ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಇದರ ವತಿಯಿಂದ ದೇವಳದ ವಠಾರದಲ್ಲಿ ಪೂಜಿಸಲ್ಪಡುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ವರ್ಷಂಪ್ರತಿಯಂತೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು ಆ.4ರಂದು ಸ್ಪರ್ಧೆಗಳಿಗೆ ಚಾಲನೆ ನೀಡಲಾಗುವುದು.
ಆ.4ರಂದು ಅಂದ ಬರಹ ಸ್ಪರ್ಧೆಯು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ಗಂಟೆ 9.30ಕ್ಕೆ ನಡೆಯಲಿದೆ. ಆ.11ಕ್ಕೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ಗಂಟೆ 9.30ರಿಂದ ಚದುರಂಗ ಸ್ಪರ್ಧೆ ನಡೆಯಲಿದೆ. ಆ.18ಕ್ಕೆ ಬೆಳಿಗ್ಗೆ ಗಂಟೆ 9.30ಕ್ಕೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಆ.25ಕ್ಕೆ ಗಣೇಶೋತ್ಸವದ ಸಭಾ ವೇದಿಕೆಯಲ್ಲಿ ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ. ಸೆ.1ಕ್ಕೆ ಗಣೇಶೋತ್ಸವ ಸಭಾ ವೇದಿಕೆಯಲ್ಲಿ ಭಗವದ್ಗೀತಾ ಕಂಠಪಾಠ ಸ್ಪರ್ಧೆ ನಡೆಯಲಿದೆ. ಸೆ.7ರಮದು ದೇವಳದ ಸಭಾ ಭವನದಲ್ಲಿ ಬೆಳಗ್ಗೆ ಗಂಟೆ 10ರಿಂದ ರಂಗೋಲಿ ಸ್ಪರ್ಧೆ ಮತ್ತು ಸಭಾಭವನದ ಮಹಡಿಯಲ್ಲಿ ಗಣೇಶ ವಿಗ್ರಹ ರಚನೆ ಸ್ಪರ್ಧೆ ನಡೆಯಲಿದೆ. ವಿವಿಧ ಸ್ಪರ್ಧೆಗಳಿಗೆ ಭಾಗವಹಿಸುವವರು ಅರ್ಧ ಗಂಟೆ ಮುಂಚಿತವಾಗಿ ಆಯಾ ಸ್ಥಳದಲ್ಲಿ ಹಾಜರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ 94482822651, 9743704849, 9448870106 ಸಂಪರ್ಕಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.