ಅಡಿಕೆ ರೋಗ, ಕೃಷಿಕರ ಇತರೇ ಸಮಸ್ಯೆ ಕುರಿತು ಪಂಜಿಗುಡ್ಡೆ ಈಶ್ವರ ಭಟ್ ಮನೆಯಲ್ಲಿ ಸಂವಾದ ಕಾರ್ಯಕ್ರಮ

0

ದ ಕ ಜಿಲ್ಲೆಯ ಕೃಷಿಕರಲ್ಲಿ ಹೋರಾಟ ಮನೋಭಾವ ಇಲ್ಲದೇ ಇರುವುದರಿಂದ ಅಡಿಕೆ ಕೃಷಿಕರು ಆತಂಕದಲ್ಲೇ ಇದ್ದಾರೆ: ಅಶೋಕ್ ರೈ

ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಹೋರಾಟ ಮನೋಭಾವ ಇಲ್ಲದೇ ಇರುವುದು ನಮ್ಮ ಹಿನ್ನಡೆಗೆ ದೊಡ್ಡ ಕಾರಣವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಶಾಸಕರು ಹಾಗೂ ಪುತ್ತೂರು ತೋಟಗಾರಿಕಾ ಇಲಾಖೆ ಮತ್ತುಲಯನ್ಸ್ ಕ್ಲಬ್ ಪಾಣಾಜೆ ಇದರ ಆಶ್ರಯದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಪ್ರಗತಿಪರ ಕೃಷಿಕರೂ ಆದ ಪಂಜಿಗುಡ್ಡೆ ಈಶ್ವರ ಭಟ್‌ರವರ ಮನೆಯಲ್ಲಿ ನಡೆದ ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ರೋಗಗಳು ಮತ್ತು ಅಡಿಕೆ ಕೃಷಿಕರ ಇತರೇ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ಗುಟ್ಕಾ ಬಂದ್ ಆದರೆ ಅಡಿಕೆ ಬೆಲೆ ಪಾತಾಳಕ್ಕೆ:
ಗುಟ್ಕಾ ಇರುವ ಕಾರಣ ನಮ್ಮ ಅಡಿಕೆಯ ಮಾನ ಉಳಿದಿದೆ.ಅಡಿಕೆಗೆ ಪರ್ಯಾಯ ಬೆಳೆ ಬೆಳೆಯದೇ ಇದ್ದಲ್ಲಿ ಮುಂದೆ ಆತಂಕ ಎದುರಾಗಬಹುದು. ಅಡಿಕೆಗೆ ಪರ್ಯಾಯವಾಗಿ ಏನು ಬೆಳೆಯಬಹುದು ಎಂಬುದನ್ನು ಸಂಶೋಧಕರು ಪತ್ತೆ ಮಾಡಬೇಕು. ಅಡಕೆ ಕೃಷಿಯ ಸಂಶೋಧನೆಗೆ ಇರುವ ಸಂಸ್ಥೆಗಳು ಈ ವಿಚಾರದಲ್ಲಿ ಮುಂದೆ ಬರಬೇಕು. ಅಡಿಕೆ ಬೆಳೆಗೆ ಬರುವ ರೋಗಗಳನ್ನು ಪತ್ತೆ ಮಾಡಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು

ಚಿತ್ರ ವಿಷ್ಣು ಸ್ಟುಡಿಯೋ


ಅಡಿಕೆ ಆಮದಿನಲ್ಲಿ ದೊಡ್ಡ ಲಾಭಿ ಇದೆ :
ಕೇಂದ್ರ ಸರಕಾರದ ಅಧಿಕಾರಿಗಳಿಗೆ ಅಡಿಕೆ ಬೆಳೆಯ ಬಗ್ಗೆ ಮಾಹಿತಿ ಇಲ್ಲದೆ ಇರುವುದು ದುರಂತ.ಅಡಿಕೆ ಆಮದನ್ನು ಕೇಂದ್ರ ಸರಕಾರ ನಿಲ್ಲಿಸಿದರೆ ಅಡಿಕೆಗೆ 500 ರೂ. ದರ ಆಗಬಹುದು ಎಂದ ಶಾಸಕರು, ಹವಾಮಾನ ಆಧಾರಿತ ಬೆಳೆ ವಿಮೆ ಅಡಿಕೆಗೆ ಪರಿಹಾರವಲ್ಲ. ಇದನ್ನು ನಿಲ್ಲಿಸಬೇಕು ಎಂಬ ಲಾಭಿಯೂ ನಡೆಯುತ್ತಿದೆ. ಹವಾಮಾನ ಆಧಾರಿತ ವಿಮೆಯು 60 % ರಾಜ್ಯ ಸರಕಾರದ ಅನುದಾನ, 30% ಕೇಂದ್ರದ ಅನುದಾನ 10% ವಿಮಾ ಕಂಪೆನಿಯ ಮೊತ್ತವಾಗಿದೆ ಇದರಲ್ಲಿ ರಾಜ್ಯ ಸರಕಾರದ ಪಾಲು ಜಾಸ್ತಿ ಇದೆ ಎಂದು ಹೇಳಿದರು.


ಅಡಿಕೆ ನಾಶವಾದರೆ ಭಿಕ್ಷೆ ಬೇಡುವ ಸ್ಥಿತಿ:
ಎಲ್ಲಿಯಾದರೂ ಅಡಕೆ ಬೆಳೆ ನಾಶ ಅಥವಾ ಬೆಲೆ ಕಡಿಮೆಯಾದರೆ ಅಡಿಕೆ ಕೃಷಿಕರು ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಅದಕ್ಕಿಂತ ಮುಂಚೆ ಹೋರಾಟ ಮಾಡುವ ಮೂಲಕ ಉಳಿಸಿಕೊಳ್ಳುವ ಕೆಲಸವನ್ನುಮಾಡಬೇಕು ಎಂದು ಶಾಸಕರು ಹೇಳಿದರು. ಪ್ರಗತಿಪರ ಕೃಷಿಕ ರಮೇಶ್ ದೇಲಂಪಾಡಿರವರು ವಿಷಯ ಮಂಡನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ದಿ ರೂರಲ್ ಮಿರರ್ ಸಂಪಾದಕರಾದ ಮಹೇಶ್ ಪುಚ್ಚಪಾಡಿ ರವರು ಆಗಮಿಸಿ ಅಡಿಕೆ ಕೃಷಿಯ ಬಗ್ಗೆ ಆಮದಿನ ಬಗ್ಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕಾಸರಗೋಡು ಸಿಪಿಸಿಆರ್‌ಐ ಬೆಳೆ ಸಂರಕ್ಷಣೆ ವಿಭಾಗದ ಮುಖ್ಯಸ್ಥರಾದ ಡಾ| ವಿನಾಯಕ ಹೆಗಡೆ ಕೆ.,ವಿಟ್ಲ ಕೇಂದ್ರ ಪ್ರಾಂತ್ಯ ಸಿಪಿಸಿಆರ್‌ಐ ವಿಜ್ಞಾನಿ ಡಾ| ಭವಿಷ್ಯರವರು ಕೃಷಿ ಮಾಹಿತಿ ನೀಡಿದರು. ಕೃಷಿಕ ಸದಾಶಿವ ಭಟ್ ಪಡೀಲ್‌ರವರ ತೋಟದಲ್ಲಿ ಪ್ರಾತ್ಯಕ್ಷತೆ ನಡೆಸಲಾಯಿತು.


ಹಿರಿಯ ತೋಟಗಾರಿಕಾ ನಿರ್ದೇಶಕರಾದ ರೇಖಾ, ತೋಟಗಾರಿಕಾ ಇಲಾಖೆಯ ಸಹಾಯಕ ಶಿವಪ್ರಕಾಶ್ ರವರು ತೋಟಗಾರಿಕೆಯಿಂದ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು. ನ್ಯಾಯವಾದಿ ನೋಟರಿ ಚಿದಾನಂದ ಬೈಲಾಡಿ ರವರು ರೈತರಿಗೆ ಕಾನೂನು ಮಾಹಿತಿಯನ್ನು ನೀಡಿದರು. ಆರಂಭದಲ್ಲಿ ಅಜಿತ್ ಕುಮಾರ್ ಜೈನ್ ಸುರೇಶ್ ಬಲ್ನಾಡು ರವರು ಕರಿಮೆಣಸಿನ ಕೃಷಿಯ ಬಗ್ಗೆ ಮಾಹಿತಿ ನೀಡಿದರು.


ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಬಂದವರಿಗೆಲ್ಲ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ತಿಂಡಿ ತಿನಿಸುಗಳ -ಲಹಾರ ವ್ಯವಸ್ಥೆ ಹಾಗೂ ಮಧ್ಯಾಹ್ನದಿಂದ ಸಂಜೆವರೆಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಭೆಯಲ್ಲಿ ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಪುತ್ತೂರಾಯ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ,, ಉದ್ಯಮಿ ಶಿವರಾಮ ಆಳ್ವ ಕುರಿಯ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ಡಾ. ಗಣೇಶ್ ಶರ್ಮ ಕೆದಿಲ, ಸುರೇಶ್ ಕುಮಾರ್ ಸೊರಕೆ, ಆಲಿ ಪಾಣಾಜೆ , ಹಾರಕೆರೆ ನಾರಾಯಣ ಭಟ್, ಮಹಾಲಿಂಗೇಶ್ವರ ದೇವಸ್ಥಾನದ ಹರೀಶ್ ಕೆ., ಲಕ್ಷ್ಮಣ,ವಿನಯ್ ಕುಮಾರ್, ವಿಶ್ವನಾಥ,ಡಾ ಗಣೇಶ್ ಬೀಟಿಗೆ, ರಾಜಗೋಪಾಲ್ ರೈ ಆನಾಜೆ , ಸತ್ಯನಾರಾಯಣ ಭಟ್ ಪೆರುವೊಡಿ, ಗೇಡ್ಲ ಶ್ರೀಧರ ಭಟ್, ಸಂಪಾಜೆ, ಹೇಮನಾಥ ಕುರುಂಜಿ ಸುಳ್ಯ, ಆರ್. ಕೆ. ಭಟ್ ಸುಳ್ಯ ಪ್ರಭಾಕರ ರೈ ಪೆರಾಜೆ ಮಹೇಶ್ ಕುಮಾರ್ ಕರಿಕಳ, ಡಾ. ರವಿನಾರಾಯಣ, ಸದಾಶಿವ ರೈ ಜಿಲ್ತಡ್ಕ, ಅಬೂಬಕ್ಕರ್, ಮಹಾಲಿಂಗ ನಾಯ್ಕ ದೂಮಡ್ಕ, ಅಮಲ ರಾಮಚಂದ್ರ,ಮುಹಮ್ಮದ್ ಬಡಗನೂರು, ಕೃಷ್ಣಪ್ರಸಾದ್ ಆಳ್ವ, ಜಿತೇಂದ್ರ ಶೆಟ್ಟಿ,ಮೋನಪ್ಪ ಗೌಡ ತೆಂಕಿಲ ,ಡಿ. ರವಿಪ್ರಸಾದ್ ರೈ, ಪದ್ಮನಾಭ ಶೆಟ್ಟಿ, ಪ್ರಸನ್ನ ಭಟ್, ಖಾದರ್, ರೋಷನ್ ಬನ್ನೂರು, ಕೋಸ್ಟಲ್ ಕೊಕೊನಟ್ ಇಂಡಸ್ಟ್ರಿ ಮಾಲಕ ಡೆನ್ನಿಸ್ ಮಸ್ಕರೇನಸ್, ವಾಲ್ಟರ್ ಡಿಸೋಜಾ ಸಿದ್ಯಾಳ, ಎಸ್ ಆನಂದ ಮಾಸ್ಟರ್ ಪ್ಲಾನರಿ, ಪುಡಾ ಸದಸ್ಯ ಅನ್ವರ್ ಖಾಸಿಂ ಸಾಲ್ಮರ, ಅಮರನಾಥ ಗೌಡ ಸಹಿತ ಸಾವಿರಾರು ಮಂದಿ ಗಣ್ಯರು ಕೃಷಿಕರು ಪಾಲ್ಗೊಂಡಿದ್ದರು. ಜಯಶ್ರೀ ಭಟ್ ಕಾರ್ಯಕ್ರಮ ನೆರವೇರಿಸಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ರೈ ಕೋರ್ಮಂಡ ವಂದಿಸಿದರು.

ಇಂದು ನನ್ನ ಜೀವನದ ಶ್ರೇಷ್ಠ ದಿನ ಪಂಜಿಗುಡ್ಡೆ ಈಶ್ವರ ಭಟ್
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಸ್ವಾಗತಿಸಿ ಮಾತನಾಡಿ ನನ್ನ ಮನೆ ಪಂಜಿಗುಡ್ಡೆಯಲ್ಲಿ ಈ ಒಂದು ಕಾರ್ಯಕ್ರಮ ನಡೆಯುತ್ತಿರುವುದು ಮತ್ತು ಬೇರೆ ಬೇರೆ ಕಡೆಗಳಿಂದ ರೈತರು, ಬಂಧುಗಳು, ಮಿತ್ರರು, ಬಂದು ರೈತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಜೀವನದಲ್ಲಿ ಒಂದು ಶ್ರೇಷ್ಠ ದಿನವಾಗಿದೆ.ಎಂದು ಹೇಳಿದರು. ಇಂದು ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಯಾವ ಸರಕಾರ ಬಂದರೂ ರೈತರ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ ವಿನಃ ಇವತ್ತಿನವರೆಗೆ ಪರಿಹಾರವಾಗಿಲ್ಲ ಆದ್ದರಿಂದ ನಮ್ಮ ರೈತರ ಸಮಸ್ಯೆಗಳನ್ನು ಬಗೆಹರಿಸಲು, ನಮಗೆ ಆಶಾದಾಯಕವಾಗಿ ನಮ್ಮ ಶಾಸಕ ಅಶೋಕ್ ರೈ ಯವರ ನೇತೃತ್ವದಲ್ಲಿ ಇವತ್ತು ಇಲ್ಲಿ ಕಾರ್ಯಕ್ರಮವನ್ನು ನಡೆಸಲು ಅನುವುಮಾಡಿಕೊಟ್ಟಿದ್ದಾರೆ. ಶಾಸಕರು ರೈತರ ಸಮಸ್ಯೆಯನ್ನು ಬಗೆಹರಿಸಲು ಮತ್ತು ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನದಲ್ಲಿದ್ದಾರೆ. ಇಲ್ಲಿ ಇವತ್ತು ಯಾಕೆ ಕಾರ್ಯಕ್ರಮ ಇಟ್ಟಿದ್ದೀರಿ ಪುತ್ತೂರಿನಲ್ಲಿ ಬೇರೆ ಯಾವುದೇ ಸ್ಥಳವಿಲ್ಲವೇ ಎಂದು ಹಲವಾರು ಮಂದಿ ವಾಟ್ಸಾಪ್ ಮೂಲಕ ಕೇಳಿದವರು ಇದ್ದಾರೆ. ಕೇಳುವವರಿದ್ದಾರೆ ಆದರೆ ಈ ಭಾಗದ ರೈತರ ಸಮಸ್ಯೆಗಳನ್ನು, ಪರಿಹರಿಸುವ ಸಲುವಾಗಿ ಇಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.


LEAVE A REPLY

Please enter your comment!
Please enter your name here