ಕೀಳರಿಮೆ ಬದಲು ಒಳ್ಳೆಯ ಭಾವನೆಗಳನ್ನು ಹೊಂದಿ-ಡಾ.ಜಯಗೌರಿ ಹಡಿಗಾಲ್
ಪುತ್ತೂರು: ಸಮಾಜದಲ್ಲಿ ಎಲ್ಲರೂ ಒಳ್ಳೆಯವರಾಗಿ ಇರುವುದಿಲ್ಲ. ಎಲ್ಲರೂ ಕೆಟ್ಟವರಿರುವುದಿಲ್ಲ. ಯಾರು ಒಳ್ಳೆಯವರಿಲ್ಲವೋ ಅಂಥವರಿಂದ ನಾವು ದೂರವಿರಬೇಕು. ವ್ಯಕ್ತಿಯ ಬಗ್ಗೆ ಆಗಲಿ, ಸಂಘಟನೆ ಬಗ್ಗೆ ಆಗಲಿ, ನಾವು ಕೀಳರಿಮೆಯನ್ನು ಹೊಂದದೆ ಒಳ್ಳೆಯ ಭಾವನೆಗಳನ್ನು ಹೊಂದುವಂತಾಗಬೇಕು ಎಂದು ರೋಟರಿ ಜಿಲ್ಲೆ 3182, ಇದರ ಮಾಜಿ ಜಿಲ್ಲಾ ಗವರ್ನರ್ ಡಾ.ಜಯಗೌರಿ ಹಡಿಗಾಲ್‌ರವರು ಹೇಳಿದರು.
ಜು.10 ರಂದು ಸಂಜೆ ಬಪ್ಪಳಿಗೆ-ಪುತ್ತೂರು ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರಗಿದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವದ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು. ರೋಟರಿ ಎಂಬುದು ವ್ಯಕ್ತಿಯ ಜೀವನದ ಒಂದು ಭಾಗ. ರೋಟರಿ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಸಮಾನ ಮನಸ್ಕ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕಿದೆ. ಪ್ರತಿಯೋರ್ವರು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಂಡು ಜ್ಞಾನವಂತರಾಗಿ, ಪ್ರಾಣಯಾಮದಂತಹ ವ್ಯಾಯಮಗಳನ್ನು ಮಾಡುವ ಮೂಲಕ ಆರೋಗ್ಯವಂತರಾಗಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಆಸ್ವಾದಿಸುವ ಮೂಲಕ ಅನುಭವವನ್ನು ಹೊಂದುವಂತರಾಗಿ ಎಂದರು
.
ದಶಮಾನೋತ್ಸವದ ಹೊಸ್ತಿಲಲ್ಲಿರುವ ಯುವ ಕ್ಲಬ್ ಸಿಂಧೂರದಂತೆ ಪ್ರಜ್ವಲಿಸಲಿ-ಡಾ|ಹರ್ಷಕುಮಾರ್ ರೈ:
ರೋಟರಿ ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈರವರು ಬುಲೆಟಿನ್ ಎಡಿಟರ್ ಡಾ.ದೀಪಕ್ ಕೆ.ಬಿ ಸಂದಾಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಯುವ ಕ್ಲಬ್‌ನಲ್ಲಿ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯರವರು ನಮಗೆಲ್ಲಾ ಹಿರಿಯ ಸಹೋದರಿ ಇದ್ದಾಗೆ. ರೋಟರಿ ಈಸ್ಟ್‌ನಿಂದ ಪ್ರಾಯೋಜಿಸಲ್ಪಟ್ಟ ಈ ಕ್ಲಬ್ ಅನ್ನು ಒಂಭತ್ತು ಮಂದಿ ಅಧ್ಯಕ್ಷರು ಯಶಸ್ವಿಯಾಗಿ ಮುನ್ನೆಡೆಸಿದ್ದು, ಇದೀಗ ದಶಮಾನೋತ್ಸವದ ಹೊಸ್ತಿಲಲ್ಲಿರುವ ಈ ಯುವ ಕ್ಲಬ್ ಅನ್ನು ಹೆಣ್ಣಿನ ಹಣೆಯಲ್ಲಿನ ಸಿಂಧೂರದಂತೆ ಪ್ರಜ್ವಲಿಸಬಲ್ಲುದು ಎಂದರು.
ಸೂಕ್ತವಾದ ಯೋಜನೆಗಳನ್ನು ಹಾಕಿಕೊಂಡಾಗ ಜೀವನದ ನಿರ್ಧಾರ ಬದಲಾಗುತ್ತದೆ-ಡಾ|ಪೀಟರ್ ವಿಲ್ಸನ್:
ರೋಟರಿ ವಲಯ ಸೇನಾನಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್‌ರವರು ಮಾತನಾಡಿ, ಹೊಸ ತಂಡವು ತನ್ನ ಜವಾಬ್ದಾರಿ ಅರಿತು ತನ್ನ ಯೋಜನೆಗಳನ್ನು ಜಾರಿ ಮಾಡಿಸಿದಾಗ ಕ್ಲಬ್‌ಗೆ ಅರ್ಥ ಬರುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರಿಗೆ ಲಭ್ಯವಾಗುವ ಕಾರ್ಯಕ್ರಮಗಳು ಮಾಡಿದಾಗ ಕ್ಲಬ್ ಸದಸ್ಯರ ಪ್ರಯತ್ನಕ್ಕೆ ಸಾರ್ಥಕೈ ಬರುತ್ತದೆ. ಎಲ್ಲರ ಬದುಕು ಕೇವಲ ಒಂದು ನಿಮಿಷದಲ್ಲಿ ಬದಲಾಗುವುದಿಲ್ಲ, ಸೂಕ್ತವಾದ ಯೋಜನೆಗಳನ್ನು ಹಾಕಿಕೊಂಡಾಗ ಜೀವನದ ನಿರ್ಧಾರ ಬದಲಾಗುತ್ತದೆ ಎಂದರು.
ಸಮಾಜಮುಖಿ ಕಾರ್ಯಗಳ ಮೂಲಕ ರೋಟರಿ ಎಲ್ಲರ ಮನೆ ಮಾತಾಗಿದ್ದಾರೆ-ಡಾ.ರವಿಪ್ರಕಾಶ್:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆರವರು ಮಾತನಾಡಿ, ಪುತ್ತೂರಿನ ಪ್ರತಿಯೊಂದು ರೋಟರಿ ಕ್ಲಬ್ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನೆ ಮಾತಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಪಶುಪತಿ ಶರ್ಮರವರು ಉತ್ತಮ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ ಅದರಂತೆ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯರವರ ನೇತೃತ್ವದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಮೂಡಿಬರಲಿ ಎಂದರು.
ಕ್ಲಬ್ ಸಮಾಜಮುಖಿ ಕಾರ್ಯಗಳನ್ನು ಪುತ್ತೂರಿನ ಜನತೆ ಆಶೀರ್ವದಿಸಿದೆ-ಪಶುಪತಿ ಶರ್ಮ:
ಕ್ಲಬ್ ನಿರ್ಗಮಿತ ಅಧ್ಯಕ್ಷ ಪಶುಪತಿ ಶರ್ಮ ಮಾತನಾಡಿ, ಒಂದು ವರ್ಷದ ಯಶಸ್ವಿ ಕಾರ್ಯಕ್ರಮದ ಹಿಂದೆ ಎಲ್ಲಾ ಸದಸ್ಯರು ಪಾಲುದಾರರು. ವಿಶೇಷ, ವಿನೂತನವಾದ ಹಲವಾರು ಕಾರ್ಯಕ್ರಮಗಳನ್ನು ಸಮಾಜಕ್ಕೆ ಅರ್ಪಿಸಿದ್ದೇವೆ. ದಿನನಿತ್ಯದ ದಿನಚರಿ ಸುಗಮವಾಗಬೇಕಾದರೆ ನಾವು ಎಲ್ಲರಿಗೂ ಚಿರಋಣಿಗಳಾಗಬೇಕು. ಕ್ಲಬ್ ನಿರ್ವಹಿಸಿದ ಸಮಾಜಮುಖಿ ಕಾರ್ಯಗಳನ್ನು ಪುತ್ತೂರಿನ ಜನತೆ ಆಶೀರ್ವದಿಸಿದೆ ಎಂದು ಹೇಳಿದರು.
ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಮೂಲತ ಕೃಷಿಕೆಯಾಗಿದ್ದು ಅಡುಗೆಯನ್ನು ಹವ್ಯಾಸವಾಗಿಸಿರುವ ಮಾತ್ರವಲ್ಲ ನಟ ಸಿಹಿಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಆಶಾ ನಾಯಕ್ ನರಿಮೊಗರು, ಎಂಬಿಎ ಪದವೀಧರೆ ಹಾಗೂ ಸಿದ್ಧಾರ್ಥ್ ಕೃಷ್ಣ ಮುಳಿಯರವರ ಪತ್ನಿ ಪ್ರಜ್ಞಾ ಸಿದ್ಧಾರ್ಥ್ ಮುಳಿಯ, ಕಂಪ್ಯೂಟರ್ ಸೈನ್ಸ್ ಪದವೀಧರೆ, ಮಹಾಲಕ್ಷ್ಮಿ ಗ್ಲಾಸ್ ಆಂಡ್ ಫ್ಲೈವುಡ್ಸ್ ಇದರ ಭರತ್ ನಾಯಕ್ ಪಣಕಜೆರವರ ಪತ್ನಿ ಋತ್ವಿಕಾ ಭರತ್ ನಾಯಕ್‌ರವರುಗಳನ್ನು ಪದ ಪ್ರದಾನ ಅಧಿಕಾರಿರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.
ಸ್ಕಾಲರ್‌ಶಿಪ್ ಹಸ್ತಾಂತರ:
ಯೂತ್ ಸರ್ವಿಸ್‌ನಡಿಯಲ್ಲಿ ಅನಂತ್ ಪೈರವರ ಪ್ರಾಯೋಜಕತ್ವದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕ ಗಳಿಸಿದ ಆಶ್ಲೇಷ್ ಪ್ರಭು, ವಿನಾಯಕ್ ಕುಡ್ವರವರ ಪ್ರಾಯೋಜಕತ್ವದಲ್ಲಿ ಚೈತ್ರಾ ಭಾರದ್ವಾಜ್ ಹಾಗೂ ಅಕ್ಷಯ ಭಾರದ್ವಾಜ್‌ರವರುಗಳಿಗೆ ಸ್ಕಾಲರ್‌ಶಿಪ್ ಹಸ್ತಾಂತರಿಸಲಾಯಿತು.
ಜಿಲ್ಲಾ ಪ್ರತಿನಿಧಿಗಳಿಗೆ ಅಭಿನಂದನೆ:
ಕ್ಲಬ್ ಸದಸ್ಯರಾಗಿದ್ದು ಜಿಲ್ಲಾ ರೋಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರತ್ನಾಕರ್ ರೈ(ಜಿಲ್ಲಾ ಕಾರ್ಯದರ್ಶಿ-ಯೂತ್ ಸರ್ವಿಸ್), ಡಾ.ಹರ್ಷಕುಮಾರ್ ರೈ(ರೋಟರಿ ಅಸಿಸ್ಟೆಂಟ್ ಗವರ್ನರ್), ಪಶುಪತಿ ಶರ್ಮ(ವೈಸ್ ಚೇರ್ಮನ್-ಕಾನ್ಫರೆನ್ಸ್ ನವ ವೈಭವ, ಜಿಲ್ಲಾ ಸಾಂಸ್ಕೃತಿಕ ಚಟುವಟಿಕೆಗಳು), ಸಚಿನ್ ನಾಯಕ್(ವೈಸ್ ಚೇರ್ಮನ್-ಪ್ರೋಗ್ರಾಂ ಸಮಿತಿ, ನವ ವೈಭವ), ರಾಜೇಶ್ವರಿ ಆಚಾರ್(ವೈಸ್ ಚೇರ್ಮನ್-ಹೆಲ್ಪ್ ಡೆಸ್ಕ್, ನವ ವೈಭವ ಹಾಗೂ ಚೇರ್ಮನ್-ರೋಟರಿ ಬ್ಯಾಡ್ಮಿಂಟನ್ ಟೂರ್ನಮೆಂಟ್), ವೀಕ್ಷಾ ಪಾದೆ(ವೈಸ್ ಚೇರ್ಮನ್-ಹೆಲ್ಪ್ ಡೆಸ್ಕ್, ನವ ವೈಭವ), ನರಸಿಂಹ ಪೈ(ವೈಸ್ ಚೇರ್ಮನ್-ರೋಟರಿ ಟೆನ್ನಿಸ್ ಟೂರ್ನಮೆಂಟ್), ಎಲ್ಯಾಸ್ ಪಿಂಟೊ(ವೈಸ್ ಚೇರ್ಮನ್-ಬೀಚ್ ಸ್ಪೋರ್ಟ್ಸ್), ಉಮೇಶ್ ನಾಯಕ್(ಚೇರ್ಮನ್-ನಮ್ಮ ನಾಡು, ನಮ್ಮ ಭಾಷೆ), ಡಾ.ಅನಿಲ ದೀಪಕ್ ಶೆಟ್ಟಿ(ಸದಸ್ಯರು-ಸ್ಪೀಕರ್ಸ್ ಬ್ಯಾಂಕ್, ಮೀಟಿಂಗ್ ಐಡಿಯಾಸ್ ಆಂಡ್ ಕ್ಲಬ್ ಅಡ್ಮಿನಿಸ್ಟ್ರೇಶನ್), ಭರತ್ ಪೈ(ವೈಸ್ ಚೇರ್ಮನ್-ವೊಕೇಶನಲ್ ಅವಾರ್ಡ್ಸ್), ಚೇತನ್ ಪ್ರಕಾಶ್ ಕಜೆ(ವೈಸ್ ಚೇರ್ಮನ್-ಐ ಕೇರ್), ಡಾ.ಯದುರಾಜ್ ಡಿ.ಕೆ(ಪಲ್ಸ್ ಪೋಲಿಯೊ), ಕನಿಷ್ಕಾ(ರೋಟರಿ ಆಕ್ಷನ್ ಗ್ರೂಪ್), ವಿನೀತ್ ಶೆಣೈ(ರೈಡ್ ಫಾರ್ ರೋಟರಿ ಜೊತರ ಕಾರ್ಯದರ್ಶಿ)ರವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯರವರ ಪತಿ ಕೃಷ್ಣನಾರಾಯಣ ಮುಳಿಯ ಉಪಸ್ಥಿತರಿದ್ದರು. ಚೈತ್ರಿಕಾ ಕೋಡಿಬೈಲು ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಪಶುಪತಿ ಶರ್ಮ ಸ್ವಾಗತಿಸಿ, ನೂತನ ಕಾರ್ಯದರ್ಶಿ ವಚನ ಜಯರಾಮ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಡಾ.ದೀಪಕ್ ಕೆ.ಬಿ ವರದಿ ಮಂಡಿಸಿದರು. ಸೋನಾ ಪ್ರದೀಪ್, ಹರಿಪ್ರಸಾದ್ ಶೆಟ್ಟಿ, ಅಜಯ್ ರಾಮ್, ಸಚಿನ್, ರತ್ನಾಕರ್ ರೈ ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಡಾ.ಅನಿಲ ದೀಪಕ್, ಚೇತನ್ ಪ್ರಕಾಶ್, ಅಜಯ್ ರಾಮ್ ಕೋಡಿಬೈಲುರವರು ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಕುಸುಮ್ ರಾಜ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಸತೀಶ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ನಿಹಾಲ್ ಶೆಟ್ಟಿ, ಯೂತ್ ಸರ್ವಿಸ್ ನಿರ್ದೇಶಕ ಸುದರ್ಶನ್ ರೈ, ಸಾರ್ಜಂಟ್ ಎಟ್ ಆಮ್ಸ್ ತ್ರಿವೇಣಿ ಗಣೇಶ್ ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿಹಾಲ್ ಶೆಟ್ಟಿ ಹಾಗೂ ವೀಕ್ಷಾ ಪಾದೆ ಕಾರ್ಯಕ್ರಮ ನಿರೂಪಿಸಿದರು.
ಯುವ ಸಂಗಮದಿಂದ ಮೇಳೈಸಿದ ಕ್ಲಬ್..
ರೋಟರಿ ಯುವ ಎಂಬ ಸಂಸ್ಥೆ ಇಲ್ಲಿಯವರೆಗೆ ಬೆಳೆಯಲು ಕ್ಲಬ್‌ನಲ್ಲಿನ ಪೂರ್ವಾಧ್ಯಕ್ಷರು, ಸದಸ್ಯರು ಪ್ರಮುಖ ಕಾರಣರಾಗಿದ್ದಾರೆ. ರೋಟರಿ ಯುವದಲ್ಲಿ ಬಹುತೇಕ ಯುವ ಸಂಗಮವೇ ಮೇಳೈಸಿದ್ದು ಕ್ಲಬ್ ಅಭಿವೃದ್ಧಿಯಲ್ಲಿ ಎಲ್ಲರ ವಿಶ್ವಾಸವನ್ನು ಪಡೆದುಕೊಂಡು ಕ್ಲಬ್ ಅಭಿವೃದ್ಧಿಯಲ್ಲಿ ಶ್ರಮಿಸುತ್ತೇನೆ. ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ಎದುರಿಸುವ
ಹೃದಯಾಘಾತದ ಕುರಿತು ಕ್ಲಬ್ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಮುತುವರ್ಜಿ ವಹಿಸಲಿದೆ.
-ಶ್ರೀಮತಿ ಅಶ್ವಿನಿಕೃಷ್ಣ ಮುಳಿಯ, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಯುವ
ಭಿತ್ತಿಪತ್ರ/ಲಾಂಛನ ಅನಾವರಣ…
ಕ್ಲಬ್‌ನ ವರ್ಷದ ಯೋಜನೆಯಲ್ಲೊಂದಾದ ಪ್ರಾಣಿಗಳ ಜನನ ನಿಯಂತ್ರಣ ಈಗಾಗಲೇ ನಿರ್ಗಮಿತ ಅಧ್ಯಕ್ಷ ಪಶುಪತಿ ಶರ್ಮರವರ ನೇತೃತ್ವದಲ್ಲಿ ನಡೆದಿದ್ದು, ಇದನ್ನೇ ಪ್ರಸಕ್ತ ವರ್ಷದ ಯೋಜನೆಯನ್ನಾಗಿ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯರವರ ನೇತೃತ್ವದಲ್ಲಿ ಸುಮಾರು 130 ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅದರಂತೆ ಈ ಯೋಜನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುವುದು ಎಂದು ನಿರ್ಧರಿಸಲಾಗಿದ್ದು ಕ್ಲಬ್ ದಶಮಾನೋತ್ಸವದ ಅಂಗವಾಗಿ ಶ್ವಾನಗಳ ಸಂತಾನಹರಣ ಚಿಕಿತ್ಸೆಯ ಭಿತ್ತಿಪತ್ರವನ್ನು ರೋಟರಿ ವಲಯ ಸೇನಾನಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್‌ರವರು ಮತ್ತು ದಶಮಾನೋತ್ಸವ ವರ್ಷದ ನೂತನ ಲಾಂಛನವನ್ನು ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ.ರವಿಪ್ರಕಾಶ್‌ರವರು ಅನಾವರಣಗೊಳಿಸಿದರು.
ಸನ್ಮಾನ..
ಪದ ಪ್ರದಾನ ಅಧಿಕಾರಿಯಾಗಿ ಆಗಮಿಸಿದ ಮಾಜಿ ಜಿಲ್ಲಾ ಗವರ್ನರ್ ಡಾ.ಜಯಗೌರಿ ಹಡಿಗಾಲ್, 2023-24ನೇ ವರ್ಷದಲ್ಲಿ ಅತ್ತ್ಯುತ್ತಮ ಕಾರ್ಯ ನಿರ್ವಹಿಸಿದ ರಸ್ತೆ ಸುರಕ್ಷತಾ ಜಾಗೃತಿ ಜಿಲ್ಲಾ ಚೇರ್‌ಮ್ಯಾನ್ ಡಾ.ಹರ್ಷಕುಮಾರ್ ರೈ, ನಿರ್ಗಮಿತ ಅಧ್ಯಕ್ಷ ಪಶುಪತಿ ಶರ್ಮ, ಕಾರ್ಯದರ್ಶಿ ಡಾ.ದೀಪಕ್ ಕೆ.ಬಿ, ವೊಕೇಶನಲ್ ಸರ್ವಿಸ್ ನಡಿಯಲ್ಲಿ 163 ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚು ಆಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಪ್ರಮುಖ ಕಾರಣಕರ್ತರಾದ ಜೊತೆಗೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ವಿದ್ಯಾಮಾತಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಭಾಗ್ಯೇಶ್ ರೈ ಕೆಯ್ಯೂರು, ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ಗೃಹರಕ್ಷಕ ದಳದಲ್ಲಿ ಹೋಂ ಗಾರ್ಡ್ ಆಗಿ ಸೇವೆ ಸಲ್ಲಿಸಿ, ಇವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಮುಖ್ಯಮಂತ್ರಿ ಗಳಿಂದ ಚಿನ್ನದ ಪದಕ ಪುರಸ್ಕೃತರಾದ ಜಗನ್ನಾಥ್ ಪಿ, ಯೂತ್ ಸರ್ವಿಸ್‌ನಡಿಯಲ್ಲಿ ಚೆಸ್‌ನಲ್ಲಿ ಅದ್ವಿತೀಯ ಸಾಧನೆಗೈಯ್ದ ಅಲ್ಲದೆ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ620 ಅಂಕ ಗಳಿಸಿ ರಾಜ್ಯದಲ್ಲಿ ಆರನೇ ರ‍್ಯಾಂಕ್ ಗಳಿಸಿದ ಧನುಷ್ ರಾಮ್, ವೈಟ್‌ಲಿಪ್ಟಿಂಗ್‌ನಲ್ಲಿ ಗಮನಾರ್ಹ ಸಾಧನೆಗೈಯ್ದ ರಕ್ಷಾ ಜಿ.ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಪದ ಪ್ರದಾನ..
ಕ್ಲಬ್ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ವಚನ ಜಯರಾಮ್, ಕೋಶಾಧಿಕಾರಿ ಅಭಿಷ್ ಕೊಳಕ್ಕೆಮಾರ್, ಉಪಾಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕ ಕುಸುಮ್‌ರಾಜ್, ನಿಕಟಪೂರ್ವ ಅಧ್ಯಕ್ಷ ಪಶುಪತಿ ಶರ್ಮ, ಜೊತೆ ಕಾರ್ಯದರ್ಶಿ ವೀಕ್ಷಾ ಪಾದೆ, ಬುಲೆಟಿನ್ ಸಂಪಾದಕ ಡಾ|ದೀಪಕ್ ಕೆ.ಬಿ, ಸಾರ್ಜಂಟ್ ಎಟ್ ಆರ್ಮ್ಸ್ ತ್ರಿವೇಣಿ ಗಣೇಶ್, ಕ್ಲಬ್ ಕಲಿಕಾ ಮಾರ್ಗದರ್ಶಕ ಉಮೇಶ್ ನಾಯಕ್, ಸಮುದಾಯ ಸೇವಾ ವಿಭಾಗದ ನಿರ್ದೇಶಕ ನಿಹಾಲ್ ಶೆಟ್ಟಿ, ವೃತ್ತಿಪರ ಸೇವಾ ವಿಭಾಗ ನಿರ್ದೇಶಕ ಗೌರವ್ ಭಾರದ್ವಾಜ್, ಅಂತರ್ರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕ ವಿನಿತ್ ಶೆಣೈ, ಯುವಜನ ಸೇವಾ ವಿಭಾಗದ ನಿರ್ದೇಶಕ ಸುದರ್ಶನ್ ರೈ, ಚೇರ್ಮನ್‌ಗಳಾದ ಡಾ.ಯದುರಾಜ್(ಸದಸ್ಯತನ ಅಭಿವೃದ್ಧಿ), ಸ್ವಸ್ತಿಕ ಶೆಟ್ಟಿ(ಟಿಆರ್‌ಎಫ್), ಸುದರ್ಶನ್ ಹಾರಕೆರೆ(ಪಬ್ಲಿಕ್ ಇಮೇಜ್), ಕನಿಷ್ಕಾ(ಸಿಎಲ್‌ಸಿಸಿ/ವಿನ್ಸ್), ರತ್ನಾಕರ್ ರೈ(ಜಿಲ್ಲಾ ಯೋಜನೆ), ಸೋನಾ ಪ್ರದೀಪ್(ಪೋಲಿಯೋ ಪ್ಲಸ್)ರವರನ್ನು ಪದ ಪ್ರದಾನ ಅಧಿಕಾರಿಯವರು ಪದ ಪ್ರದಾನವನ್ನು ನೆರವೇರಿಸಿದರು.