ಬಡಗನ್ನೂರು: ಸುಳ್ಯ ಪದವು ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ “ಗದ್ದೆಯಲೊಂದು ದಿನ ಭತ್ತದ ಕೃಷಿ” ಕಾರ್ಯಕ್ರಮವು ಸರ್ವೋದಯ ವಿದ್ಯಾ ಸಂಸ್ಥೆಯ ಶಿಕ್ಷಕ- ರಕ್ಷಕ ಸಂಘ ಹಾಗೂ ಕುಳ ತರವಾಡು ಮನೆ ಇವರ ಸಹಯೋಗದಲ್ಲಿ ಜು.23 ರಂದು ನಡೆಯಿತು.
“ಗದ್ದೆಯಲ್ಲಿ ಒಂದು ದಿನ ಭತ್ತದ ಕೃಷಿ ವಿಶೇಷ” ಕಾರ್ಯಕ್ರಮವನ್ನು ಕುಳ ತರವಾಡು ಮನೆಯಲ್ಲಿ ದಾಮೋದರ ಎನ್ ಎ ಕುಳ ದೀಪ ಪ್ರಜ್ವಲನ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಮನೋಹರ್ ನಿಡಿಯಡ್ಕ ಅವರನ್ನು ಸ್ವಾಗತಿಸಿ ತರವಾಡು ಮನೆಯಲ್ಲಿರುವ ಪ್ರಾಚೀನ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಘ ಅಧ್ಯಕ್ಷ ಚನಿಯಪ್ಪ ನಾಯ್ಕ ನಿಡಿಯಡ್ಕಇವರು ವಿದ್ಯಾರ್ಥಿಗಳಿಗೆ ಕುಲ ತರವಾಡು ಮನೆಯ ಇತಿಹಾಸ ಹಾಗೂ ತುಳುನಾಡಿನ ಸಂಧಿಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಶ್ರೀಪತಿ ಕಡಂಬಳಿತ್ತಾಯ ಭತ್ತದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಂಸ್ಥೆಯ ಸಂಚಾಲಕ ಮಹದೇವ ಭಟ್ಟ ಕೊಲ್ಯಾ ಆಧುನಿಕತೆ ಹಾಗೂ ಭತ್ತದ ಕೃಷಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ಗುಳ್ಳಿ ಹಾಗೂ ಸುಂದರಿ ಇವರುಗಳು ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ನೇಜಿ ನಾಟಿ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಿ, ವಿದ್ಯಾರ್ಥಿಗಳಿಗೆ ನೇಜಿ ನಾಟಿ ಮಾಡುವ ಬಗ್ಗೆ ಪ್ರೇರೇಪಿಸಿದರು.ತುಳುನಾಡಿನ ಜಾನಪದ ಕ್ರೀಡೆ “ಕೋಣಗಳ ಓಟ” ಗದ್ದೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಪೋಷಕರಿಗೂ ಮನರಂಜನೆ ನೀಡಿದ್ದು, ತದನಂತರ ವಿದ್ಯಾರ್ಥಿಗಳಿಗೆ ಪೋಷಕರಿಗೆ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಕೆಸರಿನಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಿನೇಶ್ ರೈ ಕುತ್ಯಾಳ, ಸುಬ್ರಹ್ಮಣ್ಯ ಭಟ್ ಮರದಮೂಲೆ ಮಾಧವ ನಾಯಕ್ ಇಂದಾಜೆ, ಗುರುಕಿರಣ್ ರೈ ಎಂ.ಜಿ. ಸುಬ್ರಮಣ್ಯಭಟ್ ಪಾದಗದ್ದೆ, ಸುರೇಶ್ ಸತ್ಯ ಸಾಯಿ ನಿಲಯ ನಾಕೂರು, ಬಾಬು ಪೂಜಾರಿ ಬ್ರಹ್ಮಶ್ರೀ ನಿಲಯ ನಾಕೂರು ಆನಂದ ಪಾದೆಗದ್ದೆ ಮಹೇಶ ಪಾದೆಗದ್ದೆ ,ಪ್ರಕಾಶ್ ಮರದಮೂಲೆ, ವಿನಯ ಗೌಡ ಬೋಳುಗುಡ್ಡೆ, ಅಶೋಕ್ ಛಾಯಾಚಿತ್ರಗ್ರಾಹಕರು ಮುಂತಾದ ಗಣ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಶ್ರೀ ವಿಷ್ಣುಕಲಾ ಸಂಘ ಕುಳದಪಾರೆ ಹಾಗೂ ನವಚೇತನ ಯುವಕ ಮಂಡಲ ಪಾದೆಗದ್ದೆ ಇದರ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಹಕರಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯ ಸುಖೇಶ್ ರೈ ಅವರ ಮಾರ್ಗದರ್ಶನದಲ್ಲಿ ಶಿಕ್ಷಕ ವೃಂದದವರ ಸಹಕಾರದೊಂದಿಗೆಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.