ಕರ್ನಾಟಕ ರಾಜ್ಯ ಬಾಲಕ-ಬಾಲಕಿಯರ 3ನೇ ಮಿನಿ ಒಲಿಂಪಿಕ್ ಕಬಡ್ಡಿ ತಂಡಕ್ಕೆ ಶ್ರೀ ರಾಮಕುಂಜೇಶ್ವರ ಕ.ಮಾ. ಪ್ರೌಢಶಾಲೆಯ ವಿದ್ಯಾರ್ಥಿಗಳ ಆಯ್ಕೆ

0

ರಾಮಕುಂಜ: ಡಿಪಾರ್ಟ್ಮೆಂಟ್ ಆಫ್ ಯೂತ್ ಎಂಪೈರ್ಮೆಂಟ್ ಆಂಡ್ ಸ್ಪೋರ್ಟ್ಸ್ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಂಯೋಗದೊಂದಿಗೆ ಆ.24ರಿಂದ 30ರ ತನಕ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ 3ನೇ ಮಿನಿ ಒಲಿಂಪಿಕ್ ಕಬಡ್ಡಿ ಚಾಂಪಿಯನ್ ಶಿಪ್‌ಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಧನ್ವಿ ಎಂ(ಕೊಣಾಜೆ ಮಣೆಜಾಲು ದುಗ್ಗಣ್ಣ ಗೌಡ ಮತ್ತು ಅಮಿತಾ ದಂಪತಿಯ ಪುತ್ರಿ) ಹಾಗೂ ಸಮರ್ಥ್ ಬಾಹುಬಲಿ ಯಲ್ಲಟ್ಟಿ(ಹಳಿಂಗಳಿ ಬಾಹುಬಲಿ ಯಲ್ಲಟ್ಟಿ ಹಾಗೂ ಶೋಭಾ ಯಲ್ಲಟ್ಟಿ ದಂಪತಿಯ ಪುತ್ರ)ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಮಾಧವ ಬಿ.ಕೆ., ಜಸ್ವಂತ್ ಹಾಗೂ ಮಂಜುನಾಥ್ ತರಬೇತಿ ನೀಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯಗುರು ಸತೀಶ್ ಭಟ್, ಶಾಲಾ ಶಿಕ್ಷಕ ವೃಂದವರು, ಆಡಳಿತ ಮಂಡಳಿಯವರು, ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here