ಗೋಳಿತ್ತೊಟ್ಟು: ಒಕ್ಕಲಿಗ ಸ್ವಸಹಾಯ ಸಂಘದ ವತಿಯಿಂದ ವನಮಹೋತ್ಸವ

0

ನೆಲ್ಯಾಡಿ: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವ ಪ್ರಯುಕ್ತ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಗೋಳಿತ್ತೊಟ್ಟು, ಒಕ್ಕಲಿಗ ಗ್ರಾಮ ಸಮಿತಿ, ಮಹಿಳಾ ಸಂಘ, ಯುವ ಸಂಘ ಗೋಳಿತ್ತೊಟ್ಟು, ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಹಾಗೂ ಆಯುಷ್ಮಾನ್ ಆರೋಗ್ಯ ಕೇಂದ್ರ ಗೋಳಿತ್ತೊಟ್ಟು ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಆ.1ರಂದು ಗೋಳಿತ್ತೊಟ್ಟು ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ನಡೆಯಿತು.


ಗೋಳಿತ್ತೊಟ್ಟು ಆಂಜರ ಜ್ಯೋತಿರ್ ವೈದ್ಯ ಡಾ.ರಾಮಕೃಷ್ಣ ಭಟ್ ಅವರು ಉದ್ಘಾಟಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಗೋಳಿತ್ತೊಟ್ಟು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಅನಿಲ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ ಗೌಡ, ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಒಕ್ಕಲಿಗ ಸ್ವಸಹಾಯ ಸಂಘದ ನೆಲ್ಯಾಡಿ ವಲಯ ನಿರ್ದೇಶಕ ರವಿಚಂದ್ರ ಹೊಸವೊಕ್ಲು, ನೆಲ್ಯಾಡಿ ವಲಯಾಧ್ಯಕ್ಷ ವಸಂತ ಬಿಜೇರು, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ಕೆರ್ನಡ್ಕರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ ಕೆಯ್ಯೂರು ಉಪಸ್ಥಿತರಿದ್ದರು.


ಅರಣ್ಯ ವೀಕ್ಷಕ ದಿನೇಶ್ ಕಲ್ಲಡ್ಕ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲೀನಾ ಕೆ.ಎಂ., ಸಮುದಾಯ ಆರೋಗ್ಯಾಧಿಕಾರಿ ಸುಧಾ, ಆಶಾ ಕಾರ್ಯಕರ್ತೆಯರಾದ ಜಯಮಾಲಾ, ಶೇಷವೇಣಿ ಮತ್ತಿತರರು ಉಪಸ್ಥಿತರಿದ್ದರು. ನೆಲ್ಯಾಡಿ ವಲಯ ಪ್ರೇರಕ ಪರಮೇಶ್ವರ ಗೌಡ ಸ್ವಾಗತಿಸಿದರು. ಮೇಲ್ವಿಚಾರಕಿ ಸುಮಲತಾ ನಿರೂಪಿಸಿದರು. ಚೈತ್ರಾ ಪ್ರಾರ್ಥಿಸಿದರು. ತ್ರಿವೇಣಿ ಕುದ್ಕೋಳಿ ಶ್ಲೋಕ ಪಠಿಸಿದರು.

100ಕ್ಕೂ ಹೆಚ್ಚು ಸಸಿ ವಿತರಣೆ:
ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಸುಮಾರು 100ಕ್ಕೂ ಹೆಚ್ಚು ಸಸಿಗಳ ವಿತರಣೆ ಮಾಡಲಾಯಿತು. ಗೋಳಿತ್ತೊಟ್ಟು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಅನಿಲ ಅವರು ಕೊಡುಗೆಯಾಗಿ ನೀಡಿದ ಆಯುಷ್ಮಾನ್ ಆರೋಗ್ಯ ಕೇಂದ್ರ ಗೋಳಿತ್ತೊಟ್ಟು ಇದರ ದಾರಿಸೂಚಕ ಫಲಕವನ್ನು ಅನಾವರಣಗೊಳಿಸಲಾಯಿತು.

LEAVE A REPLY

Please enter your comment!
Please enter your name here