ರೂ.123.68 ಕೋಟಿ ವ್ಯವಹಾರ-ರೂ.63.14 ಲಕ್ಷ ನಿವ್ವಳ ಲಾಭ
ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.123 ಕೋಟಿ ವ್ಯವಹಾರ ನಡೆಸಿ ರೂ.63.14 ಲಕ್ಷ ನಿವ್ವಳ ಲಾಭಗಳಿಸಿದೆ.ಶೇ.99.66 ಸಾಲ ವಸೂಲಾತಿಯಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ಸತತ 13 ವರ್ಷಗಳಿಂದ ಎ ಶ್ರೇಣಿ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ ಅವರು ಸಂಘದ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಬೆಳಿಯೂರುಕಟ್ಟೆಯಲ್ಲಿರುವ ಸಂಘದ ನೂತನ ಕೇಂದ್ರ ಕಚೇರಿ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷರು, ಸಂಘವು ವರ್ಷಾಂತ್ಯದಲ್ಲಿ ಒಟ್ಟು 2,634 ಸದಸ್ಯರಿಂದ ರೂ. 2,25,15,700 ಪಾಲು ಬಂಡವಾಳ ಹೊಂದಿದೆ.ರೂ.8,24,44,915.63 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ವರದಿ ವರ್ಷದಲ್ಲಿ ಸಂಘವು ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.22,82,88,222 ಸಾಲ ವಿತರಿಸಿದ್ದು ರೂ.19,66,15,349 ಹೊರಬಾಕಿ ಸಾಲವಾಗಿರುತ್ತದೆ.ರೂ.6,99,501 ಸಾಲ ಸುಸ್ತಿಯಾಗಿರುತ್ತದೆ.ಸಾಲ ವಸೂಲಾತಿಯಲ್ಲಿ ಸಂಘವು ಶೇ.99.66 ಸಾಧನೆ ಮಾಡಿದೆ.ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯAತೆ ವಿಂಗಡಿಸಲಾಗಿದೆ ಎಂದರು.
ಡಿವಿಡೆಂಡ್ ಕೊಡುಗೆ ನೀಡಿದ ಸದಸ್ಯರು:
ವರದಿ ವರ್ಷದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನಿಗದಿಪಡಿಸಲಾಗಿದೆ.ಆದರೆ ಸಂಘಕ್ಕೆ ಜಾಗ ಖರೀದಿ, ಕೇಂದ್ರ ಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಸೇರಿದಂತೆ ಸುಮಾರು ರೂ.2 ಕೋಟಿಗೂ ಅಧಿಕ ಖರ್ಚಾಗಿದೆ. ಈಗ ಸಂಘಕ್ಕೆ ಸಾಲದ ಹೊರೆಯಿದೆ.ಸಂಘದ ಹಿತದೃಷ್ಠಿಯಿಂದ ಸದಸ್ಯರು ಈ ಹಿಂದೆ ಸಂಘದ ನೂತನ ಕಚೇರಿ ನಿರ್ಮಾಣಕ್ಕೆ ಜಾಗ ಖರೀದಿಗೆ ತಮ್ಮ ಡಿವಿಡೆಂಡ್‌ನ ಶೇ.50ರಷ್ಟನ್ನು ಕೊಡುಗೆ ನೀಡಿದಂತೆ ಈ ಬಾರಿಯೂ ತಮ್ಮ ಡಿವಿಡೆಂಡ್‌ನ್ನು ಕೊಡುಗೆ ನೀಡಿ ಸಹಕರಿಸುವಂತೆ ಅಧ್ಯಕ್ಷರು ವಿನಂತಿಸಿದರು.ಸದಸ್ಯರು ಉದಾರ ಮನಸ್ಸಿನಿಂದ ತಮ್ಮ ಡಿವಿಡೆಂಡ್‌ನ ಮೊತ್ತವನ್ನು ಸಂಘಕ್ಕೆ ನೀಡಿದರೆ ಸಂಘದ ಸಾಲದ ಹೊರೆ ಕಡಿಮೆಯಾಗಲಿದೆ.ಹೊಸ್ಮಠ ಸಹಕಾರಿ ಸಂಘದಲ್ಲಿ ಸದಸ್ಯರು ಕಟ್ಟಡಕ್ಕಾಗಿ ಡಿವಿಡೆಂಡ್ ಕೊಡುಗೆ ನೀಡಿದ್ದು ಬಲ್ನಾಡು ಗ್ರಾಮಸ್ಥರೂ ಕೊಡುಗೆ ನೀಡಿ ಸಹಕರಿಸುವಂತೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ವಿನಂತಿಸಿದರು.ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಚಪ್ಪಾಳೆ ತಟ್ಟಿ ಒಪ್ಪಿಗೆ ಸೂಚಿಸಿದರು.
ಹಳೆ ಕಟ್ಟಡದ ದಾಖಲೆ ಪತ್ರ ಸರಿಪಡಿಸಲು ಸದಸ್ಯರ ಆಗ್ರಹ ತೀವ್ರ ಚರ್ಚೆ:
ಕಟ್ಟಡ ಬಾಡಿಗೆಗೆ ನೀಡುವ ವಿಚಾರದಲ್ಲಿ ಚರ್ಚೆ: ಸಂಘದ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಬಾಡಿಗೆಗೆ ನೀಡುವಂತೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿAದ ನಿರ್ದೇಶನ ಬಂದಿರುವುದಾಗಿ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ತಿಳಿಸಿದರು.ಈ ಸಂದರ್ಭದಲ್ಲಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಹಿರಿಯರು ಯಾವುದೇ ಸ್ವಾರ್ಥ ಇಲ್ಲದೆ ಕಟ್ಟಿ ಬೆಳೆಸಿದ ಸಂಸ್ಥೆಯ ಕಟ್ಟಡದ ದಾಖಲೆ ಸರಿಯಲ್ಲದೇ ಇದ್ದು ಅದರ ದಾಖಲೆ ಪತ್ರಗಳನ್ನು ಸಂಘದ ಹೆಸರಿನಲ್ಲಿ ಅತೀ ಶೀಘ್ರವಾಗಿ ಮಾಡಿಕೊಳ್ಳಬೇಕಾಗಿದ್ದು, ಇದರ ಬಗ್ಗೆ ಮಹಾಸಭೆಯ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.ಅಧ್ಯಕ್ಷ ಸತೀಶ್ ಗೌಡ ಮಾತನಾಡಿ, ಇದರ ಬಗ್ಗೆ ಗಮನಹರಿಸಿ ಶೀಘ್ರವಾಗಿ ದಾಖಲೆಪತ್ರಗಳನ್ನು ಸರಿಪಡಿಸಲಾಗುವುದು.ಮಾಜಿ ಅಧ್ಯಕ್ಷರ ಹೆಸರಿನಲ್ಲಿರುವ ದಾಖಲೆಯನ್ನು ಸರಿಪಡಿಸಿಕೊಳ್ಳಲು ಅವರು ಒಪ್ಪಿಗೆ ನೀಡಿದ್ದು ಅದನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು. ಎಂದು ತಿಳಿಸಿದರು.ನಿರ್ದೇಶಕ ಪ್ರಕಾಶ್ಚಂದ್ರ ಆಳ್ವ ಮಾತನಾಡಿ, ಆ ಜಾಗವನ್ನು ನಾನು ಸರ್ವೆ ನಡೆಸಿದ್ದು ಜಾಗದಲ್ಲಿ ಸ್ವಲ್ಪ ಭಾಗ ನನ್ನ ಅಣ್ಣನ ಹೆಸರಿನಲ್ಲಿದೆ.ಅಣ್ಣ ದಿವಂಗತರಾಗಿದ್ದು ಅವರ ಮಕ್ಕಳು ಕೇಳಿದರೆ ನೀಡಬೇಕು ಎಂದರು.ಅಧ್ಯಕ್ಷರು, ನಿರ್ದೇಶಕರ ಹೇಳಿಕೆ ಭಿನ್ನವಾಗಿದ್ದು ಇದರಲ್ಲಿ ಗೊಂದಲವಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.ಹಳೆಯ ಕಟ್ಟಡವನ್ನು ಬಾಡಿಗೆಗೆ ನೀಡುವುದಕ್ಕೆ ನಮ್ಮ ವಿರೋಧವಿಲ್ಲ.ಹಾಗೆಯೇ ಬಿಡುವುದಕ್ಕೆ ನಮ್ಮ ವಿರೋಧವಿದೆ ಎಂದು ಮುರಳಿಕೃಷ್ಣ ತಿಳಿಸಿದರು. ಪ್ರಥಮವಾಗಿ ಸರ್ವೆ ನಡೆಸಬೇಕು. ನಂತರ ಬಾಡಿಗೆಗೆ ನೀಡಬೇಕು. ನಮಗೆ ಸಿಗುವ ಜಾಗ ನಮಗೆ ದೊರೆಯಬೇಕು.ಅಳತೆ ಮಾಡಿದ ಬಳಿಕ ಜಾಗ ನಮ್ಮದಾಗಿದ್ದರೆ ಆ ಜಾಗಕ್ಕೆ ಸಂಘವು ಮಾರುಕಟ್ಟೆ ಬೆಲೆ ನೀಡಬಹುದಾ ಎಂದು ನಿರ್ದೇಶಕ ಪ್ರಕಾಶ್ಚಂದ್ರ ಆಳ್ವ ತಿಳಿಸಿದರು.ಇದಕ್ಕೆ ಮಹಾಸಭೆ ಒಪ್ಪಿಗೆ ಅಗತ್ಯ ಎಂದು ಅಧ್ಯಕ್ಷರು ತಿಳಿಸಿದರು.ಮಾರುಕಟ್ಟೆ ಬೆಲೆ ನೀಡಿದರೆ ಅದರಿಂದ ಸಂಘಕ್ಕೆ ಬರುವ ಆದಾಯದ ಬಗ್ಗೆಯೂ ಯೋಚಿಸಬೇಕು ಎಂದು ಸದಸ್ಯರು ತಿಳಿಸಿದರು.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಂಘದ 5 ಸೆಂಟ್ಸ್ ಜಾಗವು ಮಾಜಿ ಅಧ್ಯಕ್ಷರ ಹೆಸರಿನಲ್ಲಿದ್ದು ಅದನ್ನು ಸರಿಪಡಿಸಲು ನಾನು ಯಾವುದೇ ಸಮಯದಲ್ಲಿ ಸಿದ್ದ ಎಂದು ಅವರು ಮಾತು ಕೊಟ್ಟಿರುವುದಾಗಿ ತಿಳಿಸಿದರು.ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರಕಾರಿ ಬೆಲೆಯಲ್ಲಿ ಖರೀದಿಸಲು ನನ್ನ ಒಪ್ಪಿಗೆಯಿರುವುದಾಗಿ ಮುರಳಿಕೃಷ್ಣ ತಿಳಿಸಿದರು.ಈ ಬಗ್ಗೆ ಮಾತುಕತೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು.ಈ ಬಗ್ಗೆ ಸಭೆಯಲ್ಲಿ ದೀರ್ಘ ಚರ್ಚೆ ನಡೆದಿದ್ದು ಕೊನೆಗೆ ಹಳೆಯ ಕಟ್ಟಡವನ್ನು ಬಾಡಿಗೆಗೆ ನೀಡುವುದು, ಗೊಂದಲದಲ್ಲಿರುವ ಸಂಘದ ಜಾಗವನ್ನು ಅಳತೆ ಮಾಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ಪ್ರವೀಣ್‌ಚಂದ್ರ ಆಳ್ವ ಎ.ಯಂ., ಪ್ರಕಾಶ್ಚಂದ್ರ ಆಳ್ವ, ನವೀನ್ ಕರ್ಕೇರ, ಅಂಬ್ರೋಸ್ ಡಿ’ಸೋಜ, ಸೀತಾರಾಮ, ವಿನಯ, ಪ್ರಮೋದ್, ಸುರೇಶ್ ಹಾಗೂ ವಲಯ ಮೇಲ್ವಿಚಾರಕ ವಸಂತ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅಧ್ಯಕ್ಷ ಸತೀಶ್ ಗೌಡ ಸ್ವಾಗತಿಸಿದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು.ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸಿಬ್ಬಂದಿಗಳಾದ ಶುಭ ಕೆ., ಪುಷ್ಪಾ ಎಂ., ಕೀರ್ತನ್ ಶೆಟ್ಟಿ, ಬಿಂದಿಯಾ ಹಾಗೂ ವಿನೋದ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.