ಪುತ್ತೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಆಗಸ್ಟ್ 24,25 ರಂದು ಮೈಸೂರಿನಲ್ಲಿ ಆಯೋಜಿಸುವ ಕ್ಯಾಂಪಸ್ ಕಾನ್ಫರೆನ್ಸ್ ಭಾಗವಾಗಿ SSF ದ.ಕ ಈಸ್ಟ್ ಜಿಲ್ಲಾ ಸಮಿತಿಯ ಕ್ಯಾಂಪಸ್ ವಿದ್ಯಾರ್ಥಿಗಳ ಸಂಗಮ ಮೈ ಎಥಿಕ್ಸ್ ಜುಲೈ 28ರಂದು ಉಪ್ಪಿನಂಗಡಿ ಕರ್ವೇಲ್ ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್ ನಲ್ಲಿ ನಡೆಯಿತು.
ಮರ್ಹೂಂ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್ ರವರ ಝಿಯಾರತ್‌ನೊಂದಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಎಫ್.ಎಚ್ ಮುಹಮ್ಮದ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಮಸ್ಜಿದ್ ಇಮಾಂ ಜಬ್ಬಾರ್ ಝೈನಿ ಉಸ್ತಾದರು ಉದ್ಘಾಟಿಸಿದರು. ಜಿಲ್ಲಾ ವ್ಯಾಪ್ತಿಯ ಆರು ಡಿವಿಷನ್ ಗಳ ಇನ್ನೂರರಷ್ಟು ಆಯ್ದ ಪ್ರತಿನಿಧಿಗಳು ಭಾಗವಹಿಸಿದರು. ಎಸ್.ವೈ.ಎಸ್ ಕರ್ನಾಟಕ ರಾಜ್ಯ ಆರ್ಗನೈಝಿಂಗ್ ಕಾರ್ಯದರ್ಶಿ ಕೆ.ಎಂ ಸಿದ್ದೀಖ್ ಮೋಂಟುಗೋಳಿ “ನನ್ನ ರೋಲ್ ಮಾಡಲ್” ಎಂಬ ವಿಷಯದಲ್ಲೂ ಖ್ಯಾತ ಟ್ರೈನರ್ ನಾಸಿರ್ ಮಾಸ್ಟರ್ ಅಡ್ಡೂರು “ನನ್ನ ನಂಬಿಕೆ” ಎಂಬ ವಿಷಯದಲ್ಲೂ ವಿಷಯ ಮಂಡಿಸಿದರು. ಕರಿಯರ್ ಗೈಡನ್ಸ್ ಚರ್ಚಾ ವೇದಿಕೆಗೆ ಟ್ರೈನರ್ ನಾಸಿರ್ ಮಾಸ್ಟರ್ ಅಡ್ಡೂರು ನೇತೃತ್ವ ನೀಡಿದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶಿಹಾಬುರ್ರಹ್ಮಾನ್ ಹಸನ್’ನಗರ ಸ್ವಾಗಿತಿಸಿ, ವಂದಿಸಿದರು.