ಮಿತ್ತಡ್ಕ: ʻಏನೆಲ್‌ 2.0ʼ ಒಂಜಿ ದಿನ ಕೆಸರ್‌ಡ್‌

0

ಬೆಟ್ಟಂಪಾಡಿ: ಕೇಸರಿ ಮಿತ್ರವೃಂದ ಕೇಸರಿನಗರ ಮಿತ್ತಡ್ಕ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ʻಏನೆಲ್‌ 2.0ʼ ಜು. 21 ರಂದು ಮಿತ್ತಡ್ಕ ಗುರಿಯಡ್ಕ ಪುಷ್ಪಲತಾ ಆರ್‌. ರವರ ಗದ್ದೆಯಲ್ಲಿ ನಡೆಯಿತು.

ಚಿತ್ರ: ಎ.ಕೆ. ಫೊಟೋಗ್ರಫಿ

ಬೆಳಿಗ್ಗೆ ಸ್ಥಳೀಯ ಹಿರಿಯರಾದ ಅಕ್ಕಮ್ಮಕ್ಕ ಉಡ್ಡಂಗಳರವರು ಗದ್ದೆಗೆ ಹಾಲೆರೆದು ಉದ್ಘಾಟಿಸಿದರು. ಬಳಿಕ ಸಾಂಪ್ರದಾಯಿಕ ನೇಜಿ ನಾಟಿ ಪಾಡ್ದನ ಮತ್ತು ಓಬೇಲೆ ಹಾಡಿ ಗಮನಸೆಳೆದರು. ಕೇಸರಿ ಮಿತ್ರವೃಂದದ ಗೌರವಾಧ್ಯಕ್ಷ ವಿನೋದ್‌ ಕುಮಾರ್‌ ರೈ ಗುತ್ತು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಇದೇ ವೇಳೆ ಮುಖ್ಯ ಅತಿಥಿಯಾಗಿದ್ದ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್‌ ನೆಲ್ಲಿತ್ತಡ್ಕರವರು ಮಾತನಾಡಿ `ಆಹಾರ ನಿಡುವ ಭೂಮಿ ತಾಯಿಗೆ ನಮಸ್ಕರಿಸಿ ಆಕೆಯ ಮಡಿಲಲ್ಲಿ ಒಂದು ದಿನ ನಾವೆಲ್ಲಾ ಸೇರಿ ಆಡುವ ಕ್ರೀಡೆಯ ಮೂಲಕ ಭತ್ತದ ಬೇಸಾಯದ ಮಹತ್ವವನ್ನು ಸಾರುವ ಕೆಲಸ ಇಲ್ಲಿ ನಡೆದಿದೆʼ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟುರವರು ಮಾತನಾಡಿ ʻಈ ಕೆಸರು ಗದ್ದೆ ಕ್ರೀಡಾಕೂಟ ನೋಡುವಾಗ ಹಿಂದಿನ ಕಾಲದ ಸಾಂಪ್ರದಾಯಿಕ ಗದ್ದೆ ಬೇಸಾಯದ ಚಿತ್ರಣ ಮರುಕಳಿಸಿದೆ. ಕೃಷಿಕರೂ, ಮಕ್ಕಳೂ ಒಂದುಗೂಡಿ ಆಟವಾಡುವ ವಿಶೇಷ ಕ್ರೀಡೆ ಇದಾಗಿದೆʼ ಎಂದು ಹೇಳಿ ಶುಭ ಹಾರೈಸಿದರು. ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನರವರು ಮಾತನಾಡಿ ʻಮನೋರಂಜನೆಯ ಜೊತೆ ನಮ್ಮ ಸಂಪ್ರದಾಯ, ಆಚಾರ ವಿಚಾರಗಳನ್ನು ನೆನಪಿಸಿಕೊಳ್ಳುವ ದಿನ ಇದಾಗಿದೆʼ ಎಂದರು.

ಚಿತ್ರ: ಎ.ಕೆ. ಫೊಟೋಗ್ರಫಿ

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಗೌರವಾಧ್ಯಕ್ಷ ನಾರಾಯಣ ಮನೊಳಿತ್ತಾಯ ಕಾಜಿಮೂಲೆ, ಊರ ಗೌಡರಾದ ಸಾಂತಪ್ಪ ಗೌಡ ಮಿತ್ತಡ್ಕ, ಪ್ರಗತಿಪರ ಕೃಷಿಕ ಗಣೇಶ್‌ ರೈ ಆನಡ್ಕ, ಮುಂಡೂರು ಸಿಎ ಬ್ಯಾಂಕ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್‌ ರೈ, ಇರ್ದೆ ಬೆಟ್ಟಂಪಾಡಿ ಸಿಎ ಬ್ಯಾಂಕ್‌ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಗೌಡ ಕಕ್ಕೂರು, ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್‌ ಕೋರ್ಮಂಡ, ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ಗಂಗಾಧರ ಎಂ.ಎಸ್‌. ಮಿತ್ತಡ್ಕ, ಪುರೋಹಿತರಾದ ಖಂಡೇರಿ ಬಾಲಕೃಷ್ಣ ಭಟ್‌ ಕಕ್ಕೂರು, ಹಿರಿಯರಾದ ಗುಣಕರ ರೈ ತೋಟದಮೂಲೆ, ಬೆಟ್ಟಂಪಾಡಿ ಶ್ರೀ ಸಿದ್ಧಿವಿನಾಯಕ ಇಲೆಕ್ಟ್ರಿಕಲ್ಸ್‌ನ ನಾರಾಯಣ ಹೊಳ್ಳ, ರೆಂಜ ಶಿವಕೃಪಾ ಹೊಟೇಲ್‌ ಮಾಲಕ ಹರೀಶ್‌, ಗೋಕುಲ ಕನ್‌ಸ್ಟ್ರಕ್ಷನ್‌ನ ನವೀನ್‌ ಮಣಿಯಾಣಿ, ಸ್ನೇಹ ಟೆಕ್ಸ್‌ಟೈಲ್ಸ್‌ & ರೆಡಿಮೇಡ್ಸ್‌ನ ವರದರಾಜ ನಾಯಕ್‌, ಕಾರ್ಕಳ ಸಮೃದ್ಧಿ ಅಲ್ಯುಮಿನಿಯಂನ ಧನಂಜಯ ರೆಂಜ, ರೆಂಜ ಶರಧಿ ಸೇವಾ ಕೇಂದ್ರದ ಸಂತೋಷ್‌ ಕುಮಾರ್‌ ಡಿ.ಎನ್‌., ರೆಂಜ ವಿಘ್ನೇಶ್ವರ ಟ್ರೇಡರ್ಸ್‌ನ ಸತೀಶ್‌ ಗೌಡ ಪಾರಪೊಯ್ಯೆ, ವಿನಾಯಕನಗರ ಲಕ್ಷ್ಮೀ ಫ್ಲೋರಿಂಗ್‌ ವರ್ಕ್ಸ್‌ನ ದಯಾನಂದ ವಿನಾಯಕನಗರ, ದುರ್ಗಾಂಬಾ ಬೋರ್‌ವೆಲ್ಸ್‌ನ ಶ್ರೀಕುಮಾರ್‌ ಅಡ್ಯೆತ್ತಿಮಾರ್‌, ಉದ್ಯಮಿ ಜನಾರ್ದನ ಪೂಜಾರಿ ಪದಡ್ಕ, ಬೆಟ್ಟಂಪಾಡಿ ನವೋದಯ ಸ್ವ-ಸಹಾಯ ಸಂಘದ ಪ್ರೇರಕಿ ತುಳಸಿ, ಪ್ರಗತಿಪರ ಕೃಷಿಕರಾದ ಸುರೇಶ್‌ ಗೌಡ ಸರಳಿಕಾನ, ಸುಜಿತ್‌ ಕಜೆ, ಶ್ರೀದೇವಿ ಸೌಂಡ್ಸ್‌ & ಲೈಟಿಂಗ್ಸ್‌ನ ಬಾಲಕೃಷ್ಣ ಕೆ., ಪ್ರಗತಿಪರ ಕೃಷಿಕ ಚಂದ್ರಶೇಖರ ಭಟ್‌ ಕೋಡಿ, ಸನತ್‌ ಕುಮಾರ್‌ ರೈ ಸಂಗಮ್‌ ತೋಟದಮೂಲೆ, ಇರ್ದೆ ಬೆಟ್ಟಂಪಾಡಿ ಸಿಎ ಬ್ಯಾಂಕ್‌ ನಿರ್ದೇಶಕ ಹರೀಶ್‌ ಗೌಡ ಗುಮ್ಮಟೆಗದ್ದೆ, ಮನೋಜ್‌ ಶೆಟ್ಟಿ ಕೋರ್ಮಂಡ, ಸುದ್ದಿಬಿಡುಗಡೆ ವರದಿಗಾರ ಶರತ್‌ ಕುಮಾರ್‌ ಪಾರ ಭೇಟಿ ನೀಡಿ ಶುಭ ಹಾರೈಸಿದರು. ವಿಜಯ್‌ ಅತ್ತಾಜೆ ಉಜಿರೆ ಕಾರ್ಯಕ್ರಮದ ಉದ್ಘೋಷಕರಾಗಿದ್ದರು. ಸಂಘದ ಮಾಜಿ ಅಧ್ಯಕ್ಷ, ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ ಮುಖ್ಯ ತೀರ್ಪುಗಾರರಾಗಿಯೂ,  ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕರಾದ ಮಮತಾ ಮತ್ತು ಗೌತಮಿಯವರು ತೀರ್ಪುಗಾರರಾಗಿ ಸಹಕರಿಸಿದರು. ಕೇಸರಿ ಮಿತ್ರವೃಂದದ ಅಧ್ಯಕ್ಷ ರಾಧಾಕೃಷ್ಣ ಎಂ. ಮಿತ್ತಡ್ಕ,  ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಮಿತ್ತಡ್ಕ, ಕೋಶಾಧಿಕಾರಿ ನಿಖಿಲ್‌ ಮಡ್ಯಂಪಾಡಿ, ಪದಾಧಿಕಾರಿಗಳು, ಸದಸ್ಯರುಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು. ಯತೀಶ್‌ ಕುಲಾಲ್‌ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ʻಧರ್ಮದೈವʼ ಹಾಗೂ ʻಅನಾರ್ಕಲಿʼ ಚಿತ್ರ ತಂಡದವರು ಭೇಟಿ ನೀಡಿ ಚಿತ್ರದ ಪ್ರಮೋಷನ್‌ ಮಾಡಿದರು.

ಚಿತ್ರ: ಎ.ಕೆ. ಫೊಟೋಗ್ರಫಿ

ಸಾಂಪ್ರದಾಯಿಕ ಆಟಗಳಲ್ಲಿ ಸಂಭ್ರಮಿಸಿದ ಜನರು
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕೆಸರುಗದ್ದೆಯಲ್ಲಿ ವಿವಿಧ ರೀತಿಯ ಆಟಗಳು ನಡೆದವು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಸಹಭೋಜನ ನಡೆಯಿತು. ಅಪರಾಹ್ನ ಪುರುಷರ ಮುಕ್ತ ಹಗ್ಗಜಗ್ಗಾಟ ನಡೆದು ಫ್ರೆಂಡ್ಸ್‌ ಬೆಟ್ಟಂಪಾಡಿ ಪ್ರಥಮ, ವಿದ್ಯಾದಾಯಿನಿ ಸಜಿಪ ದ್ವಿತೀಯ, ವಿಷ್ಣು ಬಳಗ ಅಡ್ಕ ತೃತೀಯ, ಜಟಾಯು ವಿಟ್ಲ ಚತುರ್ಥ ಬಹುಮಾನ ಪಡೆದರು. ಊರಿನ ಹಿರಿಯರು ಮಕ್ಕಳೆನ್ನದೇ ಸಾಂಪ್ರದಾಯಿಕ ಆಟೋಟ, ಪಾಡ್ದನ, ದನಿ ಕೊಡುವುದು, ಹಾಳೆ ಎಳೆಯುವುದು, ಮೂರುಕಾಲಿನ ಓಟ ಮುಂತಾದ ಆಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here