




ಆಲಂಕಾರು: ಶ್ರೀ ಭಾರತಿ ವಿದ್ಯಾಸಂಸ್ಥೆ, ಆಲಂಕಾರಿನ ಆಂಗ್ಲ ಮಾಧ್ಯಮ ವಿಭಾಗದ 8 ನೇ ತರಗತಿಯ ವಿದ್ಯಾರ್ಥಿನಿ ಅಶ್ವಿಕಾ ಎಸ್ ರವರು ವಿದ್ಯಾಭಾರತಿ ಕರ್ನಾಟಕ ನಡೆಸಿದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯ ಬಾಲವರ್ಗದ ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜು
30 ರಂದು ಸರಸ್ವತಿ ವಿದ್ಯಾಲಯ ಕಡಬ ದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಬಹುಮಾನ ಬಂದಿದ್ದು ಸಂಸ್ಥೆಯ ಶಿಕ್ಷಕಿಯರಾದ ಅನಿತಾ ಹಾಗೂ ಜಯಶ್ರೀ ತರಬೇತಿ ನೀಡಿದ್ದರು. ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆ ಆ.8 ರಂದು ಸರಸ್ವತಿ ವಿದ್ಯಾಲಯ, ಸಿದ್ದಾಪುರ ದಲ್ಲಿ ನಡೆಯುವ ಯೋಗ ಸ್ಪರ್ದೆಯಲ್ಲಿ ಭಾಗವಹಿಸಲಿದ್ದಾರೆ.










