





ನಿಡ್ಪಳ್ಳಿ: ತುಳುನಾಡ್ ಫ್ರೆಂಡ್ಸ್ ತೂಂಬಡ್ಕ ಪಾಣಾಜೆ ಇದರ ಆಶ್ರಯದಲ್ಲಿ ಆ.4 ರಂದು ಬಾಜಗುಳಿ ಗದ್ದೆಯಲ್ಲಿ ನಡೆಯುವ ಕೆಸರಕಂಡ ಉಚ್ಚಯ- 2024 ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಠಾರದಲ್ಲಿ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ ಇವರು ಬಿಡುಗಡೆಗೊಳಿಸಿದರು. ತಮ್ಮಣ್ಣ ನಾಯ್ಕ ಸುಡುಕುಳಿ, ಪ್ರದೀಪ್ ಪಾಣಾಜೆ ಮತ್ತು ತುಳುನಾಡ್ ಫ್ರೆಂಡ್ಸ್ ನ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











