ಪುತ್ತೂರಿನಲ್ಲಿ ಇತಿಹಾಸ ಬರೆದ ‘ಧರ್ಮದೈವ..’-ಭಾರತ್ ಸಿನಿಮಾಸ್‌ನಲ್ಲಿ ಭರ್ಜರಿ 2 ನೇ ವಾರಕ್ಕೆ ಪ್ರದರ್ಶನ

0

ಪುತ್ತೂರು: ಧರ್ಮದೈವ ಪ್ರೋಡಕ್ಷನ್ ಲಾಂಛನದಡಿಯಲ್ಲಿ ಬಿಳಿಯೂರು ರಾಕೇಶ್ ಬೋಜರಾಜ ಶೆಟ್ಟಿ ನಿರ್ಮಾಣದಲ್ಲಿ ಪುತ್ತೂರಿನ ಕ್ರೀಯಾಶೀಲ ತಂಡವೊಂದು ಮಾಡಿರುವ ‘ಧರ್ಮದೈವ..’ ಮಾಯೊದ ಬೊಲ್ಪು ತುಳು ಸಿನಿಮಾ ಹತ್ತೂರಿನಲ್ಲಿ ಪುತ್ತೂರಿನ ಹೆಸರನ್ನು ಪಸರಿಸಿದೆ. ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿಯವರ ಚೊಚ್ಚಲ ನಿರ್ದೇಶನದ ಬಿಗ್‌ಸ್ಕ್ರೀನ್ ಮೂವಿ ಇದಾಗಿದೆ. ಮಂಗಳೂರು, ಉಡುಪಿ,ಮುಂಬೈ,ಪುಣೆ ಸೇರಿದಂತೆ ಪ್ರದರ್ಶನ ಕಂಡಲೆಲ್ಲಾ ಭರ್ಜರಿ ಯಶಸ್ಸನ್ನು ಕಾಣುತ್ತಾ ಸಾಗುತ್ತಿರುವ ಧರ್ಮದೈವ ಒಂದು ಕುಟುಂಬ ನೋಡಬಹುದಾದ ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಹಾಗೂ ದೈವರಾಧನೆಯ ತಿರುಳನ್ನು ಹಾಗೂ ಇಲ್ಲಿನ ಜನರ ನಂಬಿಕೆಯನ್ನು ಸಾರುವ ಸಿನಿಮಾವಾಗಿದೆ. ದೈವರಾಧನೆಗೆ ಒಂದಿಷ್ಟು ಚ್ಯುತಿ ಬಾರದ ರೀತಿಯಲ್ಲಿ ಮಾಡಿರುವ ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ ಇದಾಗಿದೆ.


ಪುತ್ತೂರು ಜಿಎಲ್1 ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಭರ್ಜರಿ 2 ನೇ ವಾರಕ್ಕೆ ಪ್ರದರ್ಶನ ಕಂಡಿದ್ದು ಪ್ರತಿದಿನ 8 ಶೋಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಮೀದ್ ಪುತ್ತೂರುರವರ ಚಿತ್ರಕಥೆ, ಸಂಭಾಷಣೆ, ಅರುಣ್ ರೈ ಪುತ್ತೂರುರವರ ಅದ್ಭುತ ಛಾಯಾಗ್ರಹಣ, ರಾಧೇಶ್ ರೈ ಮೊಡಪ್ಪಾಡಿ ಹಾಗೂ ಶ್ರೀನಾಥ್‌ರವರ ಸಂಕಲನ, ನಿಶಾನ್ ರೈ ಮಠಂತಬೆಟ್ಟು ಸಂಗೀತ ಎಲ್ಲವೂ ಚೆನ್ನಾಗಿದೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ರೂಪಾಶ್ರೀ ವರ್ಕಾಡಿ, ದೀಕ್ಷಾ ಡಿ.ರೈ, ಕೌಶಿಕ್ ರೈ ಕುಂಜಾಡಿ, ಪುಷ್ಪರಾಜ್ ಬೊಳ್ಳಾರ್, ದಯಾನಂದ ರೈ ಬೆಟ್ಟಂಪಾಡಿ ಮತ್ತಿತರರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here