ಎಂದು ಇಲಾಖೆ ಸಬೂಬು ಹೇಳುತ್ತಿದೆ. ಪರವಾನಿಗೆ ಹೊಂದಿರುವ ಖಾಸಗಿ ಸರ್ವೆಯರ್ ಗಳಿಗೆ ಸರ್ವೆ ಮಾಡಿಸಲು ಸರಕಾರ ಅನುಮತಿ ನೀಡಬೇಕು. ತಾಲೂಕಿನಲ್ಲಿ ಒಬ್ಬರೇ ಸರ್ವೆಯರ್ ಕೆಲಸ ಮಾಡಿದರೆ ಅರ್ಜಿ ವಿಲೇವಾರಿ ಮಾಡಲು ತುಂಬಾ ತಡವಾಗಬಹುದು. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಫ್ಲಾಟಿಂಗ್ ಸಮಸ್ಯೆಯನ್ನು ಬಗೆಹರಿಸಬೇಕು. ಈ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಮುಂದೆ ಬಡವರು ಇನ್ನಷ್ಡು ಕಷ್ಟ ಅನುಭವಿಸಬೇಕಾಗುತ್ತದೆ. ಸರಕಾರ ಕೂಡಲೇ ಪ್ಲಾಟಿಂಗ್ ವಿಚಾರದಲ್ಲಿ ಕೈಯ್ಯಾಡಿಸಬೇಕು. ಸಮಸ್ಯೆ ಪರಿಹರಿಸಿ ಅರ್ಜಿ ಹಾಕಿದ ಕನಿಷ್ಟ ಮೂರು ತಿಂಗಳಲ್ಲಿ ಫ್ಲಾಟಿಂಗ್ ಪೂರ್ಣವಾಗುವಂತೆ ವ್ಯವಸ್ಥೆಯಾಗಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಭಾಧ್ಯಕ್ಷರಾದ ಸಚಿವ ದಿನೇಶ್ ಗುಂಡೂರಾವ್ ಶಾಸಕ ಅಶೋಕ್ ರೈ ಹೇಳಿದ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ಫ್ಲಾಟಿಂಗ್ ಸಮಸ್ಯೆ ಇತ್ಯರ್ಥವಾಗುವಲ್ಲಿ ಖಾಸಗಿ ಸರ್ವೆಯರ್ ಗಳ ಬಳಕೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹರಿಸವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here