ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್‌ನ ನೇತೃತ್ವದಲ್ಲಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಬೆನ್ನಲ್ಲೆ ಪುತ್ತೂರಿನಲ್ಲಿ ಖಾಸಗಿ ಕಾರುಗಳು ಬಾಡಿಗೆ ಮಾಡುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘದ ಪುತ್ತೂರು ವಲಯದ ಪದಾಧಿಕಾರಿಗಳ ವತಿಯಿಂದ ಜು.24 ರಂದು ಪುತ್ತೂರು ಆರ್ ಟಿ ಓ ಅವರಿಗೆ ಮನವಿಯನ್ನು ನೀಡಲಾಯಿತು.
ಜಿಲ್ಲಾ ಸಂಘದ ಅಧ್ಯಕ್ಷ ಆನಂದ್ ಕೆ ಮಾತನಾಡಿ, ಖಾಸಗಿ ಕಾರುಗಳು ಬಾಡಿಗೆ ಮಾಡುವುದರಿಂದ ನಮ್ಮ ಉದ್ಯೋಗಕ್ಕೆ ಬಹಳಷ್ಟು ತೊಂದರೆ ಆಗುತ್ತಿದೆ ಎಂಬುದನ್ನು ಮನದಟ್ಟು ಮಾಡುವ ಮೂಲಕ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವಲಯದ ಗೌರವ ಗೌರವಾಧ್ಯಕ್ಷ ಮೋನಪ್ಪ ಪೂಜಾರಿ, ಅಧ್ಯಕ್ಷ ಪ್ರವೀಣ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಡಿಸೋಜ, ಸಮಿತಿಯ ಮುಖ್ಯಸ್ಥ ತೇಜ್ ಕುಮಾರ್, ಸದಸ್ಯರಾದ ಕುಶಾಲಪ್ಪ,ಜಗದೀಶ್, ಇಂದುಶೇಖರ್, ವಿಲ್ಫರ್ಡ್ ಡಿ ಸೋಜಾ,ಪ್ರಭಾಕರ್, ಉಮ್ಮರ್, ಹಮೀದ್, ಪ್ರವೀಣ್ ವಿಟ್ಲ, ಹರೀಶ್ ಹಾಗೂ ಉಪ್ಪಿನಂಗಡಿ ವಲಯದ ಸದಸ್ಯರಾದ ಯತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.