ಸುಳ್ಯ ಪದವು- ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ “ಮಧುವನ 2024”

0

ವಿದ್ಯಾರ್ಥಿಗಳಿಗೆ ಉಚಿತ ಗುರುತಿನ ಚೀಟಿ ವಿತರಣೆ


ಸುಳ್ಯ ಪದವು: ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಜು.2ರಂದು ಗಂಟೆಯಿಂದ ದಿವಂಗತ ಡಾ| ಕೆ .ಪಿ ಬಾಲಕೃಷ್ಣ ರೈ ಮಧುವನ ಇವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ “ಮಧುವನ-2024” ಎಂಬ ವಿನೂತನ ಸಮಾರಂಭವು ಬಾಲ ರಾಜ್ ರೈ ವಕೀಲರು ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ ಸತ್ಯಶಂಕರ ಭಟ್ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇಮ ನಾರಾಯಣ ಕಲ್ಲುರಾಯ ಮತ್ತು ಸಂತೋಷ್ ಆಳ್ವ ಗಿರಿಮನೆ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಸಂಸ್ಥೆಯ ಮುಖ್ಯೋಪಾಧ್ಯಾಯ ಸುಕೇಶ್ ರೈ ಎನ್ ಇವರು ಪ್ರಾಸ್ತಾವಿಕ ಮಾತಿನೊಂದಿಗೆ ಎಲ್ಲರನ್ನು ಸ್ವಾಗತಿಸಿದರು, ಸಂಸ್ಥೆಯ ಸಂಚಾಲಕ ಮಹದೇವ ಭಟ್ ಅತಿಥಿಗಳನ್ನು ಗೌರವಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ಸಂಸ್ಥೆಯ ಸಮಾರಂಭದ ಅಧ್ಯಕ್ಷ ಶಿವರಾಮ್ ಹೆಚ್. ಡಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

1 ರಿಂದ 10 ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಮಧುವನ-2024 ಪ್ರಾಯೋಜಕತ್ವದಲ್ಲಿ ಉಚಿತವಾಗಿ ಗುರುತಿನ ಚೀಟಿಯ ವಿತರಣಾ ಕಾರ್ಯಕ್ರಮ ನಡೆಯಿತು. ನಂತರ1-4 ತರಗತಿ ವಿದ್ಯಾರ್ಥಿಗಳಿಗೆ ಅಭಿನಯ ಗೀತೆ, 5,6,7 ತರಗತಿ ವಿದ್ಯಾರ್ಥಿಗಳಿಗೆ ಜನಪದ ಗೀತೆ 8_10 ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಚಲನಚಿತ್ರ ಗೀತೆಗಳು ಹಾಗೂ ತುಳು ಗೀತೆಗಳು ಹಾಗೂ ಪೋಷಕರಿಗೆ “ಗೀತ ಗಾಯನ” ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಪ್ರೇಮ ನಾರಾಯಣ ಕಲ್ಲುರಾಯದಾಮೋದರ ಮರದ ಮೂಲೆ ಸಂಗೀತ ಶಿಕ್ಷಕರು ಹಾಗೂ ಸದಾನಂದ ಕಾಣಿಯೂರು ಸಹಕರಿಸಿದರು. ಮುಖ್ಯ ಶಿಕ್ಷಕ ಸುಕೇಶ್ ರೈ ವಂಧಿಸಿ.ಪ್ರೀತಾ ವಂದಿಸಿ, ಪ್ರಶಾಂತಿ ರೈ ಕಾರ್ಯಕ್ರಮ ನಿರೂಪಿಸಿದರು.

ಭಾವಚಿತ್ರ ಸ್ಪರ್ಧೆ;
ಪ್ರಥಮ-ಫಾತಿಮಾತ್ ರಮೀಜಾ (10ನೇ ತರಗತಿ)
ದ್ವಿತೀಯ; ಆಶಿಕಾ ಸಿ (10ನೇ ತರಗತಿ)
ತೃತಿಯ; ಪ್ರೀತಿ ಆರ್ ಶೆಟ್ಟಿ (10ನೇ ತರಗತಿ) ಕನ್ನಡ ಚಲನಚಿತ್ರ ಗೀತೆ; (8,9,10)ಪ್ರಥಮ- ಸಾರಿಕಾ(10 ನೇ ತರಗತಿ) ದ್ವಿತೀಯ ತೇಜಸ್(9 ನೇ ತರಗತಿ) ತೃತೀಯ ಪ್ರಣಿತ್(8ನೇ ತರಗತಿ)ತುಳು ಗೀತೆಗಳು(8,9,10) ಪ್ರಥಮ ಸಾರಿಕಾ (10ನೇ ತರಗತಿ) ದ್ವಿತೀಯ ಚೈತ್ರ (9ನೇ ತರಗತಿ) ತೃತೀಯ ಚಿತ್ರ ಶ್ರೀ (10ನೇ ತರಗತಿ) ಜನಪದ ಗೀತೆಗಳು:(5,6,7) ಪ್ರಥಮ ರೋಶನ್ (6ನೇ ತರಗತಿ) ದ್ವಿತೀಯ ಅದ್ವಿತ್ (6ನೇ ತರಗತಿ) ತೃತೀಯ ಹಸ್ತಾಶ್ರೀ ಕೆ( 5ನೇ ತರಗತಿ) ಅಭಿನಯ ಗೀತೆ(3,4) ಪ್ರಥಮ ಕ್ಷಿತಿ ಕೆ (4ನೇ ತರಗತಿ) ದ್ವಿತೀಯ ಅಫ್ರಾ ಫಾತಿಮಾ (3ನೇ ತರಗತಿ )ತೃತೀಯ ಸುಹಾನಿ (3ನೇ ತರಗತಿ) ಅಭಿನಯ ಗೀತೆ ಪ್ರಥಮ ವೈಷ್ಣವಿ (2ನೇ ತರಗತಿ) ದ್ವಿತೀಯ ಚೇತನ (2ನೇ ತರಗತಿ) ತೃತೀಯ ಗಗನ್ ದೀಪ್ (2 ತರಗತಿ) ಪೋಷಕರ ಗೀತಾ ಗಾಯನ ಸ್ಪರ್ಧೆ ಪ್ರಥಮ: ರೂಪ ಮತ್ತು ರಮಾಕಾಂತಿ
ದ್ವಿತೀಯ;ಮಮತಾ ತೃತೀಯ ;ಗಿರೀಶ್ ಎಲ್ಲಾ ಶಿಕ್ಷಕರು ಸಹಕರಿಸಿದರು

LEAVE A REPLY

Please enter your comment!
Please enter your name here