ವೈಟ್‌ಲಿಫ್ಟಿಂಗ್ ಸ್ಪರ್ಧೆ- ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ ಬಿ. ಗೆ ಐದನೇ ಸ್ಥಾನ

0

ಪುತ್ತೂರು: ಮಧ್ಯಪ್ರದೇಶದ ಇಂದೋರ್ ನ ಶ್ರೀರಾಮ್ ಜಿಮ್ನಾಸಿಯಮ್ ನಲ್ಲಿ ಜೂನ್ 17 ರಿಂದ ಜೂನ್ 21 ರವರೆಗೆ ನಡೆದ ASMITA ಖೇಲೋ ಇಂಡಿಯಾ ಮಹಿಳೆಯರ ಯೂತ್ ವಿಭಾಗದ 76ಕೆಜಿ ವೈಟ್‌ಲಿಫ್ಟಿಂಗ್ ಝೋನಲ್ ಲೀಗ್ ಸ್ಪರ್ಧೆಯಲ್ಲಿ ನರೇಂದ್ರ ಪ.ಪೂ. ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಬಿ. ಇವರು ಭಾಗವಹಿಸಿ ಐದನೇ ಸ್ಥಾನವನ್ನು ಪಡೆದಿರುತ್ತಾರೆ.


ಇವರು ಬೆಟ್ಟಂಪಾಡಿಯ ಬೈಲಾಡಿ ನಿವಾಸಿಗಳಾದ ನಿತ್ಯಾನಂದ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕಿ ನಮಿತಾ ಕೆ.ಕೆ. ಇವರ ಪುತ್ರಿ.
ಈ ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು,ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here