ನೆಲ್ಯಾಡಿ: ಕೆಎಸ್ಆರ್ಟಿಸಿ ಬಸ್ಸು ಹಾಗೂ ಆಲ್ಟೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಆಲ್ಟೋ ಕಾರು ಚಾಲಕ ಗಾಯಗೊಂಡಿರುವ ಘಟನೆ ಜು.7ರಂದು ಬೆಳಿಗ್ಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಬರ್ಚಿನಹಳ್ಳ ಎಂಬಲ್ಲಿ ನಡೆದಿದೆ.
ಆಲ್ಟೋ ಕಾರು ಚಾಲಕ, ಬೆಂಗಳೂರು ನಿವಾಸಿ ಹರ್ಷಾ(46ವ.)ಗಾಯಗೊಂಡವರಾಗಿದ್ದಾರೆ. ಇವರು ತನ್ನ ಆಲ್ಟೋ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ವೇಳೆ ಗುಂಡ್ಯ ಸಮೀಪದ ಬರ್ಚಿನಹಳ್ಳ ತಲುಪುತ್ತಿದ್ದಂತೆ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಆಲ್ಟೋ ಕಾರು ಚಾಲಕ ಹರ್ಷ ಅವರು ಗಂಭೀರ ಗಾಯಗೊಂಡಿದ್ದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.