ವಗ್ಗ ಸರಕಾರಿ ಪ್ರೌಢಶಾಲೆಯಲ್ಲಿ ಮೀಯಾವಕಿ ಅರಣ್ಯ ರಚನೆ

0

ಪುತ್ತೂರು: ಕಾವಲಪಡುರು ವಗ್ಗ ಪ್ರೌಢಶಾಲಾ ಮತ್ತು ಪರಿಸರವಾದಿ ಜಿತ್ ಮಿಲನ್ ರವರ ವನ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಸಹಕಾರದೊಂದಿಗೆ ಮಿಯಾವಕಿ ಅರಣ್ಯವನ್ನು ರಚಿಸಲಾಯಿತು.

ಸಂಸ್ಥೆಯ ಖಾಲಿ ಜಾಗದಲ್ಲಿ ವಿವಿಧ ಜಾತಿಯ ಹಣ್ಣುಗಳ ಮತ್ತು ನೆರಳಿನ ಸುಮಾರು 150 ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಿ ಜಿನರಾಜ ಆರಿಗಾ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಊರಿನ ಪರಿಸರ ಪ್ರೇಮಿಗಳಾದ ಸ್ನೇಕ್ ಕಿರಣ್ ,ಅಹಮದ್ ತಾಹ ತನ್ವೀರ್ ,ಹಾರಿಸ್ ಬಾಂಬಿಲ ,ಅಶ್ರಫ್ ಬಾಂಬಿಲ ‘, ಜೆನಿತ್ ವಾಚ್ ಇದರ ಮಾಲಕ ಇರ್ಷಾದ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಸಹಕಾರ ನೀಡಿದರು .

ಸಂಸ್ಥೆಯ ಕನ್ನಡ ಭಾಷಾ ಶಿಕ್ಷಕಿ ಲೈಲಾ ಪರ್ವೀನ್ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು ಮತ್ತು ಸಿಬ್ಬಂದಿ ವರ್ಗದ ಪೂರ್ಣ ಸಹಕಾರದೊಂದಿಗೆ ಮಿಯಾವಕಿ ಕಲ್ಪನೆಯ ಅರಣ್ಯವನ್ನು ರಚಿಸಲಾಗಿದೆ. ಮುಖ್ಯ ಶಿಕ್ಷಕ ಶೇಕ್ ಆದಂ ಸಾಹೇಬ್ ನೆಲ್ಯಾಡಿ ಸಹಕರಿಸಿದರು.

LEAVE A REPLY

Please enter your comment!
Please enter your name here