ಜು.12: ನಾಗಪ್ರತಿಷ್ಠೆ, ಆಶ್ಲೇಷಾ ಪೂಜೆ, ಅಘೋರ ಹೋಮ, ದುರ್ಗಾಪೂಜೆ
ಪುತ್ತೂರು : ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ರಕೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ದಲ್ಲಿ ಹಿರಿಯರ ಅನುಭವದ ಮೇರೆಗೆ ಕೋಟಿ ಚೆನ್ನಯ ಗರಡಿಯ ಹಿಂಭಾಗದಲ್ಲಿ ದೈವಗಳ ಸಾನಿಧ್ಯ ಹಾಗೂ ನಾಗಬನವಿದೆಯೆಂದು ತಿಳಿದು ಬಂದಿರುತ್ತದೆ. ಆ ಪ್ರಕಾರ ಜ್ಯೋತಿಷ್ಯರಾದ ಪಂಜ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಸಿದಾಗ ಸ್ಥಳದ ವನ ಸಾನಿಧ್ಯ ಸಂಕಲ್ಪದ ಹುತ್ತವಿರುವಲ್ಲಿ ಅತೀ ಪುರಾತನ ನಾಗ ಸಾನಿಧ್ಯವಿದ್ದು ಅದರ ಒಂದಂತವನ್ನು ಈಗಾಗಲೇ ರಾಮಜಾಲು ಕೋಟಿ ಚೆನ್ನಯ ಗರಡಿಯ ಭಾಗದಲ್ಲಿ ಪ್ರತಿಷ್ಠೆ ನಡೆಸಿಕೊಂಡಿದ್ದರೂ ಪೂರ್ಣತೆ ಇಲ್ಲದಿರುವುದರಿಂದ ಮೂರು ಹೆಡೆಯ ಒಂದು ಕೃಷ್ಣಶಿಲಾ ನಾಗಬಿಂಬವನ್ನು ತಂದು ಜಲಾಧಿವಾಸ ಕ್ರಿಯಾ ಪೂರ್ವಕ ಹುತ್ತದ ಭಾಗದಿಂದ ನಾಗಾರಾಜ ಸಂಕಲ್ಪ ಚೈತನ್ಯವನ್ನು ಉದ್ವಾಸನೆ ಮಾಡಿ ನೂತನ ಮೂರು ಹಡೆಯ ಬಿಂಬಕ್ಕೆ ಸೇರಿಸಿ ರಾಮಚಾಲು ಕೋಟಿ ಚೆನ್ನಯ ಗರಡಿಯ ಪಕ್ಕವಿರುವ ನಾಗನ ಕಟ್ಟೆಯಲ್ಲಿರುವ ಒಂದು ಹೆಡೆಯ ಬಿಂಬದೊಂದಿಗೆ ಪ್ರತಿಷ್ಠಾಪಿಸಿಕೊಳ್ಳಬೇಕು. ಈ ನಾಗ ಸಾನಿಧ್ಯ ನಾಗರಾಜ ನಾಗಕನ್ನಿಕಾ ಸಂಕಲ್ಪದಲ್ಲಿ ಆರಾಧನೆ ಮಾಡಬೇಕಾಗಿ ತಿಳಿದುಬಂದಿರುತ್ತದೆ. ಅದರಂತೆ ಪ್ರಥಮ ಅಂಗವಾಗಿ ಜು.9ರಂದು ಬೆಳಿಗ್ಗೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಸರ್ಪ ಸಂಸ್ಕಾರ ಆರಂಭಗೊಳ್ಳಲಿದೆ. ಜು.12 ರಂದು ಸರ್ಪ ಸಂಸ್ಕಾರ ಮಂಗಳ ಆಗಲಿದ್ದು ಬಳಿಕ ಆಶ್ಲೇಷಾ ಪೂಜೆ ನಡೆದು ರಾಮಜಾಲು ಗರಡಿಯಲ್ಲಿ ನಾಗ ಪ್ರತಿಷ್ಠೆ ನಡೆಯಲಿದೆ. ರಾತ್ರಿ ಅಘೋರ ಹೋಮ, ದುರ್ಗಾ ಪೂಜೆ ನಡೆಯಲಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಊರಿನ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.