ಪುತ್ತೂರು:ಬಲ್ನಾಡು ಗ್ರಾ.ಪಂ, ನರೇಗಾ ಯೋಜನೆ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಬಲ್ನಾಡು ಗ್ರಾಮಸ್ಥರ ಸಹಕಾರದಿಂದ ನಾರಜಿಲಮೂಲೆ ಎಂಬಲ್ಲಿ ನಿರ್ಮಾಣವಾಗಲಿರುವ ಹಿಂದೂ ರುದ್ರಭೂಮಿ ‘ಶಾಂತಿಧಾಮ’ಕ್ಕೆ ಜು.12ರಂದು ಶಿಲಾನ್ಯಾಸ ನೆರವೇರಿತು.
ಅರ್ಚಕ ರವಿಚಂದ್ರ ನೆಲ್ಲಿತ್ತಾಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಮಾಜಿ ಶಾಸಕ ಸಂಜೀವ ಮಠಂದೂರು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಯೋಜನಾಧಿಕಾರಿ ಸುಕನ್ಯಾ, ನಗರ ಸಭಾ ಸದಸ್ಯೆ ಪೂರ್ಣಿಮಾ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗೌಡ, ನಿರ್ದೇಶಕರಾದ ಎ.ಎಂ. ಪ್ರವೀಣ್ ಚಂದ್ರ ಆಳ್ವ, ಚಂದಪ್ಪ ಪೂಜಾರಿ ಕಾಡ್ಲ, ನವೀನ್ ಕರ್ಕೇರಾ, ಅಂಬ್ರೋಸ್ ಡಿ ಸೋಜ, ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಾಜಿ ಮಂಡಲ ಪ್ರಧಾನ ಕೃಷ್ಣ ಭಟ್ ಕಬ್ಬಿನಹಿತ್ತಿಲು, ಪ್ರಮುಖರಾದ ರಾಮಚಂದ್ರ ರೈ, ವಿಠಲ ರೈ, ದೇವದಾಸ ರೈ, ನಾರಾಯಣ ಪೂಜಾರಿ ನೆಕ್ಕರೆ, ಗಣೇಶ್ ಭಟ್ ಸುದನಡ್ಕ, ಟೌನ್ಬ್ಯಾಂಕ್ ನಿರ್ದೇಶಕ ಕಿರಣ್ ಶೆಟ್ಟಿ ಕಬ್ಬಿನಹಿತ್ತಿಲು, ಅಜಿತ್ ರೈ ಹೊಸಮನೆ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಸುನಿಲ್ ದಡ್ಡು, ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ಉಪಾಧ್ಯಕ್ಷ ರವಿಚಂದ್ರ, ಸದಸ್ಯರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಗಣೇಶ್ ಗೌಡ, ಕೃಷ್ಣಪ್ಪ ನಾಯ್ಕ, ಚಂದ್ರಾವತಿ, ಅಂಬ್ರೋಸ್ ಡಿ ಸೋಜ, ಶೋಭಾ ಎಂ. ವಸಂತಿ, ವಿನಯ, ಪಿಡಿಓ ದೇವಪ್ಪ ಪಿ.ಆರ್., ಕಾರ್ಯದರ್ಶಿ ಲಕ್ಷ್ಮೀ ಹಾಗೂ ಸಿಬಂದಿಗಳು ಸೇರಿದಂತೆ ಹಲವು ಮಂದಿ ಗ್ರಾಮಂತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕಿನಲ್ಲೇ ಪ್ರಥಮ:
ಬಲ್ನಾಡು ಗ್ರಾ.ಪಂನಲ್ಲಿ ವಿಶೇಷವಾಗಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಹೀಗೆ ಮೂರು ಧರ್ಮದವರಿಗೆ ಅನುಕೂಲವಾಗುವಂತೆ ಒಂದೇ ಕಡೆ ಪ್ರತ್ಯೇಕ ಪ್ರತ್ಯೇಕ ರುದ್ರಭೂಮಿಯಿದೆ. ಮೂರು ಧರ್ಮದವರಿಗೂ ಒಂದೇ ಕಡೆ ರುದ್ರಭೂಮಿ ನಿರ್ಮಾಣವಾಗುತ್ತಿರುವುದು ತಾಲೂಕಿನಲ್ಲೇ ಪ್ರಥಮವಾಗಿದೆ. ಇದಕ್ಕಾಗಿ ಪಂಚಾಯತ್ ಮೂರು ಧರ್ಮದ ರುದ್ರಭೂಮಿ ನಿರ್ಮಾಣಕ್ಕೆ ತಲಾ 1 ಎಕರೆ ನಿವೇಶನ ಕಾದಿರಿಸಲಾಗಿದೆ. ಇದರಲ್ಲಿ ಕ್ರಿಶ್ಚಿಯನ್ ಧರ್ಮದ ರುದ್ರಭೂಮಿ ಸುಮಾರು 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಹಿಂದೂ ರುದ್ರಭೂಮಿಗೆ ಶಿಲಾನ್ಯಾಸಗೊಂಡಿದೆ. ಮುಸ್ಲಿಂ ಧರ್ಮದವರಿಗೂ ದಫನ ಮಾಡಲು ಜಾಗ ಕಾದಿರಿಸಲಾಗಿದೆ.