ಉಪ್ಪಿನಂಗಡಿ: ದಕ್ಷಿಣಕಾಶಿ ಎಂದು ಪ್ರಸಿದ್ದವಾಗಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾರಧಾರಾ ನದಿಗಳೆರಡು ಶ್ರೀ ಸಹಸ್ರಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಪುನರಪಿ ಸಂಗಮಿಸಿ ಆಗುವ ಪವಿತ್ರ ಸಂಗಮವು ಮಂಗಳವಾರ ನಡೆಯಿತು.
ಇದಕ್ಕೂ ಮೊದಲು ಶಾಸಕರಾದ ಅಶೋಕ್ ಕುಮಾರ್ ರೈಯವರು ಸಮಸ್ತ ಭಕ್ತಾದಿಗಳ ಪರವಾಗಿ ನದಿ ನೀರಿಗೆ ಬಾಗಿನ ಅರ್ಪಿಸಿ ಪ್ರಾರ್ಥಿಸಿದರು. ನದಿಗಳ ಸಂಗಮವಾದಾಗ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಹರೀಶ್ ಉಪಾಧ್ಯಾಯರವರ ನೇತೃತ್ವದಲ್ಲಿ ಅರ್ಚಕರ ತಂಡದ ವೇದ ಮಂತ್ರ ಘೋಷದೊಂದಿಗೆ ಗಂಗಾ ಪೂಜೆ ನಡೆಯಿತು. ಗಂಗಾಮಾತೆಗೆ ಜೈಕಾರ ಹಾಕುತ್ತಾ ಭಕ್ತಾದಿಗಳು ತೀರ್ಥ ಸಂಪ್ರೋಕ್ಷಣೆ ಗೈದರು. ಹಲವರು ತೀರ್ಥ ಸ್ನಾನ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯರಾದ ದೇವಿದಾಸ್ ರೈ ಬೆಳ್ಳಿಪ್ಪಾಡಿ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ , ರಮ್ಯಾ ರಾಜಾರಾಮ್, ತಹಶೀಲ್ದಾರ್ ಪುರಂದರ ಹೆಗ್ಡೆ, ಹಿಂದೂ ಪರ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ಕರುಣಾಕರ ಸುವರ್ಣ, ಉಮಾನಾಥ ಶೆಟ್ಟಿ ಪೆರ್ನೆ, ಸತೀಶ್ ಶೆಟ್ಟಿ ಹೆನ್ನಾಳ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಶರತ್ ಕೋಟೆ ಮೊದಲಾದವರು ಉಪಸ್ಥಿತರಿದ್ದರು.