ಪುತ್ತೂರು: ಬೊಳುವಾರಿನ ಆಕ್ವಾ ಸ್ಪಾಶ್ ಮತ್ತು ಕಾರ್ ವಾಶ್ ಸಂಸ್ಥೆಯ ಮಾಲಕ ಮನ್ವಿತ್ ಕುಮಾರ್ ಜೂ.22ಮತ್ತು 23ರಂದು ನಡೆದ ಫೆಡರೇಶನ್ ಇಂಟರ್‍ನ್ಯಾಷನಲ್ ಡಿ ಮೋಟೋಸೈಕ್ಲಿಸಮ್ ನಡೆಸಿದ ಕೋರ್ಸ್ ಆಫ್ ಕ್ಲರ್ಕ್ ಸ್ಪೋರ್ಟಿಂಗ್ ಸ್ಟೀವರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೋಟೋಕ್ರಾಸ್ ಕಮಿಷನ್‌ನಲ್ಲಿ ಕೋರ್ಸ್ ಆಫ್ ಕ್ಲರ್ಕ್ ಸ್ಪೋರ್ಟಿಂಗ್ ಸ್ಟೀವರ್ಡ್ (ಸಿಒಸಿ) ಪದವಿಯನ್ನು ಪಡೆದಿದ್ದಾರೆ. ಇವರು ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಸದಸ್ಯ. ಭಾರತ ದಲ್ಲಿ 28 ಜನ ಆಯ್ಕೆಯಾಗಿದ್ದು ಇದರಲ್ಲಿ ಮನ್ವಿತ್ ಕುಮಾರ್ ಒಬ್ಬರು ಇವರು ಮುಕ್ವೆ ನಿವಾಸಿ ಲಕ್ಮ್ಮೀ ನರಸಿಂಹಮೂರ್ತಿ ಇವರ ಪುತ್ರ.