





ಉಪ್ಪಿನಂಗಡಿ: ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಉಪ್ಪಿನಂಗಡಿಯ ಕೆಲವು ಭಾಗದಲ್ಲಿ ಹಲವು ಹಾನಿಗಳುಂಟಾಗಿವೆ.



34 ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಕಾಲನಿಯಲ್ಲಿ ಧರೆ ಕುಸಿದಿದ್ದು, ಇಲ್ಲಿನ ನಿವಾಸಿಗಳಿಗೆ ಅಪಾಯದ ಸಾಧ್ಯತೆ ಎದುರಾಗಿದೆ. ಮಠದ ಹಿರ್ತಡ್ಕದಲ್ಲಿ ಸರಕಾರಿ ಶಾಲಾ ಹಿಂಬದಿಯ ಧರೆ ಕುಸಿದಿದ್ದು, ಶಾಲಾ ಕಟ್ಟಡ ಅಪಾಯದಲ್ಲಿದೆ. ಹಿರ್ತಡ್ಕ ಎಂಬಲ್ಲಿ ಉಮೈಮಾ ಎಂಬವರ ಮನೆಯ ಹಿಂಬದಿಗೆ ಪಕ್ಕದ ಮನೆಯವರ ಆವರಣಗೋಡೆ ಕುಸಿದು ಬಿದ್ದು ಹಾನಿಯಾಗಿದೆ. ಕೊಪ್ಪಳದಲ್ಲಿ ಮನೆಯೊಂದರ ಶೌಚಾಲಯ ಕುಸಿದು ಬಿದ್ದು ಹಾನಿಯಾಗಿದೆ. 34 ನೆಕ್ಕಿಲಾಡಿ ಗ್ರಾಮದ ಸುಭಾಷ್ನಗರ ಎಂಬಲ್ಲಿ ಮನೆಯೊಂದು ಕುಸಿಯುವ ಹಂತದಲ್ಲಿದೆ.






ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ- ಬೆಳಾಲು- ಉಜಿರೆ ರಸ್ತೆಯಲ್ಲಿ ಧರೆ ಕುಸಿತವಾಗಿದೆ. ಮಳೆ ಹಾನಿಯ ಕೆಲವು ಪ್ರದೇಶಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಭಾಷ್ ನಗರಕ್ಕೆ ಹಿಂದೂಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೂಡಾ ಭೇಟಿ ನೀಡಿದ್ದಾರೆ.









