ಪುತ್ತೂರು: ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್ ಮಹಾಸಭೆ ಆರೀಫ್ ಕೊರಿಂಗಿಲ ಅಧ್ಯಕ್ಷತೆಯಲ್ಲಿ ನಡೆಯಿತು.
ಹಮೀದ್ ಫೈಝಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಪ್ರ.ಕಾರ್ಯದರ್ಶಿ ಜಾಬಿರ್ ಡೆಮ್ಮಂಗರ ವರದಿಯನ್ನು ವಾಚಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಮುಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಆಯ್ಕೆಯಾದರು.
ಮುಖ್ಯ ಸಲಹೆಗಾರರಾಗಿ ಶರೀಫ್ ಅಂಕತ್ತಳ, ಶರೀಫ್ ಎಂಪೆಕಲ್ಲು, ಆರಿಫ್ ಕೊರಿಂಗಿಲ, ಮಹಮ್ಮದ್ ಕುಂಞಿ ತಲಪ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ಬಾಸ್ ಅಲಿ ಕುಕ್ಕುವಳ್ಳಿ, ಉಪಾಧ್ಯಕ್ಷರಾಗಿ ಹಮೀದ್ ಫೈಝಿ ಉಸ್ತಾದ್ ಬೆಂಗತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಕೊರಿಂಗಿಲ, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಕೊರಿಂಗಿಲ, ಕೋಶಾಧಿಕಾರಿಯಾಗಿ ಬಾತಿಶಾ ಕೊರಿಂಗಿಲ ಆಯ್ಕೆಯಾದರು.
ಪತ್ರಿಕಾ ಪ್ರತಿನಿಧಿಯಾಗಿ ಮುಜಮ್ಮಿಲ್ ಝಮ್ಮಿ ಕೊರಿಂಗಿಲ, ಸಂಘಟನಾ ಕಾರ್ಯದರ್ಶಿಯಾಗಿ ಝಕರಿಯ ಕೊರಿಂಗಿಲ, ಜಾಬಿರ್ ಡಮ್ಮಂಗರ, ಸೌದಿ ಅರೇಬಿಯಾ ರಿಸೀವರ್ ಆಗಿ ಉದೈಫ್ ಕೊರಿಂಗಿಲ, ಕತಾರ್ ರಿಸೀವರ್ ಆಗಿ ಶಾಜು ಟಿ.ಎ, ದುಬೈ ರಿಸೀವರ್ ಆಗಿ ಅಸ್ಕರ್ ಅಲಿ ಕೊರಿಂಗಿಲ ಆಯ್ಕೆಯಾದರು.
45 ಮಂದಿ ಸದಸ್ಯರನ್ನು ಜಮಾಅತ್ ಗಲ್ಫ್ ವಿಂಗ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಪತ್ರಿಕಾ ಪ್ರತಿನಿಧಿಯಾದ ಮುಜಮ್ಮಿಲ್ ಝಮ್ಮಿ ಕೊರಿಂಗಿಲ ತಿಳಿಸಿದ್ದಾರೆ. ಝಕರಿಯ ಕೊರಿಂಗಿಲ ಸ್ವಾಗತಿಸಿ ವಂದಿಸಿದರು.