ಜುಲೈ 18 ರಿಂದ ಆಗಸ್ಟ್ 3 ರ ವರೆಗೆ ನಡೆಯಲಿರುವ ಶಿಬಿರ
ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 4.30 ತನಕ ನಡೆಯಲಿದೆ ಥೆರಪಿ
ಪುತ್ತೂರು : ತಾಲೂಕು ಪಂಚಾಯತ್ ಪುತ್ತೂರು ಹಾಗೂ ಕಂಪಾನಿಯೋ ನೆಮ್ಮದಿ ಸೆಂಟರ್ ಕಲ್ಲಾರೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ತಾಲೂಕು ಪಂಚಾಯತ್ ಇದರ ಸಭಾಂಗಣದಲ್ಲಿ
15 ದಿನಗಳ ಕಾಲ ನಡೆಯಲಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಜು.18 ರ ಬೆಳಗ್ಗೆ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ನೆರವೇರಿಸಲಿದ್ದು ,ಮುಖ್ಯ ಅತಿಥಿಗಳಾಗಿ ನಗರಸಭಾ ಪೌರಯುಕ್ತ ಮಧು ಎಸ್ ಮನೋಹರ್ಭಾ ಗವಹಿಸಲಿದ್ದಾರೆ. ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಇದರ ಮುಖ್ಯಸ್ಥ ಪ್ರಭಾಕರ್ ಕೆ ಸಾಲ್ಯಾನ್ ನೀಡಲಿದ್ದಾರೆ. ಸಾರ್ವಜನಿಕರು ಈ ಉಚಿತ ಶಿಬಿರದ ಪ್ರಯೋಜನ ಪಡೆಯುವಂತೆ ಆಯೋಜಕರು
ವಿನಂತಿಸಿದ್ದಾರೆ.
17 ತಿಂಗಳಿನಲ್ಲಿ 52 ಶಿಬಿರ ಆಯೋಜಿಸಿರುವ ಸಂಸ್ಥೆ…
ನೆಮ್ಮದಿ ವೆಲ್ನೆಸ್ ಸೆಂಟರ್ ಬರೀ 17 ತಿಂಗಳಿನಲ್ಲಿ ಜಿಲ್ಲೆಯ ವಿವಿದೆಡೆ ಉಚಿತ ಫೂಟ್ ಪಲ್ಸ್ ಥೆರಫಿ ಆಯೋಜಿಸಿ, ಸುಮಾರು 19 ಸಾವಿರ ಶಿಬಿರಾರ್ಥಿಗಳು ಪಾಲ್ಗೊಂಡು , 90 ಸಾವಿರದಷ್ಟು ಉಚಿತ ಥೆರಪಿ ಪಡೆದುಕೊಳ್ಳೋ ಮೂಲಕ ಸಂಪೂರ್ಣವಾಗಿ ನೋವಿನ ಸಮಸ್ಯೆಯಿಂದ ಪಾರಾಗಿದ್ದಾರೆ.