






ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಪುತ್ತೂರು ವೀರಮಂಗಲ ಒಕ್ಕೂಟದ ಪರಶಕ್ತಿ ಸಂಘದ ಬೇಬಿ ಹಾಗೂ ಮಾತೃಶ್ರೀ ಸಂಘದ ಜಲಜಾಕ್ಷಿಯವರ ಪತಿ ಮೋನಪ್ಪರವರಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಸುರಕ್ಷಾ ಯೋಜನೆಯಿಂದ 8,000 ಮೊತ್ತದ ಚೆಕ್ ನ್ನು ಕೆಮ್ಮಿಂಜೆ ವಲಯಧ್ಯಕ್ಷ ಸುಂದರ ಬಲ್ಯಾಯ ವಿತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಮೋಹಿನಿ, ಒಕ್ಕೂಟದ ಕಾರ್ಯದರ್ಶಿ ರಮ್ಯಾ, ಸೇವಾ ಪ್ರತಿನಿಧಿ ಯಮುನಾ ಉಪಸ್ಥಿತರಿದ್ದರು.







