ನಾವು ಉದ್ಯೋಗಕ್ಕೆ ಜೋಡಿಸುವ ಕೊಂಡಿ ಮಾತ್ರವಲ್ಲ ನಿಮ್ಮ ಬೆನ್ನ ಹಿಂದಿದ್ದೆವೆ – ಅಶೋಕ್ ಕುಮಾರ್ ರೈ
ಪುತ್ತೂರು: ಯುವ ಜನತೆಗೆ ಕೆಲಸ ಕೊಟ್ಟರೆ ಅವರು ಉತ್ತಮ ಪ್ರಜೆಯಾಗುತ್ತಾರೆ. ಅವರ ಆರ್ಥಿಕ ಗುಣಮಟ್ಟ ಬೆಳೆಯುತ್ತದೆ ಎಂಬ ದೃಷ್ಟಿಕೋನದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕನಸಿನಂತೆ ಈಗಾಗಲೇ ಹಲವು ಮಂದಿ ಯುವ ಜನತೆಗೆ ಉದ್ಯೋವಕಾಶ ಕೊಡಿಸುತ್ತಿರುವ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನಿಂದ ಇದೀಗ ಐ ಪೋನ್ ಕಂಪೆನಿ ಬೆಂಗಳೂರು ಇದರ ಆಶ್ರಯದಲ್ಲಿ ಮೊಬೈಲ್ ಕಂಪೆನಿಗೆ ಸುಮಾರು 400 ಮಂದಿಗೆ ಉದ್ಯೋಗವಕಾಶ ಕಲ್ಪಿಸುವ ಕಾರ್ಯಕ್ರಮ ಜು.6ರಂದು ಪುತ್ತೂರು ಶಾಸಕ ಕಚೇರಿ ಸಭಾಂಗಣನದಲ್ಲಿ ನಡೆಯಿತು. ಸುಮಾರು 400 ಕ್ಕೂ ಮಿಕ್ಕಿ ಮಂದಿ ಉದ್ಯೋಗವಕಾಶದ ಅಪೇಕ್ಷಿತರು ಸಭೆಯಲ್ಲಿ ಪಾಲ್ಗೊಂಡು ನೊಂದಾವಣೆ ಮಾಡಿಕೊಂಡು ನೇರ ಸಂದರ್ಶನದಲ್ಲಿ ಪಾಲ್ಗೊಂಡರು.
ನಾವು ಉದ್ಯೋಗಕ್ಕೆ ಜೋಡಿಸುವ ಕೊಂಡಿ ಮಾತ್ರವಲ್ಲ ನಿಮ್ಮ ಬೆನ್ನ ಹಿಂದಿದ್ದೆವೆ:
ರೈ ಎಸ್ಟೇಟ್ ಎಜ್ಯುಕೇಶನಲ್, ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕರಾಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಯುವ ಜನತೆಗೆ ಕೆಲಸ ಕೊಟ್ಟರೆ ಮಾತ್ರ ಅವರ ತಂದೆ ತಾಯಿ ಮಾಡಿದ ಶ್ರಮ ಅರ್ಥಪೂರ್ಣವಾಗುತ್ತದೆ. ಒಬ್ಬ ಶಾಸಕನಾದರೆ ರಸ್ತೆ, ನೀರು ಮಾತ್ರವಲ್ಲ ಯುವ ಜನತೆಗೆ ಕೆಲಸ ಕೊಡಿಸುವಲ್ಲಿಯೂ ನೆಮ್ಮದಿ ಕಾಣಬೇಕು. ಆಗ ಯುವ ಜನತೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯ. ಅವರಿಗೆ ಅವರ ಮನೆಯವರನ್ನು ನೋಡಿಕೊಳ್ಳುವ ಕೆಲಸ ಆಗುತ್ತದೆ. ಎಲ್ಲರಿಗೂ ಇಂಜಿನಿಯರಿಂಗ್, ಡಾಕ್ಟರ್ ಆಗಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಾನು ಶಾಸಕನಾದ ಬಳಿಕ ಸಮಾಜದಲ್ಲಿರುವ ಎಲ್ಲಾ ಭಾಗದಲ್ಲೂ ಕೆಲಸ ಅವಶ್ಯಕತೆ ಇದೆ ಎಂದು ಮನಗಂಡು. ಯುವ ಜನತೆಗೆ ಆದಷ್ಟು ಕೆಲಸ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇತ್ತೀಚಿಗಿನ ದಿನ ಸುಮಾರು 270 ಮಂದಿಗೆ ಕೆಲಸ ಕೊಡಿಸಲಾಗಿದೆ. ಮಹಾಲಿಂಗೇಶ್ವರ ಐಟಿಐಯಲ್ಲೂ ಅಲ್ಲಿರುವ 76 ಜನರಿಗೂ ಕೆಲಸ ಆಗಿದೆ. ಹೀಗೆ ನಾವು ನಿಮ್ಮನ್ನು ಜೋಡುಸುವ ಕೊಂಡಿ ರೀತಿಯಲ್ಲಿ ಕೆಲಸ ಮಾಡಬಹುದು. ವಿದ್ಯಾಭ್ಯಾಸ, ಅರ್ಹತೆ ನಿಮ್ಮದು. ನಾವು ನಿಮ್ಮನ್ನು ಕೆಲಸಕ್ಕೆ ಜೋಡಿಸುವ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಉದ್ದೇಶವಿಟ್ಟು ಕೆಲಸ ಮಾಡುತ್ತಿಲ್ಲ. ಆದರೆ ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ. ರೈ ಎಜ್ಯುಕೇಶನಲ್ ಟ್ರಸ್ಟ್ ನಿಮ್ಮ ಬೆನ್ನ ಹಿಂದಿದೆ. ನೀವು ಬೆಂಗಳೂರಿಗೆ ಹೋದಾಗ ಕೂಡಾ ಏನಾದರೂ ತೊಂದರೆ ಆದರೆ ನೀವು ನಮ್ಮನ್ನು ಸಂಪರ್ಕಿಸಬಹುದು. ನಮ್ಮ ಟ್ರಸ್ಟ್ನ ಎರಡು ಮೂರು ನಂಬರ್ ಪಡೆದುಕೊಳ್ಳಿ. ಬೆಂಗಳೂರಿನಲ್ಲೂ ನಿಮಗೆ ಸ್ಪಂಧನೆಕೊಡಿಸುವ ಕೆಲಸ ನಮ್ಮ ಬೆಂಗಳೂರು ಟೀಮ್ನಿಂದ ಕೂಡಾ ಮಾಡುತ್ತೇವೆ. ಅಲ್ಲೇನಾದರೂ ನಿಮಗೆ ಆರೋಗ್ಯದ ತೊಂದರೆ ಆದರೆ ತಿಳಿಸಿ ಎಂದ ಅವರು ಶೇ.100 ಎಲ್ಲರಿಗೂ ಕೆಲಸ ಸಿಗುತ್ತದೆ.ನೀವು ಮನಸ್ಸಿಟ್ಟು ಕೆಲಸ ಮಾಡಬೇಕು. ಎಲ್ಲರು ವೈಟ್ ಕಾಲರ್ ಜಾಬ್ ಸೆಲೆಕ್ಟ್ ಮಾಡುತ್ತಾರೆ. ಆದರೆ ಕೆಲಸದಲ್ಲಿ ಅಸಡ್ಡೆ ಬೇಡ. ಅದು ಸಣ್ಣ ಕೆಲಸವಾಗಲಿ ದೊಡ್ಡ ಕೆಲಸ ಆಗಲಿ. ಈ ಕೆಲಸ ನಿಮ್ಮನ್ನು ಅಪ್ಗ್ರೇಡ್ ಮಾಡಲು ಸಾಧ್ಯವಾಗುತ್ತದೆ. ಇದು ನಿಮಗೆ ಉತ್ತಮ ಪೌಂಡೇಶನ್ ಆಗುತ್ತದೆ. ಬೆಂಗಳೂರಿಗೆ ಹೋಗಿ 2 ವರ್ಷ ಕೆಲಸ ಮಾಡಿ ನಿಮ್ಮ ಆಟಿಟ್ಯೂಡೇ ಚೇಂಜ್ ಆಗುತ್ತದೆ ಎಂದು ಶಾಸಕರು ಹೇಳಿದರು.
ಕನಸು ನನಸು ಮಾಡಿಕೊಳ್ಳಿ:
ಹುಡುಗರು ವಿದ್ಯಾಭ್ಯಾಸ ಆದ ಬಳಿಕ ಕೆಲಸ ಇಲ್ಲದಿದ್ದರೆ ನಮ್ಮಂತ ರಾಜಕಾರಣಿಗಳು ಅವರಿಗೆ ರಾಜಕೀಯ ಕೆಲಸ ಮಾಡಲು ಸೂಚಿಸುತ್ತಾರೆ. ಅದು ಮಾಡು ಇದು ಮಾಡು. ಇನ್ನೊಬ್ಬರಿಗೆ ಉಪದ್ರ ಮಾಡು. ಬೇರೆ ಬೇರೆ ವಿಚಾರಗಳನ್ನು ಅವರಿಗೆ ತುಂಬುವ ಕೆಲಸ ಆಗುತ್ತದೆ. ಇದು ಆಗಬಾರದು ಎಂದು ನಾನು ಯುವಜನತೆಗೆ ಕೆಲಸ ಕೊಡಿಸುವ ಉದ್ದೇಶ ಇಟ್ಟುಕೊಂಡಿದ್ದೇನೆ. ನೀವು ಸ್ವಂತ ಉತ್ಪತ್ತಿ ಮಾಡುವ ಕನಸು ಕಂಡುಕೊಳ್ಳಿ. ಆಗ ಅದಕ್ಕೆ ಬೆಲೆ ಇರುತ್ತದೆ. ನೀವೆಲ್ಲ ದೇಶದ ಸೊತ್ತು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಟ್ರಸ್ಟ್ನ ಕಾರ್ಯಾದ್ಯಕ್ಷ ಸುದೇಶ್ ಶೆಟ್ಟಿ, ಟ್ರಸ್ಟ್ನ ನಿದೇಶಕ ಜಯಪ್ರಕಾಶ್ ಬದಿನಾರು, ನಿಹಾಲ್ ಪಿ ಶೆಟ್ಟಿ ವಿವಿಧ ಮಾಹಿತಿ ನೀಡಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಟ್ರಸ್ಟ್ನ ಗೌರವ ಸಲಹೆಗಾರ ಮಹಮ್ಮದ್ ಬಡಗನ್ನೂರು, ನಿದೇರ್ಶಕರಾದ ಮುರಳಿಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ, ಪೀಟರ್ಸ್ ಓಕ್ಸ್ ಇಂಡಿಯ ಕಂಪೆನಿಯ ನಿರ್ದೇಶಕ ಬಾಲಕೃಷ್ಣ ರೈ, ಪ್ರಶಾಂತ್, ಪುಡಾ ಅಧ್ಯಕ್ಷ ಭಾಸ್ಕರ್ ಗೌಡ ಕೋಡಿಂಬಾಳ, ಸದಸ್ಯರಾದ ಲ್ಯಾನ್ಸಿಮಸ್ಕರೇನ್ಹಸ್, ಅನ್ವರ್ ಖಾಸಿಂ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಕೆಲಸ ಕೊಡಿಸುವುದನ್ನು ಈ ಹಿಂದೆ ಯಾರೂ ಮಾಡಿಲ್ಲ
ನಿಮಗೆ ಕೆಲಸ ಕೊಡುವ ಜವಾಬ್ದಾರಿ ಸರಕಾರ ಮತ್ತು ಸಮಾಜದ ಮೇಲಿದೆ. ನಮ್ಮ ಮೇಲಿದೆ. ಕೆಲಸ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಸ್ಕಿಲ್ ಡೆವೆಲಪ್ ಮಾಡಬೇಕು. ಈ ಹಿಂದೆ ಯಾರು ಮಾಡಿಲ್ಲ ಈಗಲೂ ಯಾರು ಮಾಡಿಲ್ಲ, ನಾನು ನನ್ನನ್ನು ಹೊಗಳುವುದಲ್ಲ. ನಮಗೆ ಇದರಲ್ಲಿ ತುಂಬಾ ಖರ್ಚಿದೆ. ಎಷ್ಟು ಖರ್ಚಾದರೂ ಪರವಾಗಿಲ್ಲ. 100 ಜನರಿಗೆ ಕೆಲಸ ಕೊಟ್ಟರೆ ನಮಗೇನು ಇದ್ರಲ್ಲಿ ಕಮೀಷನ್ ಸಿಗುವುದಿಲ್ಲ. ನಮಗೆ ಧನ್ಯತಾ ಭಾವ ಮಾತ್ರ. ಅಬ್ಬಬ್ಬಾ ಸಿಕ್ಕಿದ್ರೆ ಮುಂದೆ ಓಟಿಗೆ ನಿಲ್ಲುವಾಗ ಓಟು ಹಾಕಿದ್ರೆ ಸಾಕು. ಆದ್ರೆ ಇಲ್ಲಿ ಓಟಿನ ಒಂದೇ ವಿಚಾರವಲ್ಲ. ದೇಶ ವಿಶ್ವಗುರುವಾಗಬೇಕಾದರೆ ಸಮಾಜ ಮುಂದುವರಿಯಬೇಕಾದರೆ ನಮ್ಮಲ್ಲಿರುವ ಯುವಕರ ಶಕ್ತಿಯನ್ನು ಉಪಯೋಗ ಮಾಡಿ ಆರ್ಥಿಕವಾಗಿ ಸಬಲರಾದರೆ ದೇಶ ಮುಂದೆ ಬರಲು ಸಾಧ್ಯ. ರಾಜಕೀಯ ವ್ಯಕ್ತಿಗಳು ಭಾಷಣ ಮಾಡಿದ ತಕ್ಷಣ ದೇಶ ಉದ್ದಾರ ಆಗುವುದಿಲ್ಲ. ನಾವು ಬಾಯಿಯಲ್ಲಿ ಹೇಳಿದನ್ನು ಕೈಯಲ್ಲಿ ಮಾಡಿದರೆ ಮಾತ್ರ ಅದಕ್ಕೆ ಗೌರವ.
ಅಶೋಕ್ ಕುಮಾರ್ ರೈ